This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Business News

ಇನ್ನು ಮುಂದೆ ಪೆಟ್ರೋಲ್, ಡೀಸಲ್ ಬೆಲೆ 10 ರೂವರೆಗೆ ಕಡಿಮೆ ಆಗುವ ಸಾಧ್ಯತೆ

ಇನ್ನು ಮುಂದೆ ಪೆಟ್ರೋಲ್, ಡೀಸಲ್ ಬೆಲೆ 10 ರೂವರೆಗೆ ಕಡಿಮೆ ಆಗುವ ಸಾಧ್ಯತೆ

ನವದೆಹಲಿ: ಎರಡು ವರ್ಷದಿಂದ ಸಾಕಷ್ಟು ಲಾಭ ಮಾಡಿರುವ ಭಾರತದ ಪೆಟ್ರೋಲಿಯಂ ಕಂಪನಿಗಳು ಈಗ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಇಳಿಸುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಗಳು ಮತ್ತೆ ಬರುತ್ತಿವೆ. ಫೆಬ್ರುವರಿ ತಿಂಗಳಲ್ಲಿ ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಲೀಟರ್​ಗೆ 10 ರೂವರೆಗೂ ಬೆಲೆ ಇಳಿಕೆ ಮಾಡಬಹುದು ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಪೆಟ್ರೋಲ್ ಮತ್ತು ಡೀಸಲ್ ಬೆಲೆ ಕಡಿಮೆ ಆಗಬಹುದು ಎಂದು ಡಿಸೆಂಬರ್ ತಿಂಗಳಲ್ಲೂ ವರದಿಗಳು ಬಂದಿದ್ದವು. ಲೋಕಸಭೆ ಚುನಾವಣೆಗೆ ಒಂದು ಅಥವಾ ಎರಡು ತಿಂಗಳು ಇರುವ ಮುನ್ನ ಬೆಲೆ ಇಳಿಕೆ ಆಗಬಹುದು ಎನ್ನಲಾಗಿದೆ.

ಭಾರತದಲ್ಲಿ 2022ರ ಏಪ್ರಿಲ್ ತಿಂಗಳಿಂದಲೂ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು ಸ್ಥಿರವಾಗಿವೆ. ಅದೇ ವೇಳೆ ಜಾಗತಿಕವಾಗಿ ಕಚ್ಚಾ ತೈಲ ಬೆಲೆಗಳು ಅಗ್ಗಗೊಂಡಿವೆ. ರಷ್ಯಾದಿಂದಲೂ ಕಡಿಮೆ ಬೆಲೆಗೆ ತೈಲವನ್ನು ಪಡೆಯಲಾಗುತ್ತಿದೆ. ಅಲ್ಲಿಯವರೆಗೆ ಸಾಕಷ್ಟು ನಷ್ಟಗಳನ್ನು ಕಂಡಿದ್ದ ಭಾರತದ ಪೆಟ್ರೋಲಿಯಂ ಕಂಪನಿಗಳು ಕಳೆದ ಎರಡು ವರ್ಷದಿಂದ ನಷ್ಟದ ಸುಳಿಯಿಂದ ಹೊರಬಂದಿರುವುದಷ್ಟೇ ಅಲ್ಲ ಲಾಭದ ಹಳಿಗೂ ಬಂದಿವೆ.

ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಇಂಡಿಯನ್ ಆಯಿಲ್, ಎಚ್​ಪಿ, ಭಾರತ್ ಪೆಟ್ರೋಲಿಯಂ ಕಂಪನಿಗಳು 75,000 ಕೋಟಿ ರೂನಷ್ಟು ಲಾಭ ಹೊಂದಿರಬಹುದು.ವರದಿಯ ಪ್ರಕಾರ ಭಾರತದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಸದ್ಯಕ್ಕೆ ಒಂದು ಲೀಟರ್​ಗೆ 10 ರೂನಷ್ಟು ಲಾಭದ ಮಾರ್ಜಿನ್ ಹೊಂದಿವೆ. ಇದರಲ್ಲಿ ಒಂದಷ್ಟು ಮೊತ್ತವನ್ನು ಗ್ರಾಹಕರಿಗೆ ವರ್ಗಾಯಿಸಬಹುದು. ಪೆಟ್ರೋಲ್ ಮತ್ತು ಡೀಸಲ್ ಒಂದು ಲೀಟರ್​ಗೆ 5ರಿಂದ 10 ರೂವರೆಗೆ ಬೆಲೆ ಇಳಿಕೆ ಕಾಣಬಹುದು.

ಪೆಟ್ರೋಲ್ ಡೀಸಲ್ ಬೆಲೆ ಇಳಿಕೆಯಿಂದ ಸರ್ಕಾರಕ್ಕೂ ಎರಡು ರೀತಿಯಲ್ಲಿ ಅನುಕೂಲವಾಗುತ್ತದೆ. ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಗಳು ಇರುವುದರಿಂದ ಜನಬೆಂಬಲ ಸಿಗಬಹುದೆಂದು ನಿರೀಕ್ಷಿಸಬಹುದು. ಹಾಗೆಯೇ, ಪೆಟ್ರೋಲ್ ಡೀಸಲ್ ಬೆಲೆ ಇಳಿಕೆಯ ಪರಿಣಾಮವಾಗಿ ಬೇರೆ ಬೆಲೆಗಳೂ ಕಡಿಮೆ ಆಗಬಹುದು. ಇದರಿಂದ ಹಣದುಬ್ಬರ ಏರಿಕೆಗೆ ಸ್ವಲ್ಪ ಕಡಿವಾಣ ಬೀಳಬಹುದು.ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 96.72 ರೂ ಇದೆ. ಡೀಸಲ್ ಬೆಲೆ ಲೀಟರ್​ಗೆ 89.62 ರೂ ಇದ್ದು, ಮುಂಬೈನಲ್ಲಿ ಪೆಟ್ರೋಲ್ ಬೆಲೆ 106.31 ರೂ ಇದ್ದರೆ ಡೀಸಲ್ ಬೆಲೆ 94.27 ರೂ ಇದೆ. ಬೆಂಗಳೂರಿನಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್​ಗೆ 101.94 ರೂ ಇದೆ. ಡೀಸಲ್ ಬೆಲೆ 87.89 ರೂ ಇದೆ.

Nimma Suddi
";