ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಬಾಗಲಕೋಟೆ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ
ತಾಯಿಯೇ ಮೂವರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ.
ಬಾಗಲಕೋಟೆ ತಾಲೂಕಿನ ತಿಮ್ಮಾಪೂರ ಗ್ರಾಮದ ರೇಖಾ ಬಗಲಿ (೨೮) ತಾಯಿ ಆಗಿದ್ದು ಮಕ್ಕಳಾದ ಸನ್ನಿಧಿ (೮), ಸಮೃದ್ದಿ (೫), ಶ್ರೀನಿಧಿ (೩) ಮೃತಪಟ್ವವರು.
ರೇಖಾ ಬಗಲಿ ಇತ್ತೀಚೆಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಳು ಎನ್ನಲಾಗಿದೆ.
ಮೂರು ಜನ ಹೆಣ್ಣು ಮಕ್ಕಳಿದ್ದ ಕಾರಣ ಮಕ್ಕಳ ವಿದ್ಯಾಭ್ಯಾಸ, ಮದುವೆ ಬಗ್ಗೆ ಚಿಂತಿಸಿ ಮಾನಸಿಕವಾಗಿ ಬಳಲಿದ್ದಳು ಎಂಬ ಮಾಹಿತಿಯಿದೆ.
ಮೃತ ರೇಖಾಳನ್ನು ಬೀಳಗಿ ತಾಲ್ಲೂಕಿನ ಸುನಗ ಗ್ರಾಮದ ಅರ್ಜುನಗೆ ಮದುವೆ ಮಾಡಿ ಕೊಡಲಾಗಿತ್ತು. ಕಳೆದ ೭ ವರ್ಷಗಳಿಂದ ತವರು ಮನೆಗೆ ಬಂದಿದ್ದ ರೇಖಾ ಹಾಗೂ ಕುಟುಂಬ. ತಿಮ್ಮಾಪುರ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ರೇಖಾ, ಮಕ್ಕಳು, ಗಂಡ ವಾಸವಿದ್ದರು.
ರೇಖಾ ಗಂಡ ಅರ್ಜುನ ಕಬ್ಬು ಕಟಾವು ಮಾಡುವ ಕೆಲಸ ಮಾಡುತ್ತಿದ್ದ. ಮಾವಿನ ಹಣ್ಣಿನಲ್ಲಿ ರಾಸಾಯನಿಕ ಬೆರೆಸಿ ಮಕ್ಕಳಿಗೆ ಉಣಿಸಿದ್ದಲ್ಲದೆ ತಾನೂ ಸೇವಿಸಿದ್ದಾಳೆ. ಈ ಹಿಂದೆಯೂ ರೇಖಾ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂಬ ಮಾಹಿತಿ ಇದೆ.