ಬೆಂಗಳೂರು: ದಪ್ಪ ಇರುವುದಕ್ಕೆ ಪತಿಯ ನಿಂದನೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿನ ವಿಚಾರಕ್ಕೆ ದಾಂಪತ್ಯ ಕಲಹ ಉಂಟಾಗಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವೇಶ್ವರನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಜುನಾಥನಗರ ನಿವಾಸಿ ಸಂಧ್ಯಾ ಆಧಿತ್ಮಹತ್ಯೆ ಮಾಡಿಕೊಂಡಿದ್ದು, ಎಂ.ಎಸ್ಸಿ ಸ್ನಾತಧಿಕೋತ್ತರ ಪದವೀಧರೆ ಸಂಧ್ಯಾ, ತಮ್ಮ ಪತಿ ಜಯಪ್ರಕಾಶ್ ಕುಟುಂಬದ ಜತೆ ವಾಸಿಸುತ್ತಿದ್ದರು. ಗುರುವಾರ ರಾತ್ರಿ ದಂಪತಿ ನಡುವೆ ಜಗಳ ನಡೆದಿದೆ.
ಮಗಳು ಸಂಧ್ಯಾ ಆತ್ಮಹತ್ಯೆಗೆ ಅಳಿಯ ಜಯಪ್ರಕಾಶ್ ಹಾಗೂ ಕುಟುಂಬಸ್ಥರ ದೈಹಿಕ, ಮಾನಸಿಕ ಕಿರುಕುಳವೇ ಕಾರಣ ಎಂದು ಆರೋಪಿಸಿ ಅವರ ತಂದೆ, ಬಿಎಂಟಿಸಿ ನಿವೃತ್ತ ಚಾಲಕ ಕಂದನ್ ದೂರು ನೀಡಿದರು.
ಈ ನಿಟ್ಟಿನಲ್ಲಿಆತ್ಮಹತ್ಯೆಗೆ ಪ್ರಚೋದನೆ ಹಾಗೂ ಕೌಟುಂಬಿಕ ದೌರ್ಜನ್ಯದ ಆರೋಪದನ್ವಯ ಪ್ರಕರಣ ದಾಖಲಿಸಿಕೊಂಡು ಸಂಧ್ಯಾ ಪತಿ ಸಾಫ್ಟ್‌ವೇರ್ ಎಂಜಿನಿಯರ್ ಜಯಪ್ರಕಾಶ್ (36) ಅವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಾದ ಜಯಪ್ರಕಾಶ್ ಪೋಷಕರ ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಜಗಳದಿಂದ ಬೇಸತ್ತು 9 ಗಂಟೆ ಸುಮಾರಿಗೆ ತನ್ನ ಕೊಠಡಿಗೆ ತೆರಳಿದ್ದ ಸಂಧ್ಯಾ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೆಲ ಸಮಯದ ಬಳಿಕ ಇದನ್ನು ಗಮನಿಸಿದ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಸಂಧ್ಯಾ ಉಸಿರುಚೆಲ್ಲಿದ್ದರು ಎಂದು ಪೊಲೀಸರು ಸೂಚಿಸಿದರು.