This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Politics News

ಎಸ್.ಆರ್.ಪಾಟೀಲ ತರಾಟೆ

ಬಿಜೆಪಿಯದ್ದು ಶನಿ ಸರಕಾರ
ನಿಮ್ಮ ಸುದ್ದಿ ಬಾಗಲಕೋಟೆ

ಬೆಲೆ ಏರಿಕೆಯಿಂದ ಜನತೆ ರೋಸಿ ಹೋಗಿದ್ದು ಬಡವರು, ಜನ ಸಾಮಾನ್ಯರಿಗಾಗಿ ರಾಜ್ಯ ಬಿಜೆಪಿ ಸರಕಾರ ಯಾವ ಕಾರ್ಯಕ್ರಮ ನೀಡಿಲ್ಲ. ಇದೊಂದು ಶನಿ ಸರ್ಕಾರವಾಗಿದ್ದು ಯಾವಾಗ ತೊಲಗುತ್ತದೆ ಎಂದು ಜನ ಕಾಯುವಂತಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಬಿಜೆಪಿ ವಿರುದ್ಧ ಹರಿಹಾಯ್ದರು.

ನಗರದ ಚರಂತಿಮಠದಲ್ಲಿ ಸೋಮವಾರ ಬಾಗಲಕೋಟೆ ಮತಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ನೂತನ ಗ್ರಾಪಂ ಸದಸ್ಯರು, ಅಧ್ಯಕ್ಷ, ಉಪಾಧ್ಯಕ್ಷರಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರಕಾರಗಳಿಗೆ ಜನರ ಬಗ್ಗೆ ಕಾಳಜಿಯೇ ಇಲ್ಲದಂತಾಗಿದೆ. ಶಾಸಕರ, ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿಗೆ ಅನುದಾನ ನೀಡಿ ಎಂದು ಅವೇಶನದಲ್ಲಿ ಬೊಬ್ಬೆ ಹೊಡೆದರು ಬಿಡಿಗಾಸು ಬಿಡುಗಡೆ ಮಾಡುತ್ತಿಲ್ಲ ಎಂದು ದೂರಿದರು.

ಪೆಟ್ರೋಲ್, ಡಿಸೇಲ್ ಬೆಲೆಯೇರಿಕೆಯಿಂದ ದಿನನಿತ್ಯದ ವಸ್ತುಗಳು ಗಗನಕ್ಕೇರಿವೆ. ಜನರ ಬದುಕು ದುರ್ಬರಗೊಂಡಿದೆ. ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಉತ್ತಮ ಆಡಳಿತ ನೀಡಲು ಬರುವುದಿಲ್ಲ ಎನ್ನುವುದು ಸಾಬೀತಾಗಿದೆ. ಇದರ ಪರಿಣಾಮ ಪಂಜಾಬ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಮನೆಯಲ್ಲಿ ದೀಪ ಹಚ್ಚಿದ್ದಾರೆ. ಮುಂದಿನ ಪಂಚ ರಾಜ್ಯಗಳ ಚುನಾವಣೆಯಲ್ಲೂ ಬಿಜೆಪಿ ಧೂಳಿಪಟವಾಗಲಿದೆ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ೨೨ ಗ್ರಾಪಂನಲ್ಲಿ ೪ರಲ್ಲಿ ಕಾಂಗ್ರೆಸ್ ಅಕಾರಕ್ಕೆ ಬಂದಿದ್ದು ಇನ್ನು ೪ ಗ್ರಾಪಂಗಳಲ್ಲಿ ಬಹುಮತವಿದ್ದರೂ ಬಿಜೆಪಿ ಅಕಾರದಾಸೆಯಿಂದ ಮೀಸಲಾತಿ ಅದಲು, ಬದಲು ಮಾಡಿದೆ. ಆದರೆ ಮತಕ್ಷೇತ್ರದ ೩೦೦ ಗ್ರಾಪಂ ಸದಸ್ಯ ಸ್ಥಾನಗಳಲ್ಲಿ ೧೫೪ ಸ್ಥಾನ ಕಾಂಗ್ರೆಸ್ ಬೆಂಬಲಿತರ ಪಾಲಾಗಿವೆ. ಗ್ರಾಪಂ ಸದಸ್ಯರು ಮಹಾತ್ಮ ಗಾಂಧೀಜಿ ಕಂಡ ಕನಸು ನನಸು ಮಾಡಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಗ್ರಾಮಗಳ ಅಭಿವೃದ್ಧಿಗೆ ೫ ವರ್ಷದಲ್ಲಿ ಪ್ರತಿಯೊಂದು ಗ್ರಾಪಂಗೆ ಗರಿಷ್ಠ ೬ ಕೋಟಿ ರೂ. ಅನುದಾನ ಬರುತ್ತದೆ. ಇದನ್ನು ಸದ್ಬಳಕೆ ಮಾಡಿಕೊಂಡು ಗ್ರಾಮಗಳ ಪ್ರಗತಿಗೆ ಪಣತೊಡಬೇಕು. ಮಹಾತ್ಮ ಗಾಂಜಿ ಸ್ವಚ್ಛತೆ, ಶೌಚಗೃಹ ಬಳಕೆ ಬಗ್ಗೆ ಬಹು ವರ್ಷಗಳ ಹಿಂದೆ ಹೇಳಿದ್ದರು. ಆದರೆ ಅನುದಾನ ಬಂದರೂ ಅನುಷ್ಠಾನವಾಗಿಲ್ಲ. ಬಿಜೆಪಿ ಬಗ್ಗೆ ಜನರಿಗೆ ಭ್ರಮ ನಿರಶನವಾಗಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಮೌನಿ ಬಾಬಾ ಆಗಿದ್ದಾರೆ ಎಂದರು.

ಮಾಜಿ ಸಚಿವ ಎಚ್.ವೈ.ಮೇಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ, ಜಿಪಂ ಸದಸ್ಯರಾದ ಕವಿತಾ ದಡ್ಡಿ, ಹಣಮವ್ವ ಕರಿಹೊಳಿ, ಮುಖಂಡರಾದ ನಾಗರಾಜ ಹದ್ಲಿ, ಎಸ್.ಎನ್.ರಾಂಪೂರ, ಚನ್ನವೀರ ಅಂಗಡಿ, ಹಾಜಿಸಾಬ ದಂಡಿನ, ಕುತಬುದ್ಧಿನ್ ಖಾಜಿ, ಬಸವಂತಪ್ಪ ಮೇಟಿ, ಶಶಿಕಾಂತ ಪೂಜಾರಿ ಇತರರು ಇದ್ದರು.

 

Nimma Suddi
";