This is the title of the web page
This is the title of the web page

Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Politics News

ನನಗೆ ಟಿಕೆಟ್ ನಿರಾಕರಿಸಲು ಪಕ್ಷ ಯಾರಪ್ಪಂದು?

ನಿರಾಣಿ ವಿರುದ್ಧ ಮತ್ತೆ ತೊಡೆ ತಟ್ಟಿದ ಯತ್ನಾಳ

ನಿಮ್ಮ ಸುದ್ದಿ ವಿಜಯಪುರ

ಯತ್ನಾಳ ಪಕ್ಷ ಬಿಟ್ಟು ಹೋಗಬೇಕು. ಅವರಿಗೆ ಈ ಬಾರಿ ಟಿಕೆಟ್ ಇಲ್ಲ ಎಂದು ಹೇಳಿದ ಬೃಹತ್ ಕೈಗಾರಿಕೆ ಸಚಿವ ಮುರಗೇಶ ನಿರಾಣಿ ವಿರುದ್ಧ ಮತ್ತೆ ತೊಡೆ ತಟ್ಟಿದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಪಕ್ಷ ಯಾರಪ್ಪನದು ಎನ್ನುವ ಮೂಲಕ ನಿರಾಣಿ ವಿರುದ್ಧ ಬೆಂಕಿಯ ಕಿಡಿಕಾರಿದರು.

ನಗರದಲ್ಲಿ ಭಾನುವಾರ ಮಾತನಾಡಿದ ಅವರು, ವಿಜಯಪುರದಲ್ಲಿ ಪಕ್ಷ ಕಟ್ಟಿದವರು ನಾವು. ಹಳ್ಳಿಯಲ್ಲಿರುವ ರೈತರನ್ನು ಕೇಳಿದರೂ ಯತ್ನಾಳ ಅವರೇ ಬಿಜೆಪಿ ಕಟ್ಟಿದವರು. ನಮ್ ಯತ್ನಾಳ್ ಗೌಡಪ್ಪನೇ ಜಿಲ್ಲೆಯಲ್ಲಿ ಪಾರ್ಟಿ ಕಟ್ಯಾನ್. ನಮ್ಮೂರಿಗೆ ಕಮಲದ ಹೂವು ತಂದವನೇ ಗೌಡಪ್ಪನೇ ಎಂದು ಹೇಳುತ್ತಾರೆ. ಅಷ್ಟರ ಮಟ್ಟಿಗೆ ನನ್ನ ಹಾಗೂ ಬಿಜೆಪಿ ಬಾಂಧವ್ಯವಿದೆ. ನನ್ನನ್ನು ಪಕ್ಷದಿಂದ ಹೊರ ಹಾಕುವ ತಾಕತ್ತು ಯಾರಿಗಿಲ್ಲ ಎಂದು ಗುಡುಗಿದರು.

ಯತ್ನಾಳ ಪಕ್ಷ ಬಿಟ್ಟು ಹೋಗಬೇಕು. ಅವನಿಗೆ ಈ ಬಾರಿ ಟಿಕೆಟ್ ನೀಡಲ್ಲ ಎಂದು ಹೇಳಿದ್ದಾನಲ್ಲ. ನೀವೇ ನೋಡುವಿರಂತೆ. ಉತ್ತರಾಯನ ಇಂದು ಆರಂಭವಾಗಿದೆ. ನನ್ನ ಟಿಕೆಟ್ ಬಿಡಿ. ಅವರಿಗೆ ನಾನೇ ಟಿಕೆಟ್ ನೀಡುವ ಕಾಲ ಬರಲಿದೆ ಎಂದರು. ಚಿಲ್ಲರೆ ವ್ಯಕ್ತಿಗಳ ಚಿಲ್ಲರೆ ಹೇಳಿಕೆಗೆ ಪ್ರತಿಕ್ರಿಯಿಸಬಾರದೆಂದು ಕೇಂದ್ರ ನಾಯಕರು ನನಗೆ ಸೂಚಿಸಿದ್ದಾರೆ ಎಂದರು.

ರಾಜ್ಯದಲ್ಲಿ ನಡೆದಿರುವ ಎಲ್ಲ ಬೆಳವಣಿಗೆಗಳನ್ನು ಪಕ್ಷ ನಾಯಕರು ಗಮನಿಸುತ್ತಿದ್ದಾರೆ. ಚಿಲ್ಲರೆ ವ್ಯಕ್ತಿಗಳು ಹಾಗೂ ಸಂಸ್ಕಾರವಿಲ್ಲದ ವ್ಯಕ್ತಿಗಳ ಕುರಿತು ಇಂದು ಮಾತನಾಡಲ್ಲ ಎಂದರು.

*ಮೀಸಲಾತಿಗೆ ಹೈಕಮಾಂಡ್ ಅಸ್ತು*: ನಾವೆಲ್ಲ ಮಕರ ಸಂಕ್ರಮಣದ ಸಂಭ್ರಮದಲ್ಲಿದ್ದೇವೆ. ಈ ಹಬ್ಬ ನಮಗೆ ಸಂತಸ ತಂದಿದ್ದು, ನಮ್ಮ ಸಮಾಜದ ಬಹು ನಿರೀಕ್ಷಿತ ಮೀಸಲಾತಿ ಬೇಡಿಕೆ ಈಡೇರಿಸಲು ಹೈಕಮಾಂಡ್ ಅಸ್ತು ಎಂದಿದೆ ಎಂದುಯತ್ನಾಳ ಹೇಳಿದರು.
ಪಕ್ಷದ ಹೈಕಮಾಂಡ್‌ನವರು ಬೆಳಗ್ಗೆ ಕರೆ ಮಾಡಿ, ಮೀಸಲಾತಿ ವಿಚಾರದಲ್ಲಿ ಶೀಘ್ರ ಸಭೆ ಕರೆಯುವುದಾಗಿ ತಿಳಿಸಿದ್ದಾರೆ ಎಂದು ಸಂತಸ ಹಂಚಿಕೊಂಡರು.

ತನ್ಮೂಲಕ ಕಳೆದ ಎರಡು ವರ್ಷಗಳಿಂದ ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಗೆ ಪ್ರತಿಲ ಸಿಕ್ಕಂತಾಗಿದ್ದು, ಮಕರ ಸಂಕ್ರಮಣದ ಉತ್ತರಾಯಣದ ಶುಭ ಪ್ರಸಂಗದಲ್ಲಿ ನಿಲುವು ತೆಗೆದುಕೊಂಡಿರುವುದು ನಮಗೆ ಸಂತಸವನ್ನುಂಟು ಮಾಡಿದೆ ಎಂದರು.

ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಶೀಘ್ರದಲ್ಲೇ ಕೇಂದ್ರ ನಾಯಕರ ಭೇಟಿಗೆ ತೆರಳುತ್ತೇವೆ. ಶೀಘವೇ ಕೇಂದ್ರ ಸರಕಾರ ಒಳ್ಳೆಯ ಸುದ್ದಿ ನೀಡಲಿದೆ ಎಂದರು.

ಜ. 21ರಂದು ವಿಜಯಪುರಕ್ಕೆ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಆಗಮಿಸುತ್ತಿದ್ದಾರೆ. ಮೀಸಲಾತಿ ವಿಚಾರವನ್ನು ಕೇಂದ್ರದ ವರಿಷ್ಠ ಮಂಡಳಿ ಗಂಭೀರವಾಗಿ ಪರಿಗಣಿಸಿದೆ. ದೊಡ್ಡ ಸಮುದಾಯಕ್ಕೆ ಚುನಾವಣೆ ಪೂರ್ವ ನ್ಯಾಯ ಕೊಡದಿದ್ದರೆ, ಪರಿಣಾಮ ಸರಿಯಿರಲ್ಲ ಎಂಬುದಾಗಿ ವರಿಷ್ಠರು ಚಿಂತನೆ ಮಾಡಿದ್ದಾರೆ ಎಂದರು.

ಚಿಲ್ರೆ, ಪಲ್ರೇ ಗ್ಯಾಂಗ್‌ಗಳ ಬಗ್ಗೆ ಅವರಿಗೇನು ಗೊತ್ತು. ಚಿಲ್ಲರೆಗಳಿಗೆ ಯತ್ನಾಳರನ್ನು ತುಳಿಯುವುದನ್ನು ಬಿಟ್ಟರೆ ಮತ್ತೇನು ಗೊತ್ತಿಲ್ಲ. ಅವರನ್ನು ಯಾರು ತುಳಿಯಲಿಕ್ಕಾಗಲ್ಲ. ಯತ್ನಾಳ ಬೇರು ಬಹಳ ಆಳವಾಗಿವೆ. ಬಿಜೆಪಿ ಸಂಘಟನೆಯಲ್ಲಿಯತ್ನಾಳ ಶಕ್ತಿ ಅಡಗಿದೆ ಎಂದು ಸಮರ್ಥಿಸಿಕೊಂಡರು.

ಜನರಲ್ಲಿ ನಮ್ಮ ಬೇರುಗಳಿವೆ. ನನ್ನನ್ನು ಜನರು ಬಿಡಲ್ಲ. ಜನರಿದ್ದವರಿಗೆ ಲೀಡರ್ ಎಂದು ಕರೆಯುತ್ತಾರೆ ಎಂದರು.
ನಿರಾಣಿ ಹೇಳಿಕೆ ಕುರಿತು ಕಮೆಂಟ್ಸ್ ನೋಡಿ ಎಂದು ಮಾಧ್ಯಮಗಳಿಗೆ ಸಲಹೆ ನೀಡಿದ ಅವರು, ಆತನಿಗೆ 420 , ಲೂಟಿಕೋರ, ಸಮಾಜಘಾತುಕ ಎಂಬಿತ್ಯಾದಿ ಕಮೆಂಟ್ ಹಾಕಿದ್ದಾರೆ. 72 ಸಾವಿರ ಜನರಿಗೆ ಉದ್ಯೋಗ ನೀಡಿದ್ದಾಗಿ ಹೇಳಿರುವ ನಿರಾಣಿಗೆ ಒಬ್ಬರಾದರೂ ಜನ ನಾಯಕ, ಧೀಮಂತ ನಾಯಕ ಎಂದು ಕಮೆಂಟ್ ಹಾಕಿದ್ದಾರಾ ಎಂದು ಪ್ರಶ್ನಿಸಿದರು.

Nimma Suddi
";