ಭಾರತೀಯ ಕ್ರಿಕೆಟ್ ತಂಡದ ಫ್ಲಾಪ್-ಶೋ ಮುಂದುವರೆದಿದೆ. ಭಾನುವಾರ ಗಯಾನಾದಲ್ಲಿ ನಡೆದ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ 2 ವಿಕೆಟ್’ಗಳಿಂದ ಟೀಂ ಇಂಡಿಯಾವನ್ನು ಸೋಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ಆದರೆ ಭಾರತ ನೀಡಿದ ಗುರಿಯನ್ನು ಆತಿಥೇಯರು 7 ಎಸೆತಗಳು ಬಾಕಿ ಇರುವಂತೆಯೇ ಸಾಧಿಸಿದರು. ಈ ಸೋಲಿನ ನಂತರ ನಾಯಕ ಹಾರ್ದಿಕ್ ಪಾಂಡ್ಯ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ.
ಆಲ್’ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಈ ಸರಣಿಯನ್ನು ಆಡುತ್ತಿರುವ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 2 ವಿಕೆಟ್’ಗಳ ಸೋಲನ್ನು ಎದುರಿಸಬೇಕಾಯಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ವೆಸ್ಟ್ ಇಂಡೀಸ್ 2-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ, ಬಳಿಕ ವಿಂಡೀಸ್ ತಂಡ 18.5 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿ ಗುರಿ ಮುಟ್ಟಿತು.
ಪಂದ್ಯದ ಸೋಲಿನ ನಂತರ ಹಾರ್ದಿಕ್ ಪಾಂಡ್ಯ ಮಾತನಾಡಿ, “ನಿಜ ಹೇಳಬೇಕೆಂದರೆ, ಟೀಂ ಇಂಡಿಯಾದ ಬ್ಯಾಟಿಂಗ್ ಚೆನ್ನಾಗಿರಲಿಲ್ಲ. ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಬಹುದಿತ್ತು. 160 ಪ್ಲಸ್ ಅಥವಾ 170 ಉತ್ತಮ ರನ್ ಕಲೆಹಾಕಬಹುದಿತ್ತು. ನಿಕೋಲಸ್ ಪೂರನ್ ಬ್ಯಾಟ್ ಮಾಡಿದ ರೀತಿಯಿಂದ ಆಟ ಅವರ ಕೈವಶವಾಯಿತು. ನಾವು ಟಾಪ್-7 ಬ್ಯಾಟ್ಸ್‌ಮನ್’ಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ನಾವು ಸರಿಯಾದ ಸಮತೋಲನವನ್ನು ಹೊಂದಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ನಾವು ಮಾರ್ಗಗಳನ್ನು ಕಂಡುಕೊಳ್ಳಬೇಕು ಆದರೆ ಅದೇ ಸಮಯದಲ್ಲಿ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ” ಎಂದರು. ಈ ಮೂಲಕ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಕಳಪೆ ಪ್ರದರ್ಶನವೇ ಈ ಸೋಲಿಗೆ ಕಾರಣ ಎಂದು ಹೇಳಿದಂತೆ ಭಾಸವಾಗಿದೆ.
ವಿಂಡೀಸ್ ತಂಡದಲ್ಲಿ 4ನೇ ಕ್ರಮಾಂಕಕ್ಕೆ ಇಳಿದ ನಿಕೋಲಸ್ ಪೂರನ್ (67) ಫ್ರೀಜ್’ನಲ್ಲಿ ಉಳಿದು ಅರ್ಧಶತಕ ಗಳಿಸಿದರು. ಪೂರನ್ ಅವರ 40 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ್ದವು. ನಾಯಕ ರೋವ್ಮನ್ ಪೊವೆಲ್ 21 ಮತ್ತು ಶಿಮ್ರಾನ್ ಹೆಟ್ಮೆಯರ್ 22 ರನ್ ಗಳಿಸಿದರು. ಒಂದು ಬಾರಿ ಬಲಿಷ್ಠ ಸ್ಥಿತಿಯಲ್ಲಿದ್ದ ವಿಂಡೀಸ್ ತಂಡ 126 ರಿಂದ 129 ರನ್ ಗಳ ನಡುವೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಕಿಲ್ ಹುಸೇನ್ (ಔಟಾಗದೆ 16) ಮತ್ತು ಅಲ್ಜಾರಿ ಜೋಸೆಫ್ (ಅಜೇಯ 10) ತಂಡಕ್ಕೆ ಜಯ ತಂದುಕೊಟ್ಟರು.
ನಾಯಕ ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದರೆ, ಯಜುವೇಂದ್ರ ಚಹಾಲ್ 2 ವಿಕೆಟ್ ಪಡೆದರು. ಅರ್ಷದೀಪ್ ಸಿಂಗ್ ಮತ್ತು ಮುಖೇಶ್ ಕುಮಾರ್ ತಲಾ 1 ವಿಕೆಟ್ ಪಡೆದರು. ನಿಕೋಲಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ತಿಲಕ್ ವರ್ಮಾ ಅರ್ಧಶತಕ:
ಅತ್ಯುತ್ತಮ ಬೌಲಿಂಗ್ ಎದುರಿಸಿದ ತಿಲಕ್ ವರ್ಮಾ ಟಿ20 ಕ್ರಿಕೆಟ್’ನಲ್ಲಿ ಮೊದಲ ಅರ್ಧಶತಕ ದಾಖಲಿಸಿದರು. ನಿರ್ಭೀತಿಯಿಂದ ಬ್ಯಾಟಿಂಗ್ ಮಾಡಿದ ವರ್ಮಾ 41 ಎಸೆತಗಳಲ್ಲಿ 51 ರನ್ ಗಳಿಸಿದರು. ಟಿ20 ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ ಭಾರತದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಈ ಮೂಲಕ ಪಾತ್ರರಾದರು. ಕಳೆದ ಪಂದ್ಯದಲ್ಲಿ ಅವರು 39 ರನ್ ಗಳಿಸಿದ್ದರು, ಆದರೆ ಭಾರತ ಸೋಲನ್ನು ಎದುರಿಸಬೇಕಾಯಿತು
[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]