This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Politics News

ಶಿವಾಜಿ ಆದರ್ಶ ಪಾಲಿಸಿ:ಮೇಟಿ

ನಿಮ್ಮ ಸುದ್ದಿ ಬಾಗಲಕೋಟೆ

ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿ ತನ್ನದೆ ಆದ ರಾಜ್ಯ ಸ್ಥಾಪನೆ ಮಾಡಿದ ಶಿವಾಜಿ ಮಹಾರಾಜರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಮಾಜಿ ಸಚಿವ ಎಚ್.ವೈ.ಮೇಟಿ ಹೇಳಿದರು.

ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತ್ಯೋತ್ಸವದಲ್ಲಿ ಅವರು ಮಾತನಾಡಿದರು. ಶಿವಾಜಿ ರೀತಿ ನೀತಿಗಳು ನಮ್ಮ ಜೀವನಕ್ಕೆ ಮಾದರಿಯಾಗಬೇಕು ಎಂದರು.
ನಗರಸಭೆ ಮಾಜಿ ಸದಸ್ಯ ಸಂಜು ವಾಡ್ಕರ್, ಹಿಂದವಿ ಸ್ವರಾಜ ಸ್ಥಾಪಕ ಶಿವಾಜಿ ಮಹಾರಾಜ ರಾಜ ಮನೆತನದವರಲ್ಲ. ಸೈನ್ಯ ಕಟ್ಟಿ ಸಂಘಟನೆ ಮೂಲಕ ಬಲಿಷ್ಠ ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಟ ಮಾಡಿ ಹಿಂದವಿ ಸ್ವರಾಜ್ಯ ಸ್ಥಾಪನೆ ಮಾಡಿದರು ಎಂದು ಹೇಳಿದರು.

ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ್ ಹದ್ಲಿ, ಶಿವಾಜಿ ಮಹಾರಾಜರು ಎಲ್ಲಾ ಜಾತಿ ಜನಾಂಗದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದರು. ಹಿಂದೂ-ಮುಸ್ಲಿಂ ತಾರತಮ್ಯವಿಲ್ಲದೆ ೧೮ ಜನ ತಮ್ಮ ಅಂಗರಕ್ಷಕರಲ್ಲಿ ೧೨ ಜನ ಮುಸ್ಲಿಂ ಸಮಾಜಕ್ಕೆ ಸೇರಿದ ಅಂಗರಕ್ಷಕರನ್ನು ಇಟ್ಟುಕೊಂಡಿದ್ದರು. ದಲಿತರನ್ನು ಸೈನ್ಯಕ್ಕೆ ಸೇರಿಸಿದ ಮೊದಲನೆಯ ರಾಜ ಶಿವಾಜಿ ಮಹಾರಾಜರು. ಅವರ ಆದರ್ಶ, ಸಂಘಟನಾ ಚಾತುರ್ಯವನ್ನು ನಾವೆಲ್ಲ ಕೂಡಿಕೊಂಡು ಪಕ್ಷ ಬಲಪಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಬ್ಲಾಕ್ ಅಧ್ಯಕ್ಷ ಎಸ್.ಎನ್.ರಾಂಪೂರ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಎಸ್‌ಸಿ ಘಟಕದ ಅಧ್ಯಕ್ಷ ರಾಜು ಮನ್ನಿಕೇರಿ, ಮುಖಂಡರಾದ ಗಣಪತಸಾ ದಾನಿ, ವೀರೇಶ ಹುಂಡೇಕಾರ್, ವಿಜಯ ಮುಳ್ಳೂರ, ವಿಜಯಕುಮಾರ ಮುಚಖಂಡಿ, ಅನಿಲ ವಾಡಕರ, ಕಿಶೋರ ಸುರುಪುರ್, ರೇಣುಕಾ ನ್ಯಾಮಗೌಡ, ಮಂಜುಳಾ ಭುಸಾರೆ, ಮಮತಾ ಸುತಾರ್, ಅಭಿಷೇಕ್ ಹಳ್ಳಿಕೇರಿ, ಜಯರಾಜ್ ಹಾಡಿಕರ್, ಅನ್ನಪೂರ್ಣ ಗೂಗ್ಯಾಳ, ಗಂಗೂಬಾಯಿ ಚವ್ಹಾಣ, ಜಯಶ್ರೀ ಗುಳಬಾಳ, ಸಾವಿತ್ರಿ ಗೋಲಪ್ಪಗೋಳ್, ಜಯಬಾನು ಇಲಕಲ್ಲ, ಸಂಶಾದ ಗೋಡೆಸವಾರ, ಪಾರು ಲಮಾಣಿ ಇತರರು ಇದ್ದರು.

 

Nimma Suddi
";