ಚಿಕ್ಕಮಗಳೂರು: ಗಂಡನೊಂದಿಗೆ ಮನಸ್ತಾಪ: ಬಟ್ಟೆ ತೊಳೆಯಲು ಹೋಗಿದ್ದ ಪತ್ನಿಯನ್ನು ಹತ್ಯೆಗೈದ ಪತಿ
ತನ್ನಿಂದ ದೂರವಾಗಿದ್ದ ಪತ್ನಿಯನ್ನು ಪತಿ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿರುವ ಮಾಹಿತಿ ಕಂಡು ಬಂದಿದೆ.
ಬಟ್ಟೆ ತೊಳೆಯಲು ತೆರಳಿದ್ದಾಗ ಮಚ್ಚಿನಿಂದ ಕೊಚ್ಚಿ ಹಲ್ಲೆಗೈಯಲಾಗಿದ್ದು, ಮೇಘಾ(20) ಮೃತ ಪತ್ನಿ, ಚರಣ್ ಹತ್ಯೆಗೈದ ಪತಿ. ಪ್ರೀತಿಸಿ ಕುಟುಂಬದ ಒಪ್ಪಿಗೆ ಪಡೆದು 2 ವರ್ಷದ ಹಿಂದೆ ಚರಣ್ ಜೊತೆ ಮೇಘಾ ವಿವಾಹವಾಗಿದ್ದರು.
ಗಂಡನೊಂದಿಗೆ ಮನಸ್ತಾಪ ಹಿನ್ನೆಲೆ ಮೇಘಾ ತಾಯಿ ಜೊತೆಗಿದ್ದು, ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಚರಣ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.