ಬಾಗಲಕೋಟೆಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಎಸ್. ಆರ್.ಪಾಟೀಲ್ ಹೇಳಿಕೆ…
ಆಂಕರ್ ಅನುಶ್ರೀ ಕಾಲ್ ಡಿಟೇಲ್ಸ್ ನಲ್ಲಿ ಮಾಜಿ ಮುಖ್ಯಮಂತ್ರಿ ನಂಬರ್ ವಿಚಾರ…
ಮಾಜಿ ಮುಖ್ಯಮಂತ್ರಿ ,ಅವರ ಮಗ ಎಂದಿರೋದನ್ನು ನಾನು ಮಾಧ್ಯಮದಲ್ಲಿ ನೋಡಿದ್ದೇನೆ….
ತನಿಖೆ ಮಾಡಿದಾಗ ಯಾರು ಏನು ಅನ್ನೋದು ಗೊತ್ತಾಗುತ್ತೆ…
ಆರೋಪಿಗಳಿಗೆ ರಕ್ಷಣೆ ಕೊಡೋದು ಒಳ್ಳೆಯದಲ್ಲ..
ಅದು ಕೂಡಾ ಅಪರಾಧ, ಯಾರಿದ್ದಾರೆ,ಏನಿದೆ ಎಂದು ನನಗೆ ಗೊತ್ತಿಲ್ಲ…
ಅದು ಗಾಳಿಯಲ್ಲಿ ಗುಂಡು ಹಾರಿಸಿದಂಗಿತ್ತು…
ಸರಿಯಾಗಿ ತನಿಖೆಯಾಗಲಿ..
ಡ್ರಗ್ಸ್ ಮಾಫಿಯಾದಿಂದ ಇಡೀ ಯುವಶಕ್ತಿ ಹಾಳಾಗಿ ಹೋಗಿದೆ..
ನಮ್ಮ ದೇಶ ಹೆಚ್ಚು ಯುವಕರನ್ನು ಹೊಂದಿದ ಯಂಗ್ ಇಂಡಿಯಾ..
ಯುವಕರು ಡ್ರಗ್ಸ್ ಹಾವಳಿಯಿಂದ ಆರೋಗ್ಯ ಹಾಳಾಗುತ್ತಿದೆ..
ಇದೊಂದು ಹೀನ ಕೆಲಸ, ಇವತ್ತೇ ನಡೆದಿದೆ ಎಂದು ನಾನು ಹೇಳೋದಿಲ್ಲ ಯಾವಾಗಲೂ ನಡೆದಿದೆ..
ತನಿಖೆ ಚೆನ್ನಾಗಿ ನಡೆಯುತ್ತಿದೆ, ಯಾರ್ಯಾರು ತಪ್ಪಿತಸ್ಥರಿದ್ದಾರೆ ಬಯಲಿಗೆ ಬರುತ್ತಿದ್ದಾರೆ…
ಫಿನ್ ಲ್ಯಾಂಡ್ ನಲ್ಲಿ ಬಹಳವಿದೆ ಅನ್ನೋದು ನಾನು ಕಂಡುಕೊಂಡಿದ್ದೇನೆ..
ಯಾರೇ ಆಗಲಿ, ಎಷ್ಟೇ ಉನ್ನತ ಹುದ್ದೆಯಲ್ಲಿರಲಿ ಸರಿಯಾಗಿ ತನಿಖೆಯಾಗಬೇಕು..
ನಮ್ಮ ದೇಶ,ರಾಜ್ಯ ಡ್ರಗ್ಸ್ ನಿಂದ ಮುಕ್ತವಾಗಲಿ..
ಸಚಿವ ಆನಂದ್ ಸಿಂಗ್ ಸರ್ಕಾರ ಬಹಳ ದಿನ ಇರುವದಿಲ್ಲ ಹೇಳಿಕೆ ವಿಚಾರ…
ಆನಂದ್ ಸಿಂಗ್ ಅವರಿಗೆ ಹಾಗೆ ಅನಿಸಿರಬೇಕು…
ಆನಂದ್ ಸಿಂಗ್ ಯಡಿಯೂರಪ್ಪ ಸರ್ಕಾರದ ಕ್ಯಾಬಿನೆಟ್ ಸಚಿವರು ಅವರೇ ಹೇಳುತ್ತಿದ್ದಾರೆ..
ವಿಪಕ್ಷದವರು ಹೇಳುತ್ತಿಲ್ಲ,ಆದರೆ ಮಂತ್ರಿ ಹೇಳುತ್ತಿದ್ದಾರಂದ್ರೆ ಅದರಲ್ಲಿ ಸತ್ಯಾಂಶವಿದೆ ಅನ್ನೋದು ನನ್ನ ಭಾವನೆ..
ಆರ್ ಆರ್ ನಗರ, ಶಿರಾದಲ್ಲಿ ನಾವು ಗೆಲ್ಲುತ್ತೇವೆ ಎಂದು ಹೇಳೋದಿಲ್ಲ…
*ಜನ ಗೆಲ್ಲಿಸಿದ್ರೆ ಗೆಲ್ಲುತ್ತೇವೆ, ಯಡಿಯೂರಪ್ಪ ಸವಾಲಿಗೆ ಎಸ್ ಆರ್ ಪಾಟೀಲ್ ಪ್ರತಿಕ್ರಿಯೆ….*
ಪ್ರಜಾಪ್ರಭುತ್ವದಲ್ಲಿ ಜನ ಕೊಡುವ ತೀರ್ಮಾನಕ್ಕೆ ತಲೆಬಾಗಿ ಸ್ವೀಕರಿಸುತ್ತೇವೆ..
ಭ್ರಷ್ಟಾಚಾರ,ಕೆಟ್ಟ ಆಡಳಿತ ನೀಡಿದ್ದಾರೆ, ಬಹುತೇಕ ಕೇಡುಗಾಲ ಸಮೀಪಿಸಿದೆ..
ಬೈ ಎಲೆಕ್ಷನ್ ನಲ್ಲಿ ಜನ ನಮಗೆ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸವಿದೆ…
ಎರಡು ಕ್ಷೇತ್ರಗಳ ಮತದಾರರು ಪ್ರಬುದ್ಧರಿದ್ದಾರೆ..
ದುರಾಡಳಿತಕ್ಕೆ ಕೊನೆ ಹಾಡುತ್ತಾರೆ..
*ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ನಿರ್ಧಾರ ಹೈ ಕಮಾಂಡ್ ಗೆ ಬಿಟ್ಟಿದ್ದು..*
ರಾಜ್ಯಮಟ್ಟದಲ್ಲಿ ಕೈಗೊಳ್ಳುವ ನಿರ್ಧಾರವಲ್ಲ..
ದೆಹಲಿ ನಾಯಕರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ,ಆ ಪ್ರಕಾರ ನಡೆಯುತ್ತೇವೆ..
ಉತ್ತರ ಪ್ರದೇಶದಲ್ಲಿ ರಾಮರಾಜ್ಯ ಇಲ್ಲ ರಾವಣ ರಾಜ್ಯವಿದೆ..
ಮಧ್ಯರಾತ್ರಿಯಲ್ಲಿ ಮಹಿಳೆ ಏಕಾಂಗಿಯಾಗಿ ಓಡಾಡಿದ್ರೆ ಅದು ನಿಜವಾದ ಸ್ವಾತಂತ್ರ್ಯ ಎಂದಿದ್ರು ಗಾಂಧೀಜಿ…
ಆದರೀಗ ಹಾಡಹಗಲೇ ಅತ್ಯಾಚಾರ ಮಾಡಿ,ನಾಲಿಗೆ ಸೀಳಿ ಕೊಲೆ ಮಾಡ್ತಾರೆ ಅಂದ್ರೆ ರಾವಣರಾಜ್ಯ…
ರಾಮಮಂದಿರ ಕಟ್ಟಿ ರಾಮರಾಜ್ಯ ಬರುತ್ತೇ ಎಂದು ನಾವು ತಿಳಿದಿದ್ವಿ..
ಆದರೆ ರಾವಣ ರಾಜ್ಯ ತಂದಿದ್ದಾರೆ..
ಯೋಗಿ ಆದಿತ್ಯನಾಥ್ ಕಾವಿಧಾರಿಯಿದ್ದಾರೆ..
ಯಾರು ತಪ್ಪಿತಸ್ಥರಿದ್ದಾರೆ ತಕ್ಷಣವೇ ಬಂಧಿಸಿ,ಶಿಕ್ಷೆಗೊಳಿಪಡಿಸಬೇಕಾಗಿತ್ತು.
ಅದರ ಬದಲಿಗೆ ಸಹಾಯ ಮಾಡಿದ್ದಾರಲ್ಲ,ಅವರು ತಪ್ಪಿತಸ್ಥರು,ಅವ್ರು ಆರೋಪಿ ಎಂದ್ರು ತಪ್ಪಲ್ಲ…
ಪ್ರಧಾನಿ ನರೇಂದ್ರ ಮೋದಿ ಅವ್ರು ಬೇಟಿ ಬಾಚಾವೋ ಬೇಟಿ ಪೇಡಾವೋ ಎನ್ನುತ್ತಾರೆ..
ಈಗ ಬೇಟಿ ರಕ್ಷಣೆ ಎಲ್ಲಿದೆ ಎನ್ನುವುದು ಮೋದಿ ತಿಳಿದುಕೊಳ್ಳಬೇಕು..
ದುಷ್ಟ,ಹೇಯ ಸರ್ಕಾರ, ಶೋಷಿತರ ವಿರುದ್ಧ ಇರುವ ಸರ್ಕಾರ ಕಿತ್ತು ಹಾಕಲು ಮೋದಿ ಹಿಂದೇಟು ಹಾಕುತ್ತಾರೆಂದ ಪಾಟೀಲ್..