ಮುಂಬೈನಲ್ಲಿ ಕುಡಿದ ಮತ್ತಿನಲ್ಲಿ ಮೂವರು ಯುವತಿಯರು ಭಾರೀ ಅವಾಂತರ ಸೃಷ್ಟಿಸಿದ್ದು, ಕುಡಿದ ಮತ್ತಿನಲ್ಲಿದ್ದ ಮೂವರು ಯುವತಿಯರು ಪೊಲೀಸರನ್ನೇ ಥಳಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಈ ಘಟನೆ ಗೋಕುಲ್ ಟೌನ್ಶಿಪ್ನಲ್ಲಿರುವ ಪಂಖಾ ಫಾಸ್ಟ್ ಎಂಬ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ನಡೆದಿದ್ದು, ಕುಡಿತದ ಮತ್ತಿನಲ್ಲಿರುವ ಮೂವರು ಯುವತಿಯ ದುರ್ವತನೆ ಮೊಬೈನಲ್ಲಿ ಸೆರೆಯಾಗಿದ್ದು,ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೊಲೀಸರು ಮೂವರು ಯುವತಿಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ವಿರಾರ್ ಪಶ್ಚಿಮದಲ್ಲಿರುವ ಗೋಕುಲ್ ಟೌನ್ಶಿಪ್ನಲ್ಲಿ ಪಂಖಾ ಫಾಸ್ಟ್ ಎಂಬ ಪಬ್ ಇದ್ದು, ಈ ಪಬ್ ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಬಗ್ಗೆ ಮಾಹಿತಿ ಪಡೆದ ಅರ್ನಾಳ ಸಾಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಮೂವರು ಕುಡಿತದ ಮತ್ತಿನಲ್ಲಿದ್ದ ಮಹಿಳೆಯರು ಪೊಲೀಸ್ ತಂಡದೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ನಂತರ ನಿಂದಿಸಿ ಥಳಿಸಿದ್ದಾರೆ. ಈ ಪ್ರಕರಣದಲ್ಲಿ ಅರ್ನಾಳ ಸಾಗರ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಉತ್ಕರ್ಷ ವಂಜರಿ (25) ದೂರು ನೀಡಿದರು.