ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಅಮೀನಗಡ ಪಟ್ಟಣ ಪಂಚಾಯಿತಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೊಬ್ಬರು ಶುಕ್ರವಾರ ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ.
೧೬ ಸದಸ್ಯ ಸ್ಥಾನದ ಚುನಾವಣೆಗೆ ನಾಮಪತ್ರಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿತ್ತು. ಸಲ್ಲಿಕೆಯಾದ ೫೫ ನಾಮಪತ್ರಗಳಲ್ಲಿ ೭ ತಿರಸ್ಕೃತಗೊಂಡು ೪೮ ಕ್ರಮಬದ್ಧವಾಗಿದ್ದವು. ಡಿ.೧೮ರ ವರೆಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶವಿತ್ತು. ೧೬ ವಾರ್ಡ್ಗಳಲ್ಲಿ ೧೫ ಬಿಜೆಪಿ, ೧೪ ಕಾಂಗ್ರೆಸ್, ೧ ಜೆಡಿಎಸ್ ಹಾಗೂ ೧೮ ಪಕ್ಷೇತರರ ನಾಮಪತ್ರಗಳು ಕ್ರಮಬದ್ಧವಾಗಿದ್ದವು.
ಎಲ್ಲರ ಚಿತ್ತ ಪಕ್ಷೇತರರತ್ತ ನೆಟ್ಟಿದ್ದರೆ ಹಿಂವಬ ವರ್ಗಕ್ಕೆ ಮೀಸಲಾದ ವಾರ್ಡ್ ೧೬ರಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ ಫಾರಂ ಪಡೆದು ಸ್ಪರ್ದಿಸಿದ್ದ ಬಸವರಾಜ ಸೊಬಗಿನ ಶುಕ್ರವಾರ ತಮ್ಮ ನಾಮಪತ್ರ ವಾಪಸ್ ಪಡೆದಿದ್ದು ಕುತೂಹಲಕ್ಕೆ ಕಾರಣವಾಗಿದೆ. ಇವರು ನಾಮಪತ್ರ ವಾಪಸ್ ಪಡೆದಿದ್ದರಿಂದ ವಾರ್ಡ್ ೧೬ರಲ್ಲಿ ಬಿಜೆಪಿ ಹಾಗೂ ಬಿಜೆಪಿಯಿಂದ ಉಚ್ಚಾಟಿತಗೊಂಡ ಪಕ್ಷೇತರರಿಬ್ಬರು ಕಣದಲ್ಲಿದ್ದಂತಾಗಿದೆ.
ಮತ್ತೊಂದೆಡೆ ವಾರ್ಡ್-1, 11, 12, ಹಾಗೂ 15ರಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಅವರದ್ದೇ ಪಕ್ಷದ ಪ್ರಮುಖ ಮುಖಂಡರು ಸ್ಪರ್ದಿಸಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಈ ಪ್ರಕ್ರಿಯೆ ಬಿಸಿತುಪ್ಪವಾಗಿ ಪರಿಣಮಿಸಿದೆ ಎನ್ನಲಾಗಿದೆ. ನಾಮಪತ್ರ ವಾಪಸ್ ಪಡೆಯಲು ಇಂದು ಅಂತಿಮ ದಿನವಾಗಿದ್ದು ಪಕ್ಷೇತರರ ಮನವೊಲಿಸುತ್ತಾರೋ? ಅಥವಾ ಬಂಡಾಯ ಎದುರಿಸುತ್ತಾರೋ ಕಾದು ನೋಡಬೇಕಿದೆ.
ವಾರ್ಡ್ ೧ರಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಬಂಡಾಯವಾಗಿ ರ್ಸ್ಪಸಿದ್ದು ಅವರು ಕಣದಲ್ಲಿ ಉಳಿಯುತ್ತಾರೋ? ಅಥವಾ ನಾಮಪತ್ರ ವಾಪಸ್ ಪಡೆಯುತ್ತಾರೋ ಕುತೂಹಲಕ್ಕೆ ಕಾರಣವಾಗಿದೆ. ನಾಮಪತ್ರ ವಾಪಸ್ ಪಡೆಯಲು ಇನ್ನೊಂದು ದಿನ ಬಾಕಿ ಇದ್ದು ತಮ್ಮ ವಾರ್ಡ್ನಲ್ಲಿ ಪಕ್ಷೇತರರಾಗಿ ರ್ಸ್ಪಸಿ ಗೆಲುವಿಗೆ ತೊಡಕಾಗುತ್ತಾರೆ ಎಂಬುದನ್ನು ಅರಿತ ರಾಷ್ಟಿçಯ ಪಕ್ಷದ ಮುಖಂಡರು ಅವರ ನಾಮಪತ್ರ ಹಿಂಪಡೆದುಕೊಳ್ಳಲು ಮನವೊಲಿಸುವ ನಿಟ್ಟಿನಲ್ಲಿ ನಾನಾ ಕಸರತ್ತು ಆರಂಭಿಸಿದ್ದಾರೆ.
ಪಕ್ಷದಿಂದ ಘೋಷಿಸಿದ ಅಭ್ಯರ್ಥಿಗಳ ವಿರುದ್ಧ ರ್ಸ್ಪಸಿರುವವರ ನಾಮಪತ್ರ ಹಿಂಪಡೆಯುವಂತೆ ಮನವೊಲಿಕೆ ಕಾರ್ಯ ನಡೆದಿದೆ. ಕಣದಲ್ಲಿ ಉಳಿದರೆ ಪಕ್ಷ ಶಿಸ್ತುಕ್ರಮ ಕೈಗೊಳ್ಳಲಿದೆ.
-ಎಸ್.ಎಸ್.ಚಳ್ಳಗಿಡದ, ಅಧ್ಯಕ್ಷರು, ಕಾಂಗ್ರೆಸ್ ನಗರ ಘಟಕ. ಅಮೀನಗಡ.