ಟೋಕಿಯೊ: ಐತಿಹಾಸಿಕ ನಿರ್ಧಾರದಲ್ಲಿ, ಜಪಾನ್‌ನಲ್ಲಿ ಶತಮಾನಗಳಿಂದ ಚಾಲ್ತಿಯಲ್ಲಿರುವ ‘ನಗ್ನ ಪುರುಷ’ರ ಉತ್ಸವದಲ್ಲಿ ಮಹಿಳೆಯರೂ ಪಾಲ್ಗೊಳ್ಳಲು ಮಂದಿರವು ಅನುಮತಿ ನೀಡಿದ್ದು, 1650 ವರ್ಷಗಳ ಇತಿಹಾಸದಲ್ಲಿ ಈ ಅವಕಾಶ ನೀಡಿರುವುದು ಇದೇ ಮೊದಲ ಸಲವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಇದೇ ಮೊದಲ ಬಾರಿಗೆ ಮಹಿಳೆಯರೂ ಈ ಉತ್ಸವದಲ್ಲಿ ಭಾಗವಹಿಸಬಹುದು ಎಂದು ಮಂದಿರ ತಿಳಿಸಿದೆ. ಆದರೆ ಅದಕ್ಕೆ ಕೆಲವು ಷರತ್ತುಗಳನ್ನು ಹಾಕಲಾಗಿದೆ ಎಂದು ಸೌತ್ ಚೀನಾ ಮಾರ್ನಿಂಗ್ ವರದಿ ಮಾಡಿದೆ.ಪುರುಷರಿಗೆ ಮಾತ್ರ’ ಇರುವ ಉತ್ಸವದ ಕೆಲವು ಆಚರಣೆಗಳಲ್ಲಿ ತೊಡಗಿಕೊಳ್ಳಲು 40 ಮಹಿಳೆಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ
ಹಡಕಾ ಮತ್ಸುರಿ’ ಎಂದು ಕರೆಯಲಾಗುವ ಈ ಸಾಂಪ್ರದಾಯಿಕ ಉತ್ಸವವನ್ನು ಜಪಾನ್‌ನ ಐಚಿ ಜಿಲ್ಲೆಯ ಇನಾಜಾವಾ ಪಟ್ಟಣದಲ್ಲಿನ ಕೊನೊಮಿಯಾ ಮಂದಿರವು ಆಯೋಜಿಸುತ್ತಿದ್ದು, ಈ ವರ್ಷದ ಫೆ. 22ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ. ಸುಮಾರು 10 ಸಾವಿರ ಸ್ಥಳೀಯ ಪುರುಷರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
‘ನಗ್ನ ಪುರುಷ’ರ ಉತ್ಸವದಲ್ಲಿ ಮಹಿಳೆಯರು ಸಂಪೂರ್ಣ ಉಡುಗೆ ಧರಿಸಿರಬೇಕಿದ್ದು, ಸಾಂಪ್ರದಾಯಿಕ ಹ್ಯಾಪಿ ಕೋಟ್‌ಗಳನ್ನು ತೊಡಬೇಕು. ಸೊಂಟದ ಭಾಗದ ಉಡುಗೆ ಮಾತ್ರ ತೊಟ್ಟಿರುವ ಬಹುತೇಕ ಬೆತ್ತಲಾದ ಪುರುಷರ ಸಾಂಪ್ರದಾಯಿಕ ಹಿಂಸಾತ್ಮಕ ಘರ್ಷಣೆಯಿಂದ ದೂರ ಇರಬೇಕು ಎಂದು ‘ಇಂಡಿಪೆಂಡೆಂಟ್’ ವರದಿ ತಿಳಿಸಿದೆ.