ನ್ಯೂಯಾರ್ಕ್ (ಅಮೆರಿಕ): ಒಂದು ಸಾಮಾನ್ಯ ಬಿಸ್ಕೇಟ್ ಯುವತಿಯೊಬ್ಬಳ ಸಾವಿಗೆ ಕಾರಣವಾಗಿದ್ದು, ಓರ್ವ ಪ್ರಖ್ಯಾತ ನೃತ್ಯಗಾರ್ತಿ ಬಿಸ್ಕೇಟ್‌ಗೆ ಬಲಿಯಾಗಿದ್ದಾಳೆ.ಆಕೆಯ ಹೆಸರು ಒರ್ಲಾ ಬಕ್ಸೆಂಡೇಲ್.. ವಯಸ್ಸು ಕೇವಲ 25 ವರ್ಷ.. ವೃತ್ತಿ ನಿರತ ನೃತ್ಯಗಾರ್ತಿಯಾದ ಆಕೆ ಮೂಲತಃ ಬ್ರಿಟನ್ ದೇಶದವಳು ಎಂದು ಮಾಹಿತಿ ತಿಳಿದು ಬಂದಿದೆ.
ನ್ಯೂಯಾರ್ಕ್ ನಗರದ ಸೂಪರ್ ಮಾರ್ಕೆಟ್ ಒಂದರಲ್ಲಿ ಬಿಸ್ಕೇಟ್ ಖರೀದಿಸಿದ್ದ ಒರ್ಲಾ ಬಕ್ಸೆಂಡೇಲ್, ಅದನ್ನು ಸೇವನೆ ಮಾಡಿ ಕಾರಣಕ್ಕೆ ಸಾವನ್ನಪ್ಪಿದ್ದು, ಅಮೆರಿಕದ ಕುಕ್ಕಿಸ್ ಯುನೈಟೆಡ್ ಎಂಬ ಸಂಸ್ಥೆ ತಯಾರಿಸಿದ್ದ ಈ ಬಿಸ್ಕೇಟ್‌ನಲ್ಲಿ ಯಾವುದೇ ವಿಷ ಕಾರಿ ವಸ್ತುಗಳು ಇರಲಿಲ್ಲ. ಬಿಸ್ಕೇಟ್ ಒಳಗೆ ಕಡಲೆ ಬೀಜ ಸೇರಿಸಲಾಗಿತ್ತು. ಕಡಲೆ ಬೀಜದ ಅಲರ್ಜಿಯಿಂದ ಬಳಲುತ್ತಿದ್ದ ನೃತ್ಯಗಾರ್ತಿ ಒರ್ಲಾ ಬಕ್ಸೆಂಡೇಲ್ ಅವರಿಗೆ ತಾವು ತಿನ್ನುತ್ತಿರುವ ಬಿಸ್ಕೇಟ್ ಅನ್ನು ಕಡಲೆ ಬೀಜದಿಂದ ತಯಾರು ಮಾಡಲಾಗಿದೆ ಅನ್ನೋದು ತಿಳಿದಿರಲಿಲ್ಲ.
ಬಿಸ್ಕೇಟ್‌ನ ಪ್ಯಾಕೆಟ್‌ನಲ್ಲಿ ಇದನ್ನು ಯಾವೆಲ್ಲಾ ಕಚ್ಚಾ ಸಾಮಗ್ರಿ ಬಳಸಿ ತಯಾರಿಸಲಾಗಿದೆ ಎಂಬ ಪಟ್ಟಿಯಲ್ಲಿ ಕಡಲೆ ಬೀಜದ ಪ್ರಸ್ತಾಪ ಇರಲಿಲ್ಲ. ಬಿಸ್ಕೇಟ್‌ನಲ್ಲಿ ಕಡಲೆ ಬೀಜ ಇಲ್ಲ ಎಂದು ಭಾವಿಸಿ ಒರ್ಲಾ ಬಕ್ಸೆಂಡೇಲ್ ಅದನ್ನು ತಿಂದಿದ್ದು, ಬಳಿಕ ತೀವ್ರತರದ ಅಲರ್ಜಿ ಲಕ್ಷಣಗಳು ಆಕೆಯನ್ನು ಕಾಡಿತ್ತು.ಜನವರಿ 11 ರಂದೇ ಒರ್ಲಾ ಬಕ್ಸೆಂಡೇಲ್ ಅವರನ್ನು ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದರು.
ಬಿಸ್ಕೇಟ್ ತಯಾರು ಮಾಡಿದ ಸಂಸ್ಥೆ ಹಾಗೂ ಅದನ್ನು ಮಾರಾಟ ಮಾಡಿದ ಸೂಪರ್ ಮಾರ್ಕೆಟ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಿಸ್ಕೇಟ್‌ನ ತಯಾರಕರು ಹಾಗೂ ಮಾರಾಟಗಾರರು ಇದರಲ್ಲಿ ಯಾವ ಕಚ್ಚಾ ವಸ್ತುಗಳನ್ನು ಸೇರಿಸಲಾಗಿದೆ ಎಂದು ಪ್ಯಾಕೆಟ್‌ನಲ್ಲಿ ನಮೂದಿಸಿಲ್ಲ. ಜೊತೆಗೆ ಕಡಲೆ ಬೀಜ ಬಳಸಿರೋದಾಗಿ ಈ ಪ್ಯಾಕೆಟ್‌ನಲ್ಲಿ ಎಲ್ಲಿಯೂ ಪ್ರಸ್ತಾಪ ಇಲ್ಲ ಎಂದು ಒರ್ಲಾ ಬಕ್ಸೆಂಡೇಲ್ ಅವರ ಕುಟುಂಬಸ್ಥರ ಪರ ವಕೀಲರು ವಾದಿಸಿದ್ದಾರೆ ಎಂದು ಅಮೆರಿಕದ ನ್ಯೂಯಾರ್ಕ್ ಪೋಸ್ಟ್ ಸುದ್ದಿ ಸಂಸ್ಥೆ ತಿಳಿಸಿದೆ.