IND vs WI, News: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲೂ ಟೀಂ ಇಂಡಿಯಾ ಸೋಲು ಕಂಡಿದೆ. ಐದು ಪಂದ್ಯಗಳ ಈ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 0-2 ಅಂತರದ ಹಿನ್ನಡೆ ಅನುಭವಿಸಿದೆ. ಇನ್ನು ಈ ಆಟಗಾರ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಸೋಲಲು ಕಾರಣನಾದನೇ ಎಂಬ ಅನುಮಾನ ಈಗ ಮೂಡುತ್ತಿದೆ. ಅಷ್ಟೇ ಅಲ್ಲದೆ, ಕಳಪೆ ಪ್ರದರ್ಶನದಿಂದಾಗಿ ಮ್ಯಾನೇಜ್‌ಮೆಂಟ್ ಹಾಗೂ ನಾಯಕನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಟೀಮ್ ಮ್ಯಾನೇಜ್’ಮೆಂಟ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಸುಮಾರು 1 ವರ್ಷದ ನಂತರ ಈ ಆಟಗಾರನಿಗೆ ಟೀಮ್ ಇಂಡಿಯಾ ಪರ ಆಡುವ ಅವಕಾಶವನ್ನು ನೀಡಿದ್ದರು. ಆದರೆ ಈ ಆಟಗಾರನು ಪ್ರಮುಖ ಸಂದರ್ಭದಲ್ಲಿ ವಿಫಲನಾದನು. ಈ ಆಟಗಾರ ಬೇರಾರು ಅಲ್ಲ, ಅವರೇ ರವಿ ಬಿಷ್ಣೋಯ್. ರವಿ ತನ್ನ ಕೊನೆಯ T20 ಅಂತರಾಷ್ಟ್ರೀಯ ಪಂದ್ಯವನ್ನು ಸೆಪ್ಟೆಂಬರ್ 2022 ರಲ್ಲಿ ಪಾಕಿಸ್ತಾನದ ವಿರುದ್ಧ ದುಬೈ ಮೈದಾನದಲ್ಲಿ ಆಡಿದ್ದರು.
4 ಸೆಪ್ಟೆಂಬರ್ 2022 ರಂದು ದುಬೈ ಮೈದಾನದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ T20 ಪಂದ್ಯದ ನಂತರ ಕಳಪೆ ಪ್ರದರ್ಶನದ ಕಾರಣ ರವಿ ಬಿಷ್ಣೋಯ್ ಭಾರತದ T20 ತಂಡದಿಂದ ಹೊರಗುಳಿದಿದ್ದರು, ಆದರೆ ಈಗ ರವಿ ಬಿಷ್ಣೋಯ್ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ T20 ಪಂದ್ಯದಲ್ಲಿ ಸೇರಿಸಿಕೊಳ್ಳಲಾಗಿತ್ತು. ಇದೀಗ ಮತ್ತೆ ವಿಫಲರಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಈ ಕಳಪೆ ಪ್ರದರ್ಶನದಿಂದಾಗಿ ರವಿ ಬಿಷ್ಣೋಯ್ ಗೆ ಟೀಂ ಇಂಡಿಯಾಗೆ ಮತ್ತಷ್ಟು ಅವಕಾಶ ಸಿಗುವುದು ಅನುಮಾನವೇ…
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ರವಿ ಬಿಷ್ಣೋಯ್ 4 ಓವರ್’ಗಳಲ್ಲಿ 31 ರನ್ ನೀಡಿದರು. ಈ ಅವಧಿಯಲ್ಲಿ ರವಿ ಬಿಷ್ಣೋಯ್ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಕುಲದೀಪ್ ಯಾದವ್ ಬದಲಿಗೆ ರವಿ ಬಿಷ್ಣೋಯ್ ಅವರನ್ನು ಎರಡನೇ ಟಿ20 ಪಂದ್ಯದ ಪ್ಲೇಯಿಂಗ್ 11 ಸೇರಿಸಿಕೊಳ್ಳಲಾಗಿತ್ತು. ಇದು ನಾಯಕ ಹಾರ್ದಿಕ್ ಪಾಂಡ್ಯ ಅವರ ಕೆಟ್ಟ ನಿರ್ಧಾರ ಎಂದು ಸಾಬೀತಾಯಿತು