ಮಂಗಳವಾರ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ಕೊಟ್ಟಿದೆ. ಬೆಂಗಳೂರು ಸೇರಿ ರಾಜ್ಯದ 10 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳು ಬೆವರುವಂತೆ ಮಾಡಿದ್ದಾರೆ. ಒಟ್ಟು 47 ಸ್ಥಳಗಳಲ್ಲಿ ಏಕಕಾಲಕ್ಕೆ ನಡೆದ ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ಆಸ್ತಿ ದಾಖಲೆಗಳು ಪತ್ತೆ ಹಾಗಾದ್ರೆ ಯಾರ್ಯಾರ ಮನೆಯಲ್ಲಿ ಏನೇನ್ ಸಿಕ್ತು ನೋಡೋಣ ಬನ್ನಿ..
ಶಾಖಾಧೀಕ್ಷಕರ ಬಳಿ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆ
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ RTO ಕಛೇರಿಯ ಶಾಖಾಧೀಕ್ಷಕ ಕೃಷ್ಣಮೂರ್ತಿ.ಪಿ ಅವರಿಗೆ ಸಂಬಂಧಿದಂತೆ 7 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ. ದಾಳಿ ವೇಳೆ 4 ಕೋಟಿ 26 ಲಕ್ಷ ಮೌಲ್ಯದ ಚರಾಸ್ತಿ, 3 ಕೋಟಿ 34 ಲಕ್ಷ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. 7 ನಿವೇಶನಗಳು, 4 ವಾಸದ ಮನೆಗಳು, 5 ಎಕರೆ 30 ಗುಂಟೆ ಕೃಷಿ ಜಮೀನು ಸೇರಿ ಒಟ್ಟು 3 ಕೋಟಿ 30 ಲಕ್ಷ ಮೌಲ್ಯದ ಆಸ್ತಿ ಪತ್ರ ಪತ್ತೆಯಾಗಿದೆ. ಮನೆಯಲ್ಲಿ 22 ಲಕ್ಷ ನಗದು, 32 ಲಕ್ಷ ಮೌಲ್ಯದ ಚಿನ್ನಾಭರಣ, 16 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು, 22 ಲಕ್ಷ ಮೌಲ್ಯದ ವಾಹನಗಳು ಆರ್ಟಿಓ ಕಛೇರಿಯ ಶಾಖಾಧೀಕ್ಷಕ ಮನೆಯಲ್ಲಿ ಪತ್ತೆಯಾಗಿದೆ.
ಮುನಿಸಿಪಾಲಿಟಿ ನಿರೀಕ್ಷರ ಮನೆಯಲ್ಲಿ ಕೋಟಿ ಕೋಟಿ ನಗದು
ಮೈಸೂರಿನ ಹೂಟ್ಲಳ್ಳಿ ಮುನಿಸಿಪಾಲಿಟಿ ನಿರೀಕ್ಷಕರಾಗಿರುವ ರಾಮಸ್ಚಾಮಿ ರಾಜಸ್ವಾಮಿ ಅವರ ಮನೆ ದಾಳಿ ದಾಳಿ ವೇಳೆ 2 ಕೋಟಿ 77 ಲಕ್ಷದ 75 ಸಾವಿರದ 760 ಮೌಲ್ಯದ ಚರಾಸ್ತಿ, ಸ್ಥಿರಾಸ್ತಿ ಪತ್ತೆಯಾಗಿದೆ. ಅಧಿಕಾರಿಗೆ ಸಂಬಂಧಿಸಿದ 3 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದ ಲೋಕಾಯುಕ್ತ 1 ಕೋಟಿ 65 ಲಕ್ಷದ 54 ಸಾವಿರ ಮೌಲ್ಯದ ಸ್ಥಿರಾಸ್ತಿ ಸೇರಿ 1 ಕೋಟಿ 15 ಲಕ್ಷದ 660 ರೂ ನಗದು, 86 ಲಕ್ಷ 26 ಸಾವಿರ 100 ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. 1 ಕೋಟಿ 12 ಲಕ್ಷದ 21 ಸಾವಿರ 760 ರೂ. ಮೌಲ್ಯದ ಇತರೆ ವಸ್ತುಗಳು ಕೂಡ ಪತ್ತೆಯಾಗಿದೆ.
APMC ಸಹಾಯಕ ನಿರ್ದೇಶಕನ ಬಳಿ ಕೋಟಿ ಮೌಲ್ಯದ ನಿವೇಶನ
ದಾವಣೆಗರೆ ಎಪಿಎಂಸಿ ಸಹಾಯಕ ನಿರ್ದೇಶಕ ಪ್ರಭು ಎಂಬುವರಿಗೆ ಸೇರಿದ ಮೂರ ಸ್ಥಳಗಳಲ್ಲಿ ಲೊಕಾಲಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ 2 ಕೋಟಿ 49 ಲಕ್ಷ 99,850 ರೂ ಮೌಲ್ಯದ ಚರಾಸ್ತಿ, ಸ್ಥಿರಾಸ್ತಿ, 1 ಕೋಟಿ 4 ಲಕ್ಷದ 69 ಸಾವಿರ ಮೌಲ್ಯದ ಐದು ನಿವೇಶನ, 3 ವಾಸದ ಮನೆ, 3 ಎಕರೆ ಕೃಷಿ ಭೂಮಿಯ ಕಾಗದ ಪತ್ರಗಳು ಪತ್ತೆ. 85 ಲಕ್ಷದ 60 ಸಾವಿರ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.
ನಗರಸಭೆ ಸಂಘಟನಾಧಿಕಾರಿ 3 ಕೋಟಿ ಆಸ್ತಿ ಒಡೆಯ
ಮಂಡ್ಯ ಟೌನ್ನ ನಗರಸಭೆ ಕಾರ್ಯಾಲಯದ ಸಮುದಾಯ ಸಂಘನಾಧಿಕಾರಿ ಆಗಿರುವ ಪುಟ್ಟಸ್ವಾಮಿ ಮನೆಯಲ್ಲಿ ಕೋಟಿ ಕೋಟಿ ಮೌಲ್ಯ ಆಸ್ತಿ ಪತ್ತೆಯಾಗಿದೆ. ಅಧಿಕಾರಿಗೆ ಸಂಬಂಧಿಸಿದ ಒಟ್ಟು ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ 4 ಕೋಟಿ 37 ಲಕ್ಷದ 45 ಸಾವಿರ ಮೌಲ್ಯದ ಸ್ಥಿರಾಸ್ತಿ, ಚರಾಸ್ಥಿ ಪತ್ತೆಯಾಗಿದೆ. 8 ನಿವೇಶನ, 2 ವಾಸದ ಮನೆ, 12 ಎಕರೆ ಕೃಷಿ ಜಮೀನು ಪತ್ತೆಯಾಗಿದೆ.
ಎಫ್ಡಿಎ ಚಳಿ ಬಿಡಿಸಿದ ಲೋಕಾಯುಕ್ತ
ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವ ಲಕ್ಷ್ಮೀಪತಿಗೆ ಲೋಕಾಯುಕ್ತ ಅಧಿಕಾರಿಗಳು ಚಳಿ ಬಿಡಿಸಿದ್ದಾರೆ. ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗೆ ಸೇರಿದ 5 ಸ್ಥಳಗಳಲ್ಲಿ ಶೋಧ ನಡೆಸಿದ್ದು, 2ಕೋಟಿ 49 ಲಕ್ಷದ 63,481 ಮೌಲ್ಯದ ಸ್ಥಿರಾಸ್ತಿ, ಚರಾಸ್ತಿ, 3 ವಾಸದ ಮನೆಗಳು, 3 ಎಕರೆ 20 ಗುಂಟೆ ಕೃಷಿ ಜಮೀನು ಪತ್ರಗಳು ಪತ್ತೆಯಾಗಿದೆ. ಮನೆಯಲ್ಲಿ 12 ಲಕ್ಷದ ನಗದು, 23 ಲಕ್ಷದ 29 ಸಾವಿರದ 880ರೂ ಬೆಲೆ ಬಾಳುವ ಚಿನ್ನಾಭರಣಗಳು ಸಹ ಪತ್ತೆಯಾಗಿದೆ.



















