| Latest Version 9.0.7 |

State News

ಯುಕೆಪಿ ಮೂರನೇ ಹಂತ, ಸಿಎಂ ನೇತೃತ್ವದಲ್ಲಿ ಬೆಂಗಳೂರಲ್ಲಿ ಸಭೆ, ಸಭೆಯತ್ತ ಸಂತ್ರಸ್ತರ ಚಿತ್ತ

 ಬಾಗಲಕೋಟೆ:  ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಭೂಸ್ವಾಧೀನ ಪ್ರಕ್ರಿಯೆ ಶುರು ಮಾಡಲು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಸೆ.3ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು, ಎಲ್ಲ ಸಂತ್ರಸ್ತರ ಚಿತ್ತ ಸಭೆಯತ್ತ ನೆಟ್ಟಿದೆ.

ಸಂತ್ರಸ್ತರ ಸಂಘಟನೆಯ ಮುಖಂಡರು, ಶಾಸಕರುಗಳು, ಸಚಿವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಸಂತ್ರಸ್ತರ ಪರಿಹಾರಕ್ಕೆ ಸೂತ್ರ ಕಂಡುಹಿಡಿಯುವ ಸಾಧ್ಯತೆಗಳಿವೆ. ಈ ಸಭೆಯಲ್ಲಿ ಎಲ್ಲರ ಒಪ್ಪಿಗೆ ದೊರೆತರೆ ಮಾತ್ರ ಮುಂದಿನ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಇಲ್ಲದಿದ್ದರೆ ಮತ್ತೆ ನನೆಗುದಿಗೆ ಬೀಳಲಿದೆ.

ಸವಾಲು, ಪ್ರತಿಸವಾಲಿನ ಹಿಂದೆ ಹೊರಬಿತ್ತು ಸ್ಪೋಟಕ ವಿಷಯ https://nimmasuddi.com/the-challenge-is-the-explosive-thing-that-went-out-behind/

ಈ ಬೃಹತ್ ಯೋಜನೆಗೆ ಕಾರ್ಯಗತಗೊಳಿಸಲು ಸರಕಾರಕ್ಕೆ ಏನಿಲ್ಲವೆಂದರೂ 2 ಲಕ್ಷ ಕೋಟಿ ರೂ. ಹಣ ಬೇಕಾಗಿದೆ. ರೈತರು ಹೆಚ್ಚಿನ ದರಕ್ಕೆ ಬೇಡಿಕೆ ಇಟ್ಟಿರುವುದು ಸರಕಾರಕ್ಕೆ ಅಷ್ಟು ಹಣ ಭರಿಸಲು ಸಾಧ್ಯವಾಗದಂತಾಗಿದೆ. ಹೀಗಾಗಿಯೇ ಈಗ ಒಪ್ಪಿತ ಪರಿಹಾರ ಸೂತ್ರ ಕಂಡುಕೊಳ್ಳುವುದಕ್ಕಾಗಿ ಸರಕಾರ ಈ ಸಭೆ ಕರೆದಿದೆ ಎನ್ನಲಾಗಿದೆ.

ಜಲಾಶಯದ ಮಟ್ಟವನ್ನು 519.6 ಮೀಟರ್ ನಿಂದ 524.25 ಮೀಟರ್ ಎತ್ತರಕ್ಕೆ ಏರಿಸಬೇಕಿದೆ. ಇದಕ್ಕಾಗಿ ಮೂರನೇ ಹಂತದಲ್ಲಿ ಒಂದು ಲಕ್ಷ 33 ಸಾವಿರ ಎಕರೆ ಭೂಮಿ ಸ್ವಾಧೀನ, 20 ಗ್ರಾಮಗಳ ಪುನರ್ವಸತಿ ಕೇಂದ್ರಗಳನ್ನು ಕೇಂದ್ರಗಳ ಪೈಕಿ 14 ಪುನರ್ವಸತಿ ಕೇಂದ್ರಗಳ ನಿರ್ಮಾಣ ಕಾರ್ಯ ನಡೆದಿದೆ. 29,568 ಎಕರೆ ಜಮೀನು ಭೂಸ್ವಾಧೀನವಾಗಿದ್ದು, 44,947 ಎಕರೆ ಭೂಸ್ವಾಧೀನ ನಾನಾ ಹಂತದಲ್ಲಿದೆ. 59,534 ಎಕರೆ ಇನ್ನೂ ಸ್ವಾಧೀನವಾಗಬೇಕಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸವಾಲು, ಪ್ರತಿಸವಾಲಿನ ಹಿಂದೆ ಹೊರಬಿತ್ತು ಸ್ಪೋಟಕ ವಿಷಯ https://nimmasuddi.com/the-challenge-is-the-explosive-thing-that-went-out-behind/

ಸರಕಾರವೇನೋ ಸಂತ್ರಸ್ತರ ಜತೆ ಸಭೆ ನಡೆಸಿ ಒಪ್ಪಿತ ಪರಿಹಾರದ ಸೂತ್ರಕ್ಕೆ ಯತ್ನಿಸುತ್ತಿದೆ. ಆದರೆ ಅದಕ್ಕೆ ಎಲ್ಲರ ಒಪ್ಪಿಗೆ ದೊರೆತರೆ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗಲಿದೆ. ಇಲ್ಲದಿದ್ದರೆ ಯೋಜನೆಯು ಮತ್ತೆ ನನೆಗುದಿಗೆ ಬೀಳಲಿದೆ. ಜತೆಗೆ ಅಂದಾಜು ಹಣ ಕೂಡ ಹೆಚ್ಚಲಿದೆ.

 

—————————

 

ನೀರಾವರಿಗೆ 50 ಲಕ್ಷ, ಒಣಬೇಸಾಯಕ್ಕೆ 40 ಲಕ್ಷ ಕೇಳಿದ್ದೇವೆ. ಈ ವರ್ಷ  ಎಲ್ಲ ಮುಗಿಯದಿದ್ದರೆ ಶೇ.20ರಷ್ಟು ಹೆಚ್ಚಳ ಹಣ ನೀಡಬೇಕು. ಸಂತ್ರಸ್ತರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಬೇಕು.

-ವಿಜಯ ಅಂತರಗೊಂಡ, ಸಂಚಾಲಕ ಸ್ವಾಭಿಮಾನಿ ವೇದಿಕೆ

Balachandra Roogi
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";