ಹುಬ್ಬಳ್ಳಿ: ನಗರದಲ್ಲಿಂದು ಮಾಧ್ಯಮ ಗೋಷ್ಟಿ ನಡೆಸಿ ಮಾತಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ರಾಜ್ಯದ ಆರ್ಥಿಕ ಸ್ಥಿತಿ ಹಳ್ಳ ಹಿಡಿದಿದೆ ಕೆರೆ ಹಿಡಿದಿದೆಯೋ ಅಂತ ಕೇಂದ್ರ ಸಚಿವ ಪ್ರ ಲ್ಹಾದ್ ಜೋಶಿ ವ್ಯಾಖ್ಯಾನಿಸಬೇಕು, ಆದರೆ ಅದಕ್ಕೂ ಮೊದಲು ಅವರು ನಮ್ಮ ದೇಶದ ಮೇಲೆ ಸಾಲ ಎಷ್ಟಿದೆ ಅಂತ ಹೇಳಲಿ, ಮಾಧ್ಯಮದವರು ಯಾಕೆ ಈ ಪ್ರಶ್ನೆಯನ್ನು ಜೋಶಿಯವರಿಗೆ ಕೇಳಬಾರದು ಎಂದು ತಿಳಿಸಿದರು.
ಕಾರವಾರದಲ್ಲಿ ಸಂಸದ ಅನಂತಕುಮಾರ್ ಹೆಗಡೆ ಸಿದ್ದರಾಮಯ್ಯ ಸರ್ಕಾರ ದಿವಾಳಿಯೆದ್ದಿದೆ, ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸಹ ದುಡ್ಡಿಲ್ಲ, ಮಟ್ಕಾದಲ್ಲಿ ಬರೆಯುವ ಚೀಟಿಗೆ ಬೆಲೆಯಿದೆ, ಒಂದು ರೂಪಾಯಿಗೆ ಅವರು 80 ರೂ. ಕೊಡುತ್ತಾರೆ, ಆದರೆ ಸಿದ್ದರಾಮಯ್ಯ ಕೇಂದ್ರಕ್ಕೆ ಬರೆಯುವ ಪತ್ರಗಳಿಗೆ ಅಷ್ಟು ಬೆಲೆಯೂ ಇಲ್ಲ ಎಂದು, ಹಿಂದೂಗಳ ತೆರಿಗೆ ಹಣವನ್ನು ಮಸೀದಿ ಚರ್ಚ್ ಗಳಿಗೆ ಕೊಡುತ್ತಾರೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದರು.
ಚುನಾವಣೆ ಹತ್ತಿರ ಬಂದಾಗಲೆಲ್ಲ ಹೆಗಡೆ ಹಿಂದೂ-ಮುಸ್ಲಿಂ ಶುರುಮಾಡುತ್ತಾರೆ, ನಮ್ಮ ದೇಶದಲ್ಲಿ ಚಾರಿಟಿಗೆ ಅತಿಹೆಚ್ಚು ದಾನ ಮಾಡಿದವರು ಅಜೀಂ ಪ್ರೇಮ್ ಜೀ, 29 ಬಿಲಿಯನ್ ಡಾಲರ್ ಹಣವನ್ನು ಅವರು ದೇಣಿಗೆ ರೂಪದಲ್ಲಿ ನೀಡಿದ್ದಾರೆ, ಅವರು ಯಾವ ಸಮುದಾಯದವರು ಅಂತ ಹೆಗಡೆಗೆ ಗೊತ್ತಾ ಎಂದು ಲಾಡ್ ಪ್ರಶ್ನಿಸಿದರು.