ಬೆಂಗಳೂರು: ನೆದರ್ಲೆಂಡ್ ನ ವಿಜ್ಕ್ ಆನ್ ಝೀ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರಿನ್ ಅವರನ್ನು ಮಣಿಸಿ ಚೆಸ್ ಮಾಸ್ಟರ್ ವಿಶ್ವನಾಥನ್ ಆನಂದ್ ನಂತರ ಹಾಲಿ ಚಾಂಪಿಯನ್ ಆಟಗಾರನನ್ನು ಮಣಿಸಿದ 2ನೇ ಭಾರತೀಯ ಎಂಬ ದಾಖಲೆ ಬರೆದಿದ್ದು, ಅಲ್ಲದೆ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿ ಮೊದಲ ಬಾರಿ ಟೀಮ್ ಇಂಡಿಯಾದ ನಂಬರ್ 1 ಚೆಸ್ ಆಟಗಾರ ಎಂಬ ಪಟ್ಟವನ್ನು ಅಲಂಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜ್ಞಾನಂದ ಅವರು ಈಗಾಗಲೇ ವಿಶ್ವ ಚೆಸ್ ರಂಗದಲ್ಲಿ ತಮ್ಮ ಕೌಶಲ್ಯತೆಯನ್ನು ಪ್ರದರ್ಶಿಸಿದ್ಜು ಟಾಟಾ ಸ್ಟೀಲ್ ಚೆಸ್ ಟೂರ್ನಿಯ 4ನೇ ಮಾಸ್ಟರ್ ರೌಂಡ್ ಸುತ್ತಿನಲ್ಲಿ ನಡೆದ 64 ಸ್ಕ್ವೇಯರ್ಸ್ ಪೈಪೋಟಿಯಲ್ಲಿ ಹಾಲಿ ಚಾಂಪಿಯನ್ ಡಿಂಗ್ ಲಿರಿನ್ ರನ್ನು ಮಣಿಸಿ ಸಂಭ್ರಮಿಸಿದ್ದು,ಹಾಲಿ ಚಾಂಪಿಯನ್ ಡಿಂಗ್ ಲಿರಿನ್ ವಿರುದ್ಧ ನಡೆದ 2023ರ ಚೆಸ್ ಟೂರ್ನಿಯ 4ನೇ ಮಾಸ್ಟರ್ಸ್ ಸುತ್ತಿನಲ್ಲಿ ಲಿರಿನ್ (2780 ಅಂಕ) ರಿಂದ ಕ್ಲಾಸಿಕ್ ರೇಟ್ ನಲ್ಲಿ ಪ್ರಜ್ಞಾನಂದ (2743) ಸೋಲು ಕಂಡಿದ್ದರು. ಆದರೆ ಇಂದಿನ ಗೆಲುವು ಸಂತಸ ಮೂಡಿಸಿದೆ ಎಂದು ತಿಳಿಸಿದರು.
“ಆರಂಭದಲ್ಲಿ ನಾನು ಪಂದ್ಯವನ್ನು ಸುಲಭವಾಗಿ ಸಮಬಲಗೊಳಿಸಬಹುದು ಎಂದು ಅಂದಾಜಿಸಿದ್ದೆ. ಆದರೆ ಪಂದ್ಯ ಸಾಗುತ್ತಿದ್ದಂತೆ ಎದುರಾಳಿ ಆಟಗಾರ ತಪ್ಪು ಹೆಜ್ಜೆ ಇಟ್ಟಿದ್ದಾರೆ ಎಂದು ನನಗೆ ಅನಿಸಿತು. ನಂತರ ನಾನು ದಾಳವನ್ನು ಮುನ್ನಡೆಸುವಾಗ ಪಂದ್ಯದಲ್ಲಿ ನಾನು ಹಿಡಿತ ಸಾಧಿಸಿದ್ದೇನೆ ಎಂಬ ಭಾವನೆ ಉಂಟಾಗಿತ್ತು” ಎಂದು ಚೆಸ್.ಕಾಮ್ ಗೆ ಆರ್. ಪ್ರಜ್ಞಾನಂದ ಸೂಚಿಸಿದ್ದಾರೆ.
ನಾನು ಯಾವುದೇ ದಿನವಾಗಲಿ, ಎಂತಹ ಚಾಂಪಿಯನ್ ಆಗಿರಲಿ ಅವರನ್ನು ನಾನು ಮಣಿಸುತ್ತೇನೆ ಎಂದು ಯೋಚಿಸುತ್ತಿದ್ದೆ. ಈ ಪಂದ್ಯ ನನಗೆ ಅತ್ಯಂತ ವಿಶೇಷವಾಗಿತ್ತು ಏಕೆಂದರೆ ಎದುರಾಳಿ ಚಾಂಪಿಯನ್ ಆಟಗಾರನನ್ನು ಮಣಿಸುವುದು ಅಷ್ಟು ಸುಲಭವಾಗಿರಲಿಲ್ಲ. ಕ್ಲಾಸಿಕ್ ಚೆಸ್ ನಲ್ಲಿ ಮೊಟ್ಟ ಮೊದಲ ಬಾರಿ ಚಾಂಪಿಯನ್ ಆಟಗಾರನನ್ನು ಮಣಿಸಿರುವುದು ತುಂಬಾ ಉತ್ತಮ ಅನುಭವವಾಗಿದೆ” ಎಂದು ವಿವರಿಸಿದರು.