This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Politics News

ಮಹಿಳೆಯರ ಬಗ್ಗೆ ಗೌರವವಿದೆ:ಸಿದ್ದು ಸವದಿ

ಮಹಿಳೆಯರ ಬಗ್ಗೆ ಗೌರವವಿದೆ:ಸಿದ್ದು ಸವದಿ

ನಿಮ್ಮ ಸುದ್ದಿ ಮಹಾಲಿಂಗಪುರ

ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಸ್ವಪಕ್ಷೀಯ ಸದಸ್ಯೆಯನ್ನು ಎಳೆದಾಡಿದ ವಿಚಾರಕ್ಕೆ ಸಂಬAಧಿಸಿದAತೆ ಬಿಜೆಪಿ ಶಾಸಕ ಸಿದ್ದು ಸವದಿ ಸ್ಪಷ್ಟನೆ ನೀಡಿದ್ದಾರೆ.

ಮಹಿಳೆಯರ ಬಗ್ಗೆ ಗೌರವವಿದೆ. ನಾನು ಹಿಡಿದು ಎಳೆದಾಡಿ ಅಸಭ್ಯವಾಗಿ ವರ್ತಿಸಿಲ್ಲವೆಂದು ತಿಳಿಸಿದ್ದಾರೆ.

ಬಿಜೆಪಿಗೆ ಬಹುಮತವಿದೆ. ಆದರೆ ಕಾಂಗ್ರೆಸ್‌ನವರು ನಮ್ಮ ಪಕ್ಷದ ಸದಸ್ಯರಿಗೆ ಆಮಿಷವೊಡ್ಡಿ ಕಿಡ್ನಾಪ್ ಮಾಡುವ ರೀತಿಯಲ್ಲಿ ಅನಿಷ್ಟ ರಾಜಕಾರಣಕ್ಕೆ ಮುಂದಾಗಿದ್ದರು. ಹಕ್ಕು ಮಂಡನೆಗೆ ಅವಕಾಶ ನೀಡಿಲ್ಲವೆಂದು ಮಾಜಿ ಸಚಿವೆ ಉಮಾಶ್ರೀ ಹೇಳಿದ ಮಾತು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ವಾಮ ಮಾರ್ಗದಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಪಡೆಯಲು ಮುಂದಾಗಿತ್ತು. ರಾತ್ರೋರಾತ್ರಿ ಸದಸ್ಯರನ್ನು ಅಪಹರಿಸಿತ್ತು ಎಂದು ಆರೋಪಿಸಿದರು.

ಉಮಾಶ್ರೀ ಆಡಳಿತದ ಅವಧಿಯಲ್ಲಿ ತೇರದಾಳದಲ್ಲಿ ದೌರ್ಜನ್ಯ ಮಾಡಿದ್ದಾರೆ. ಕಳೆದ ಬಾರಿಯೂ ಮಹಾಲಿಂಗಪುರದಲ್ಲಿ ನಮಗೆ ಮೆಜಾರಿಟಿ ಇದ್ದರು ಹಿಂಬಾಗಿಲ ರಾಜಕಾರಣ ಮಾಡಿದ್ದಾರೆ.

ಸ್ಥಳದಲ್ಲಿ ಪಕ್ಷದ ಪರವಾಗಿ ಮತಕ್ಕಾಗಿ ವಿಪ್ ಜಾರಿ ಮಾಡಲು ಬಾಗಿಲಲ್ಲಿ ನಿಂತಿದ್ದೇವೆ. ನಮ್ಮ ಪಕ್ಷದ ಸದಸ್ಯರು ಬಂದಾಗ ಅವರ ರಕ್ಷಣೆಗೆ ತೆರಳಿದ್ದೇವು. ಹಿಂದೆ ಯಾರೋ ನೂಕಿರಬಹುದು. ಜೋಲಿ ಹೋಗಿ ಮುಂದೆ ಬಾಗಿರಬಹುದು. ನಮ್ಮ ಮನೆಯಲ್ಲೂ ತಾಯಂದಿರು, ಸಹೋದರಿಯರು ಇದ್ದಾರೆ. ಮಹಿಳೆಯರ ಬಗ್ಗೆ ಗೌರವದಿಂದ ನಡೆದುಕೊಂಡಿದ್ದೇವೆ. ಸ್ಥಳದಲ್ಲಿನ ಸತ್ಯಾಸತ್ಯತೆ ಅರಿಯಲು ಪೊಲೀಸರಿಗೆ ಎಫ್‌ಐಆರ್‌ಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

Nimma Suddi
";