ನಿಮ್ಮ ಸುದ್ದಿ ಬಾಗಲಕೋಟೆ
ನೂತನ ಕೃಷಿ ಕಾಯಿದೆ ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆಗಳು ಮಂಗಳವಾರ ಕರೆ ನೀಡಿದ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ಜಿಲ್ಲೆಯ ಹುನಗುಂದ ತಾಲೂಕು ರೈತ ಸಂಘಟನೆ ಹೆದ್ದಾರಿ ತಡೆ ನಡೆಸಿತು.
ಬೆಳಗ್ಗೆ 9 ಕ್ಕೆ ಕಮತಗಿ ಕ್ರಾಸ್ ಬಳಿ ಹೆದ್ದಾರಿ ತಡೆದ ರೈತರು ಕೇಂದ್ರ ಜಾರಿಗೊಳಿಸಿರುವ ನೂತನ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬಸನಗೌಡ ಪೈಲ್, ಗುರು ಗಾಣಿಗೇರ, ರಸುಲ್ ಸಾಬ್ ತಹಶೀಲ್ದಾರ ಸೇರಿದಂತೆ ರೈತ ಮುಖಂಡರು ಇದ್ದರು.
ಕಚೇರಿಗೆ ತೆರಳುವವರೂ ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ಅಗದಂತೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರ ವರೆಗೆ ಮಾತ್ರ ಬಂದ್ ರೈತ ಸಂಘಟನೆಗಳು ಕರೆ ನೀಡಿದ್ದರೂ ಹುನಗುಂದ ತಾಲೂಕು ರೈತ ಸಂಘಟನೆಗಳು ಬೆಳಗ್ಗೆ 9 ಕ್ಕೆ ರಸ್ತೆ ತಡೆಗೆ ಮುಂದಾಗಿದ್ದು ಕೆಲ ಕಾಲ ಪ್ರಯಾಣಿಕರು, ಖಾಸಗಿ ವಾಹನ ಸವಾರರು ಪರದಾಡುವಂತಾಯಿತು.
ಸ್ಥಳಕ್ಕೆ ಅಗಮಿಸಿದ ಹುನಗುಂದ ಸಿಪಿಐ ಅಯ್ಯನಗೌಡ ಪಾಟೀಲ, ಅಮೀನಗಡ ಠಾಣೆ ಸಬ್ ಇನ್ಸಪೆಕ್ಟರ್ ಮಲ್ಲಿಕಾರ್ಜುನ ಕುಲಕರ್ಣಿ ಹಾಗೂ ಪೊಲೀಸ್ ಸಿಬ್ಬಂದಿ ರೈತರೊಂದಿಗೆ ಮಾತನಾಡಿದರು.
ಹುನಗುಂದ ತಹಶೀಲ್ದಾರ್ ಬಸವರಾಜ ನಾಗರಾಳ ಸರ್ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ. ರೈತರಿಂದ ಮನವಿ ಸ್ವೀಕರಿಸಿದರು. ನಂತರ ರೈತರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.