This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

International News

ದಂಪತಿಗಳು ಹೆಚ್ಚು ಮಕ್ಕಳನ್ನು ಹೊಂದಬೇಕು: ಸಿಂಗಾಪುರ ಪ್ರಧಾನಿ ಲೀ

ದಂಪತಿಗಳು ಹೆಚ್ಚು ಮಕ್ಕಳನ್ನು ಹೊಂದಬೇಕು: ಸಿಂಗಾಪುರ ಪ್ರಧಾನಿ ಲೀ

ಸಾಕಷ್ಟು ದೇಶಗಳು ಹೆಚ್ಚುತ್ತಿರುವ ಜನಸಂಖ್ಯೆಯ ಬಗ್ಗೆ ಚಿಂತಿತರಾಗಿದ್ದಾರೆ ಮತ್ತು ಅನೇಕ ದೇಶಗಳು ಜನಸಂಖ್ಯೆ ಹೆಚ್ಚಿಸುವ ಕುರಿತು ಅಭಿಯಾನ ಹಾಗೂ ಹಲವು ಯೋಜನೆಗಳನ್ನು ಘೋಷಿಸಿದ್ದು, ಸಿಂಗಾಪುರ ಪ್ರಧಾನಿ ಲೀ ಹೆಚ್ಚು ಮಕ್ಕಳನ್ನು ಹೆರುವಂತೆ ಯುವಕರಿಗೆ ಸಲಹೆ ನೀಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಚೀನೀ ಕ್ಯಾಲೆಂಡರ್ ಪ್ರಕಾರ ಈ ವರ್ಷ ಫೆಬ್ರವರಿ 10 ರಿಂದ ಪ್ರಾರಂಭವಾಗಲಿದ್ದು, ಚೀನೀ ಮೂಲದ ಅನೇಕ ಕುಟುಂಬಗಳು ಡ್ರ್ಯಾಗನ್ ವರ್ಷದಲ್ಲಿ ಜನಿಸಿದ ಮಕ್ಕಳನ್ನು ಮಂಗಳಕರವೆಂದು ಪರಿಗಣಿಸಿ, ಮಕ್ಕಳನ್ನು ಹೊಂದಲು ಸರ್ಕಾರ ಒತ್ತಾಯಿಸಿದೆ.ಚೀನೀ ಕ್ಯಾಲೆಂಡರ್ 2024 ಈ ವರ್ಷ 10 ಫೆಬ್ರವರಿ 2024 ರಿಂದ ಪ್ರಾರಂಭವಾಗಲಿದೆ ಮತ್ತು ಚೀನೀ ಜಾತಕದ ಪ್ರಕಾರ, ಈ ವರ್ಷವನ್ನು ‘ಡ್ರ್ಯಾಗನ್ ವರ್ಷ’ ಎಂದು ಕರೆಯಲಾಗುತ್ತದೆ.

ಚೀನೀ ಪುರಾಣದಲ್ಲಿ ಡ್ರ್ಯಾಗನ್ ಧೈರ್ಯ, ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಪ್ರತಿನಿಧಿಸುವ ಶಕ್ತಿಯುತ ಮತ್ತು ಮಂಗಳಕರ ಸಂಕೇತವೆಂದು ಪರಿಗಣಿಸಲಾಗಿದ್ದು, ಫೆಬ್ರವರಿ 10 ರಂದು ಪ್ರಧಾನಿ ಲೀ ಅವರ ಜನ್ಮದಿನ, ಅದೇ ದಿನ ಡ್ರ್ಯಾಗನ್ ವರ್ಷ ಪ್ರಾರಂಭವಾಗುತ್ತದೆ. ಅವರು 1952 ರಲ್ಲಿ, ಡ್ರ್ಯಾಗನ್ ವರ್ಷದಲ್ಲಿ ಜನಿಸಿದರು. ಮಕ್ಕಳ ಆರೈಕೆ ಮತ್ತು ಕೆಲಸದ ಜೀವನದ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳಲು, ಎರಡು ವಾರಗಳಿಂದ ನಾಲ್ಕು ವಾರಗಳವರೆಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಈ ಕ್ರಮಗಳು ಪೋಷಕರ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ.ದಂಪತಿ ಹೆಚ್ಚು ಮಕ್ಕಳನ್ನು ಹೊಂದಬೇಕೆಂದು ನಾನು ಹೇಳುತ್ತೇನೆ ಆದರೆ ಆದರೆ, ಅಂತಿಮವಾಗಿ ದಂಪತಿಗಳು ಮಕ್ಕಳನ್ನು ಹೊಂದಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುತ್ತಾರೆ. 2022ರಲ್ಲಿ ಜನನ ದರ ತೀರಾ ಕಡಿಮೆಯಾಗಿದೆ, 2020ರಲ್ಲಿ 1.1 ಹಾಗೂ 2021ರಲ್ಲಿ 1.12ರಷ್ಟಿತ್ತು. ಕುಟುಂಬ ಜೀವನದ ಪ್ರಮುಖ ಅಂಶವೆಂದರೆ ಮಕ್ಕಳನ್ನು ಹೊಂದುವುದು ಮತ್ತು ಬೆಳೆಸುವುದು.

Nimma Suddi
";