ಬಾಗಲಕೋಟೆಗೆ ಕತ್ತಿ ಉಸ್ತುವಾರಿ
ನಿಮ್ಮ ಸುದ್ದಿ ಬಾಗಲಕೋಟೆ
ರಾಜ್ಯದಲ್ಲಿ ನಡೆದ ಉಪ ಚುನಾವಣೆ ಫಲಿತಾಂಶದ ಮತ ಎಣಿಕೆ ಪೂರ್ಣಗೊಳ್ಳುವ ಮೊದಲೇ ಕೆಲ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಲಾಗಿದೆ.
ಸದಾ ವಿವಾದದ ಹೇಳಿಕೆಯಿಂದಲೇ ಹೆಸರಾಗಿರುವ ಆಹಾರ ಖಾತೆ ಸಚಿವ ಉಮೇಶ ಕತ್ತಿ ಅವರಿಗೆ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ನೀಡಿದ್ದಾರೆ.
ಜಿಲ್ಲೆಯವರೇ ಆಗಿದ್ದ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಬೆಳಗಾವಿ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಮತ್ತೊಬ್ಬ ಸಚಿವ ಮುರಗೇಶ ನಿರಾಣಿ ಅವರಿಗೆ ಕಲಬುರಗಿ ಉಸ್ತುವಾರಿ ನೀಡಿ ಸರಕಾರ ಆದೇಶ ಹೊರಡಿಸಿದೆ.
ಸಚಿವ ಅರವಿಂದ ಲಿಂಬಾವಳಿ ಅವರಿಗೆ ಬೀದರ್, ಎಂಬಿಟಿ ನಾಗರಾಜಗೆ ಕೋಲಾರ, ಎಸ್.ಅಂಗಾರ ಅವರಿಗೆ ಚಿಕ್ಕಮಗಳೂರು ಉಸ್ತುವಾರಿ ನೀಡಲಾಗಿದೆ.