This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Politics News

ಗ್ರಾಪಂ ಚುನಾವಣೆ ಶಾಂತಿಯುತ

೨ನೇ ಹಂತ : ಶೇ.೭೯.೬೭ ರಷ್ಟು ಮತದಾನ

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ ಎರಡನೇ ಹಂತದಲ್ಲಿ ೫ ತಾಲೂಕುಗಳಲ್ಲಿ ಬರುವ ೧೦೨ ಗ್ರಾ.ಪಂ ಪಂಚಾಯತಿಗಳಿಗೆ ರವಿವಾರ ಮತದಾನ ನಡೆದಿದ್ದು, ಒಟ್ಟು ಶೇ.೭೯.೬೭ ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಎರಡನೇ ಹಂತದ ೫ ತಾಲೂಕುಗಳ ಪೈಕಿ ಬಾಗಲಕೋಟೆ ಶೇ.೮೨.೪೫ ರಷ್ಟು ಮತದಾನವಾದರೆ, ಹುನಗುಂದ ಶೇ.೭೮.೧೪ ರಷ್ಟು, ಬಾದಾಮಿ ಶೇ.೮೧.೧೬, ಇಲಕಲ್ಲ ಶೇ.೭೫.೨೦ ಹಾಗೂ ಗುಳೇದಗಡ್ಡ ತಾಲೂಕಿನಲ್ಲಿ ಶೇ.೮೧.೩೯ ರಷ್ಟು ಮತದಾನವಾಗಿದೆ. ಬಾಗಲಕೋಟೆ ತಾಲೂಕಿನಲ್ಲಿ ಅತೀ ಹೆಚ್ಚು ಮತದಾನವಾದರೆ, ಅತೀ ಕಡಿಮೆ ಇಲಕಲ್ಲ ತಾಲೂಕಿನಲ್ಲಿ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಬಾಗಲಕೋಟೆ ತಾಲೂಕಿನಲ್ಲಿ ಬೆಳಿಗ್ಗೆ ೭ ರಿಂದ ೮ ವರೆಗೆ ಶೇ.೯.೫, ೧೧ ಗಂಟೆಗೆ ಶೇ.೨೬.೪, ಮಧ್ಯಾಹ್ನ ೧ಕ್ಕೆ ೬೪.೫೯, ಸಂಜೆ ೫ಕ್ಕೆ ೮೨.೪೫ ರಷ್ಟು ಮತದಾನವಾಗಿದೆ. ಹುನಗುಂದ ತಾಲೂಕಿನಲ್ಲಿ ೯ ಗಂಟೆಗೆ ಶೇ.೬.೩೬, ೧೧ ಗಂಟೆಗೆ ೨೧.೩, ಮಧ್ಯಾಹ್ನ ೧ ಗಂಟೆಗೆ ಶೇ.೪೩.೨೪, ೩ ಗಂಟೆಗೆ ಶೇ.೬೧.೫೮, ಸಂಜೆ ೫ಕ್ಕೆ ೭೮.೧೪, ಬಾದಾಮಿ ಬೆಳಿಗ್ಗೆ ೯ಕ್ಕೆ ಶೇ.೫.೦೬, ೧೧ಕ್ಕೆ ಶೇ.೨೪.೨೧, ಮಧ್ಯಾಹ್ನ ೧ಕ್ಕೆ ೪೬.೧೧, ೩ಕ್ಕೆ ಶೇ.೬೫, ಸಂಜೆ ೫ಕ್ಕೆ ೮೧.೧೬, ಇಲಕಲ್ಲ ಬೆಳಿಗ್ಗೆ ಶೇ.೫.೪೭, ೧೧ಕ್ಕೆ ಶೇ.೨೪.೬೧, ಮಧ್ಯಾಹ್ನ ೧ಕ್ಕೆ ಶೇ.೪೪.೫೧, ೩ಕ್ಕೆ ಶೇ.೬೨.೫೪, ಸಂಜೆ ೫ಕ್ಕೆ ೭೫.೨, ಗುಳೇದಗುಡ್ಡ ತಾಲೂಕಿನಲ್ಲಿ ಬೆಳಿಗ್ಗೆ ೯ವರೆಗೆ ಶೇ.೭.೩೩, ೧೧ಕ್ಕೆ ಶೇ.೨೩.೩೭, ಮಧ್ಯಾಹ್ನ ೧ಕ್ಕೆ ೪೪.೧೬, ೩ಕ್ಕೆ ಶೇ.೬೩.೫೪, ಸಂಜೆ ೫ಕ್ಕೆ ಶೇ.೮೧.೩೯ ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಮೊದಲನೇ ಹಂತದಲ್ಲಿ ಶೇ.೮೩.೩೨ ರಷ್ಟು ಮತದಾನವಾದರೆ, ಎರಡನೇ ಹಂತದ ಚುನಾವಣೆಯಲ್ಲಿ ಶೇ.೭೯.೬೭ ರಷ್ಟು ಮತದಾನವಾಗುವ ಮೂಲಕ ಒಟ್ಟಾರೆಯಾಗಿ ಶೇ.೮೧.೫೦ ರಷ್ಟು ಮತದಾನವಾಗಿದೆ ಎಂದು ತಿಳಿಸಿದ್ದಾರೆ.

೨ನೇ ಹಂತದ ಗ್ರಾ.ಪಂ ಚುನಾವಣೆಗೆ ಶಾಂತಿಯುತ ಮತದಾನ
ಕಲಾದಗಿ ಗ್ರಾಮದ ಮತಗಟ್ಟೆ ೫೧ಕ್ಕೆ ಮರು ಮತದಾನ

ಜಿಲ್ಲೆಯ ಎರಡನೇ ಹಂತದಲ್ಲಿ ೫ ತಾಲೂಕುಗಳಲ್ಲಿ ಬರುವ ೧೦೨ ಗ್ರಾ.ಪಂ ಪಂಚಾಯತಿಗಳಿಗೆ ರವಿವಾರ ಶಾಂತಿಯುತವಾಗಿ ಮತದಾನ ನಡೆದಿದ್ದು, ಕಲಾದಗಿ ಗ್ರಾಮದ ಮತಗಟ್ಟೆ ೫೧ಕ್ಕೆ ಡಿಸೆಂಬರ ೨೯ ರಂದು ಮರು ಮತದಾನ ನಡೆಯಲಿದೆ.

ಎರಡನೇ ಹಂತದಲ್ಲಿ ಜಿಲ್ಲೆಯ ಬಾಗಲಕೋಟೆ, ಬಾದಾಮಿ, ಹುನಗುಂದ, ಇಲಕಲ್ಲ, ಗುಳೇದಗುಡ್ಡ ಸೇರಿ ಒಟ್ಟು ೫ ತಾಲೂಕುಗಳ ಒಟ್ಟು ೧೦೨ ಗ್ರಾಮ ಪಂಚಾಯತಿಗಳ ೧೩೮೦ ಸ್ಥಾನಗಳಿಗೆ ಬೆಳಿಗ್ಗೆ ೭ ರಿಂದ ಮತದಾನ ಪ್ರಾರಂಭವಾಗಿದ್ದು, ೯ ಗಂಟೆ ಸುಮಾರಿಗೆ ಶೇ.೬.೭೫ ರಷ್ಟು ಮತದಾನವಾದರೆ, ೧೧ ಗಂಟೆಗೆ ಶೇ.೨೩.೯೭ ರಷ್ಟು, ಮಧ್ಯಾಹ್ನ ೧ ಗಂಟೆಗೆ ಶೇ.೫೫.೦೪ ರಷ್ಟು ಹಾಗೂ ೩ ಗಂಟೆಗೆ ಶೇ.೬೨.೬೫ ರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ.

ಮರು ಮತದಾನ :
ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮ ಪಂಚಾಯತಿಯ ವಾರ್ಡ ನಂ.೧೧ರ ಮತಗಟ್ಟೆ ಸಂಖ್ಯೆ ೫೧ಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಯ ಚಿಹ್ನೆ ಬದಲಾವಣೆಯಾಗಿರುವ ಕಾರಣ ಮತದಾನವನ್ನು ಬೆಳಿಗ್ಗೆ ೭.೩೦ಕ್ಕೆ ಸ್ಥಗಿತಗೊಳಿಸಲಾಗಿದೆ. ಸದರಿ ಮತಗಟ್ಟೆಗೆ ಡಿಸೆಂಬರ ೨೯ ರಂದು ಬೆಳಿಗ್ಗೆ ೭ ರಿಂದ ಸಂಜೆ ೫ ರವರೆಗೆ ಮರು ಮತದಾನ ಜರುಗಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಉತ್ಸಾಹ ತೋರಿದ ಮಹಿಳಾ ಮತದಾರರು :
ಜಿಲ್ಲೆಯ ಗುಳೇದಗುಡ್ಡ, ಬಾದಾಮಿ ಹಾಗೂ ಹುನಗುಂದ ತಾಲೂಕಿನ ವಿವಿಧ ಗ್ರಾಮಗಳ ಮತಗಟ್ಟೆಗಳಲ್ಲಿ ಮತದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿತು.

ಗುಳೇದಗುಡ್ಡ ತಾಲೂಕಿನ ಕೆಲವಡಿ ಗ್ರಾಮದ ಮತಗಟ್ಟೆ ಸಂಖ್ಯೆ ೨೯ ರಲ್ಲಿ ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ೮೨೪ ಮತದಾರರ ಪೈಕಿ ೧೮೭ ಜನ ಮತದಾನ ಮಾಡಿದ್ದು, ೯೪ ಪುರುಷ ಮತ್ತು ೯೫ ಮಹಿಳಾ ಮತದಾರರಿದ್ದರು. ತಿಮ್ಮಸಾಗರ ಗ್ರಾಮದ ಮತಗಟ್ಟೆ ಸಂಖ್ಯೆ ೩೨ ರಲ್ಲಿ ೬೩೪ ಮತದಾರರ ಪೈಕಿ ೨೨೯ ಮತದಾನವಾಗಿದ್ದು, ಅದರಲ್ಲಿ ೧೦೫ ಪುರುಷ, ೧೨೪ ಮಹಿಳಾ ಮತದಾರರಿದ್ದರು.

ಬಾದಾಮಿ ತಾಲೂಕಿನ ಪಟ್ಟದಕಲ್ಲ ಗ್ರಾಮದ ಮತಗಟ್ಟೆ ಸಂಖ್ಯೆ ೧೩೯ಎ ರಲ್ಲಿ ಮಧ್ಯಾಹ್ನ ೧೨ ಗಂಟೆಗೆ ೬೫೦ ಮತದಾರರ ಪೈಕಿ ೨೯೭ ಮತದಾನವಾಗಿದ್ದು, ೧೩೯ ಪುರುಷ ಮತ್ತು ೧೬೨ ಮಹಿಳೆಯರು ಮತದಾನ ಮಾಡಿದ್ದರು. ೧೩೯ ಸಂಖ್ಯೆಯ ಮತಗಟ್ಟೆಯಲ್ಲಿ ೫೯೬ ಮತದಾರರ ಪೈಕಿ ೩೨೧ ಜನ ಮತದಾನ ಮಾಡಿದ್ದು, ಅದರಲ್ಲಿ ೧೪೮ ಪುರುಷ, ೧೭೨ ಮಹಿಳಾ ಮತದಾರರಿದ್ದರು. ಹುನಗುಂದ ತಾಲೂಕಿನ ಐಹೊಳೆ ಗ್ರಾಮದ ಮತಗಟ್ಟೆ ಸಂಖ್ಯೆ ೭೦ರಲ್ಲಿ ಮಧ್ಯಾಹ್ನ ೧ ಗಂಟೆಗೆ ೭೧೩ ಮತದಾರರ ಪೈಕಿ ೪೦೭ ಜನ ಮತ ಚಲಾಯಿಸಿದ್ದರು. ಅದರಲ್ಲಿ ೧೬೮ ಪುರುಷ, ೨೩೯ ಮಹಿಳಾ ಮತದಾರರಿದ್ದರು. ೬೯ ಮತಗಟ್ಟೆಯಲ್ಲಿ ೭೬೬ ಪೈಕಿ ೩೫೮ ಜನ ಮತದಾನವಾಗಿದ್ದು ಕಂಡುಬAದಿತು.

ಗುಳೇದಗುಡ್ಡ, ಬಾದಾಮಿ ಹಾಗೂ ಹುನಗುಂದ ತಾಲೂಕಿನ ಕೆಲವು ಗ್ರಾಮಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಾಗಿ ಮತಗಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮತದಾನ ಮಾಡಲು ಸಾಲು ಸಾಲಾಗಿ ನಿಂತಿದ್ದರು. ಮತಗಟ್ಟೆಗಳಿಗೆ ಆಗಮಿಸುವ ಮತದಾರರನ್ನು ಆಶಾ ಕಾರ್ಯಕರ್ತೆಯರು ಕೈಗಳಿಗೆ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಯಾನಿಂಗ್ ಮಾಡಲಾಯಿತು. ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತದಿಂದ ಸೂಕ್ತ ಪೊಲೀಸ್ ಬಂದೋಬಸ್ತ ವ್ಯವಸ್ಥೆ ಮಾಡಲಾಗಿತ್ತು.

Nimma Suddi
";