ಸಿಂದಗಿ:ಸಿಂದಗಿ ಪೊಲೀಸರು ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳನ್ನು ಭೇದಿಸಿದ್ದು, ಒಟ್ಟು 7 ಆರೋಪಿಗಳನ್ನು ಬಂಧಿಸಿ 18.85 ಲಕ್ಷ ರೂ. ನಗದು, ಕಾರು, ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಭಾನುವಾರ ಸಿಂದಗಿ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಋಷಿಕೇಶ ಸೋನಾವಣೆ, ಕಳೆದ ೆ.8ರಂದು ಪಟ್ಟಣದ ಯಂಕಂಚಿ ಬೈಪಾಸ್ ಬಳಿ ಮೋಟರ್ ಸೈಕಲ್‌ನೊಂದಿಗೆ ಸಂಶಯಾಸ್ಪದವಾಗಿ ಹೊರಟಿದ್ದ ನಾಲ್ವರನ್ನು ವಿಚಾರಣೆ ಒಳಪಡಿಸಿದಾಗ ಬೈಕ್ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಶಹಾಪುರ ಹಾಗೂ ಸುರಪೂರ ನಿವಾಸಿಗಳಾದ ಬಸವರಾಜ ಭೀಮಣ್ಣ ಹುಣಸಿಗಿಡದ (31), ಹುಲಗಪ್ಪ ಮರೆಪ್ಪ ಕೊಕಲೋರ(22), ಕೊಂಡಯ್ಯ ಭೀಮರಾಯ ಪಾರ್ವತಿದೊಡ್ಡಿ (22), ರವಿಕುಮಾರ ದೇವಿಂದ್ರಪ್ಪ ಪಾರ್ವತಿದೊಡ್ಡಿ(21) ಆರೋಪಿಗಳು. ಸಿಂದಗಿ, ಕೊಡೇಕಲ್, ಯಡ್ರಾಮಿ, ಕೆಂಭಾವಿ, ನೆಲೋಗಿ, ಗೋಗಿ, ಜೇವರ್ಗಿ, ತಾಳಿಕೋಟೆ ಠಾಣೆ ವ್ಯಾಪ್ತಿಯ ವಾಹನ ಕಳ್ಳತನ ಮಾಡಿದ್ದುಘಿ, ಅಂದಾಜು 16.65 ಲಕ್ಷ ರೂ. ವೌಲ್ಯದ 37 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
10ರಂದು ಆಲಮೇಲ ರಸ್ತೆಯಲ್ಲಿ ಪೊಲೀಸರು ವಾಹನಗಳ ತಪಾಸಣೆ ಕಾರ್ಯ ನಡೆಸುತ್ತಿದ್ದಾಗ ಬ್ಯಾಂಕ್, ೈನಾನ್ಸ್ ಕಳ್ಳತನ ಪ್ರಕರಣದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಾದ ಪಟ್ಟಣದ ಗೋಲಿಬಾರ ಮಡ್ಡಿಯ ನಿವಾಸಿಗಳಾದ ಪ್ರಭು ಶಿವಪ್ಪ ಹಲಗಿ(32), ಅನೀಲ ಸುರೇಶ ನಾಯ್ಕೋಡಿ(32) ಹಾಗೂ ಬಸವರಾಜ ಲಕ್ಷ್ಮಣ ಮಾದರ(28) ಅವರನ್ನು ಸಂಶಯದ ಮೇಲೆ ವಿಚಾರಣೆ ನಡೆಸಿದಾಗ ಅನ್ನಪೂರ್ಣ ೈನಾನ್ಸ್, ಇಂಡಿಯ ಪಿಕೆಪಿಎಸ್ ಬ್ಯಾಂಕ್, ಎಲ್ ಆ್ಯಂಡ್ ಟಿ ೈನಾನ್ಸ್‌ನಲ್ಲಿ ಕಳುವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರಿಂದ ಮೂರು ಕಳ್ಳತನ ಪ್ರಕರಣಗಳಲ್ಲಿ 2.20 ಲಕ್ಷ ರೂ. ನಗದನ್ನು ಜಪ್ತು ಮಾಡಲಾಗಿದೆ. ಅಲ್ಲದೆ ಕಳ್ಳತನಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಸಿಂದಗಿ ಪೊಲೀಸ್ ತಂಡವನ್ನು ಎಸ್ಪಿ ಶ್ಲಾಘಿಸಿ, ಬಹುಮಾನ ಘೋಷಿಸಿದರು. ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಂಕರ ಮಾರಿಹಾಳ, ಡಿಎಸ್ಪಿ ಜಗದೀಶ ಎಚ್.ಎಸ್., ಸಿಪಿಐ ನಾನಾಗೌಡ ಪಾಟೀಲ, ಪಿಎಸ್‌ಐ ಭೀಮಪ್ಪ ರಬಕವಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.