This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Sports News

ಐಪಿಎಲ್ ನಲ್ಲಿ ಮಿಂಚಿದ ಟಾಪ್ 10 ಆಟಗಾರರು ಇವ್ರೆ ನೋಡಿ

ಐಪಿಎಲ್ ನಲ್ಲಿ ಮಿಂಚಿದ ಟಾಪ್ 10 ಆಟಗಾರರು ಇವ್ರೆ ನೋಡಿ

ಬೆಂಗಳೂರು: ಇಂಡಿಯನ್ ಪ್ರೀಮಿಯರ್‌ ಲೀಗ್‌ ಕೇವಲ ಒಂದು ಟಿ20 ಲೀಗ್‌ ಮಾತ್ರವಲ್ಲ. ಇಡೀ ಕ್ರಿಕೆಟ್‌ ಜಗತ್ತು ಸಂಭ್ರಮಿಸುವ ಹಬ್ಬವಾಗಿದೆ. ಎರಡು ತಿಂಗಳ ಅವಧಿಯಲ್ಲಿ ಆಯೋಜನೆಯಾಗುವ ಟಿ20 ಲೀಗ್‌ ವೀಕ್ಷಣೆ ಸಲುವಾಗಿ ಕ್ರಿಕೆಟ್‌ ಜಗತ್ತು ಪ್ರತಿವರ್ಷ ಜಾತಕ ಪಕ್ಷಿಯಂತೆ ಎದುರು ನೋಡುತ್ತಿರುತ್ತದೆ. ಪ್ರತಿ ಆವೃತ್ತಿಯಲ್ಲೂ ಮೂಡಿ ಬರುವ ರೋಚಕ ಪಂದ್ಯಗಳು ಕ್ರಿಕೆಟ್‌ ರಸಿಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಇದೇ ಕಾರಣಕ್ಕೆ ಐಪಿಎಲ್ ಜಗತ್ತಿನ ಅಚ್ಚು ಮೆಚ್ಚಿನ ಟಿ20 ಲೀಗ್‌ ಆಗಿದೆ.

ಅಂದಹಾಗೆ ಟೂರ್ನಿಯ ಇತಿಹಾಸ ಕೆದಕಿದರೆ ನಾಕ್‌ಔಟ್‌ ಹಂತಗಳಲ್ಲಿ ಅಸಾಧಾರಣ ಪ್ರದರ್ಶನಗಳನ್ನು ನೀಡಿ ತಮ್ಮ ಫ್ರಾಂಚೈಸಿಗಳಿಗೆ ಪಂದ್ಯಗಳನ್ನು ಗೆದ್ದುಕೊಟ್ಟ ಕೆಲ ಸ್ಟಾರ್‌ ಆಟಗಾರರು ಅಭಿಮಾನಿಗಳ ಮನದಲ್ಲಿ ಈಗಲೂ ವಿಶೇಷ ಸ್ಥಾನ ಪಡೆದಿದ್ದಾರೆ. ಅಂಹತ ಟಾಪ್‌ 10 ಆಟಗಾರರ ಸಂಪೂರ್ಣ ವಿವರವನ್ನು ಇಲಲ್ಲಿ ನೀಡಲಾಗಿದೆ. ಪ್ರತಿಯೊಬ್ಬ ಆಟಗಾರರು ತಂಡಕ್ಕೆ ನೀಡಿದ ಕೊಡುಗೆ ಇದರಲ್ಲಿದೆ.

ಅಂದಹಾಗೆ ಐಪಿಎಲ್ 2024 ಟೂರ್ನಿಯು ಮಾರ್ಚ್‌ 22ರಂದು ಶುರುವಾಗಲಿದ್ದು, ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳು ಕಾದಾಟ ನಡೆಸಲಿವೆ.

​01. ಸುರೇಶ್‌ ರೈನಾ
ಇಂಡಿಯನ್ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿ 5 ಸಾವಿರ ರನ್‌ಗಳ ಗಡಿ ದಾಟಿದ ಮೊದಲ ಬ್ಯಾಟರ್‌ ಆಗಿರುವ ಎಡಗೈ ಆಟಗಾರ ಸುರೇಶ್‌ ರೈನಾ, ಚೆನೈ ಸೂಪರ್‌ ಕಿಂಗ್ಸ್‌ ಮತ್ತು ಗುಜರಾತ್‌ ಲಯನ್ಸ್‌ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಮಿಸ್ಟರ್‌ ಐಪಿಎಲ್‌ ಎಂದೇ ಬಿರುದು ಪಡೆದಿದ್ದ ರೈನಾ, ಇನಿಂಗ್ಸ್‌ ಅಂತ್ಯದವರೆಗೂ ಬ್ಯಾಟ್‌ ಮಾಡಿ ತಂಡಕ್ಕೆ ಬೃಹತ್‌ ಮೊತ್ತ ತಂದುಕೊಡುವಲ್ಲಿ ನಿಸ್ಸೀಮರಾಗಿದ್ದರು. ನಾಕ್‌ಔಟ್‌ ಹಂತಗಳಲ್ಲೂ ರೈನಾ ಒತ್ತಡ ಮುಕ್ತವಾಗಿ ಬ್ಯಾಟ್‌ ಮಾಡುತ್ತಿದ್ದರು. ಒತ್ತಡದ ಸಮಯದಲ್ಲೂ ಅದ್ಭುತ ಆಟವಾಡುವ ಸಾಮರ್ಥ್ಯ ರೈನಾ ಅವರದ್ದು, ಇದಕ್ಕೆ 2010ರ ಐಪಿಎಲ್‌ ಫೈನಲ್‌ ಅತ್ಯುತ್ತಮ ಉದಾಹರಣೆ.

02. ಕೈರೊನ್‌ ಪೊಲಾರ್ಡ್‌
ಮುಂಬೈ ಇಂಡಿಯನ್ಸ್‌ ಪರ ದೀರ್ಘಕಾಲ ಆಡಿದ ವೆಸ್ಟ್‌ ಇಂಡೀಸ್‌ನ ದೈತ್ಯ ಆಲ್‌ರೌಂಡರ್‌ ಕೈರೊನ್‌ ಪೊಲಾರ್ಡ್‌, ತಮ್ಮ ದೈತ್ಯ ಸಿಕ್ಸರ್‌ಗಳ ಮೂಲಕ ಎದುರಾಳಿ ತಂಡಗಳ ಆತ್ಮವಿಶ್ವಾಸವನ್ನೇ ಅಡಗಿಸಿಬಿಡುತ್ತಿದ್ದರು. ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಅದೆಷ್ಟೋ ಪಂದ್ಯಗಳಲ್ಲಿ ಸೋಲಿನ ದವಡೆಗೆ ಸಿಲುಕಿದ್ದ ಮುಂಬೈ ತಂಡವನ್ನು ಏಕಾಂಗಿಯಾಗಿ ಮೇಲೆತ್ತಿದ್ದಾರೆ. ಐಪಿಎಲ್‌ ನಾಕ್‌ಔಟ್‌ ಪಂದ್ಯಗಳಲ್ಲೂ ಕೈರೊನ್‌ ಪೊಲಾರ್ಡ್‌ ಸಾಧನೆ ಅಮೋಘ. 2013ರ ಐಪಿಎಲ್‌ ಫೈನಲ್‌ನಲ್ಲಿ ಪೊಲಾರ್ಡ್‌ ಮುಂಬೈಗೆ ಟ್ರೋಫಿ ಗೆದ್ದುಕೊಟ್ಟಿದ್ದರು.

​03. ಫಾಫ್‌ ಡು ಪ್ಲೆಸಿಸ್‌
ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, ರೈಸಿಂಗ್‌ ಪುಣೆ ಸೂಪರ್‌ ಜಯಂಟ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳನ್ನು ಪ್ರತಿನಿಧಿಸಿರುವ ಫಾಫ್‌ ಡು ಪ್ಲೆಸಿಸ್‌ ಅಪ್ಪಟ ಮ್ಯಾಚ್‌ ವಿನ್ನರ್‌. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್‌ ಐಪಿಎಲ್‌ ನಾಕ್‌ಔಟ್ ಪಂದ್ಯಗಳಲ್ಲಿ ಹಲವು ಮ್ಯಾಚ್‌ ವಿನ್ನಿಂಗ್ ಪ್ರದರ್ಶನಗಳನ್ನು ನೀಡಿದ್ದಾರೆ. ಐಪಿಎಲ್‌ ಪ್ಲೇ ಆಫ್ಸ್‌ನಲ್ಲಿ ಒಟ್ಟಾರೆ 3 ಬಾರಿ ಪಂದ್ಯಶ್ರೇಷ್ಠ ಗೌರವ ಗೆದ್ದಿದ್ದಾರೆ. ಐಪಿಎಲ್ 2021 ಟೂರ್ನಿಯ ಫೈನಲ್‌ನಲ್ಲೂ ಸಿಎಸ್‌ಕೆಗೆ ಫಾಫ್‌ ಪಂದ್ಯ ಗೆದ್ದುಕೊಟ್ಟಿದ್ದರು.

04. ಜಸ್‌ಪ್ರೀತ್‌ ಬುಮ್ರಾ
ಮುಂಬೈ ಇಂಡಿಯನ್ಸ್‌ ತಂಡದ ಅನುಭವಿ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಕಂಡರೆ ಎದುರಾಳಿ ಬ್ಯಾಟರ್‌ಗಳ ಎದೆ ನಡುಗುತ್ತದೆ. ಸ್ವಿಂಗ್ ಬೌಲಿಂಗ್‌ ಅಲ್ಲದೆ ಡೆಟ್ಲಿ ಯಾರ್ಕರ್‌ಗಳ ಮೂಲಕ ಬ್ಯಾಟರ್‌ಗಳ ನಿದ್ರೆ ಕೆಡಿಸಿರುವ ಬುಮ್ರಾ ಮ್ಯಾಚ್‌ ವಿನ್ನಿಂಗ್‌ ಆಟಗಾರ. ಈವರೆಗೆ ಐಪಿಎಲ್‌ ನಾಕ್‌ಔಟ್ ಪಂದ್ಯಗಳಲ್ಲಿ ಬುಮ್ರಾ 2 ಬಾರಿ ಪಂದ್ಯಶ್ರೇಷ್ಠ ಎನಿಸಿದ್ದಾರೆ. 2019ರ ಐಪಿಎಲ್‌ ಫೈನಲ್ ಪಂದ್ಯದಲ್ಲೂ ಬುಮ್ರಾ ಮ್ಯಾಚ್‌ ವಿನ್ನರ್‌ ಎನಿಸಿದರು.

05. ಋತುರಾಜ್‌ ಗಾಯಕ್ವಾಡ್
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಭವಿಷ್ಯದ ನಾಯಕ ಎಂದೇ ಗುರುತಿಸಿಕೊಂಡಿರುವ ಯುವ ಬಲಗೈ ಆರಂಭಿಕ ಬ್ಯಾಟರ್‌ ಋತುರಾಜ್‌ ಗಾಯಕ್ವಾಡ್‌, ಐಪಿಎಲ್‌ನಲ್ಲಿ ಮಿಂಚಿನ ಬ್ಯಾಟಿಂಗ್‌ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ. ಇನಿಂಗ್ಸ್‌ನ ಅಂತ್ಯದವರೆಗೂ ಬ್ಯಾಟ್‌ ಮಾಡುವ ಸಾಮರ್ಥ್ಯ ಅವರಲ್ಲಿದ್ದು, ತಮ್ಮ ದೊಡ್ಡ ಇನಿಂಗ್ಸ್‌ಗಳ ಮೂಲಕ ತಂಡದ ಪ್ರಮುಖ ಬ್ಯಾಟಿಂಗ್‌ ಅಸ್ತ್ರವಾಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್ ಪ್ಲೇ ಆಫ್ಸ್‌ ಇತಿಹಾಸದಲ್ಲಿ ಋತುರಾಜ್‌ ಎರಡು ಬಾರಿ ಪಂದ್ಯಶ್ರೇಷ್ಠ ಗೆದ್ದಿದ್ದಾರೆ.

06. ಎಬಿ ಡಿ ವಿಲಿಯರ್ಸ್‌
ಐಪಿಎಲ್‌ ಅಖಾಡದಲ್ಲಿ ಆರಂಭದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ಪರ ಆಡಿದ್ದ ಎಬಿ ಡಿ ವಿಲಿಯರ್ಸ್‌ ನಂತರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಬಳಗವನ್ನು ಸೇರಿಕೊಂಡರು. ಆರ್‌ಸಿಬಿ ತಂಡದ ಜೀವಾಳವಾಗಿದ್ದ ಎಬಿಡಿ ಆಡಿದ ಮ್ಯಾಚ್‌ವಿನಿಂಗ್‌ ಆಟಗಳು ಒಂದೆರಡಲ್ಲ. ಏಕಾಂಗಿಯಾಗಿ ಪಂದ್ಯಗಳನ್ನು ಗೆದ್ದುಕೊಡುವ ಮೂಲಕ ಕನ್ನಡಿಗರ ಮನದಲ್ಲಿ ಆಪತ್ಬಾಂಧವ ಎಬಿಡಿ ಎಂದೇ ಮನೆ ಮಾಡಿದರು. ಐಪಿಎಲ್‌ನ ನಾಕ್‌ಔಟ್‌ ಹಂತಗಳಲ್ಲೂ ಎಬಿಡಿ 2 ಬಾರಿ ಪಂದ್ಯಶ್ರೇಷ್ಠ ಗೌರವ ಗೆದ್ದಿದ್ದಾರೆ. ದುರದೃಷ್ಟವಶಾರ್‌ ಆರ್‌ಸಿಬಿಗೆ ಚೊಚ್ಚಲ ಟ್ರೋಫಿ ಗೆದ್ದುಕೊಡಲು ಅವರಿಂದ ಸಾಧ್ಯವಾಗಲಿಲ್ಲ.

​07. ಮನೀಶ್‌ ಪಾಂಡೆ
ಕನ್ನಡಿಗ ಮನೀಶ್‌ ಪಾಂಡೆ ಐಪಿಎಲ್‌ನಲ್ಲಿ ವಿವಿಧ ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ. ಎಚ್ಚರಿಕೆಯಿಂದ ಇನಿಂಗ್ಸ್‌ ಕಟ್ಟಿ ಅಂತ್ಯದಲ್ಲಿ ರನ್‌ ಗಳಿಕೆಯ ವೇಗ ಹೆಚ್ಚಿಸುವ ಕಲೆಯನ್ನು ಮನೀಶ್‌ ಕರಗತ ಮಾಡಿಕೊಂಡಿದ್ದಾರೆ. 2014ರ ಐಪಿಎಲ್‌ ಫೈನಲ್‌ನಲ್ಲಿ ಮನೀಶ್ ಪಾಂಡೆ ಆ ಆವೃತ್ತಿಯ ಚಾಂಪಿಯನ್ಸ್ ಕೋಲ್ಕಾ ನೈಟ್‌ ರೈಡರ್ಸ್‌ ತಂಡದ ಪರ ಮ್ಯಾಚ್‌ ವಿನ್ನರ್‌ ಎನಿಸಿದರು. ಒತ್ತಡದ ಪಂದ್ಯಗಳಲ್ಲಿ ಅದ್ಭುತ ಆಟದ ಮೂಲಕ ಮನೀಶ್ ಹಲವು ಬಾರಿ ಗಮನ ಸೆಳೆದಿದ್ದಾರೆ.

08. ಮುರಳಿ ವಿಜಯ್‌
ಆರಂಭಿಕ ಬ್ಯಾಟ್ಸ್‌ಮನ್‌ ಮುರಳಿ ವಿಜಯ್‌ ಐಪಿಎಲ್‌ ಅಖಾಡದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಇನಿಂಗ್ಸ್‌ ಆರಂಭಿಸಿ ದೊಡ್ಡ ಇನಿಂಗ್ಸ್‌ಗಳನ್ನು ಆಡುವ ಮೂಲಕ ಗಮನ ಸೆಳೆದಿದ್ದ ಬಲಗೈ ಬ್ಯಾಟರ್‌ ಮುರಳಿ ವಿಜಯ್‌ 2011ರ ಐಪಿಎಲ್‌ ಫೈನಲ್‌ನಲ್ಲಿ ಅಂಥದ್ದೇ ಪ್ರದರ್ಶನ ನೀಡಿ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟಿದ್ದರು. ನಾಕ್‌ಔಟ್‌ ಹಂತಗಳಲ್ಲಿ ಮುರಳಿ ವಿಜಯ್ ಎರಡು ಬಾರಿ ಪಂದ್ಯಶ್ರೇಷ್ಠ ಗೌರವ ಪಡೆದಿದ್ದಾರೆ.

​09. ಶೇನ್‌ ವಾಟ್ಸನ್‌
ಆಸ್ಟ್ರೇಲಿಯಾದ ಆಲ್‌ರೌಂಡರ್‌ ಶೇನ್‌ ವಾಟ್ಸನ್‌ ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌, ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಪವರ್‌ ಹಿಟ್ಟರ್‌ ಶೇನ್‌ ವಾಟ್ಸನ್‌ ಬೌಲಿಂಗ್‌ ಮೂಲಕವೂ ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಇದೇ ಸಾಮರ್ಥ್ಯದಿಂದ ಅವರು ಐಪಿಎಲ್ ನಾಕ್‌ಔಟ್‌ ಪಂದ್ಯಗಳಲ್ಲಿ ಎರಡು ಬಾರಿ ಪಂದ್ಯಶ್ರೇಷ್ಠ ಗೌರವ ಪಡೆದಿದ್ದಾರೆ. 2018ರ ಐಪಿಎಲ್‌ ಫೈನಲ್‌ನಲ್ಲೂ ಮಿಂಚಿನ ಆಟವಾಡಿ ಸಿಎಸ್‌ಕೆ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟಿದ್ದರು. ತಂಡಕ್ಕೆ ಅಗತ್ಯದ ಸಂದರ್ಭಗಳಲ್ಲಿ ಅಸಾಧಾರಣ ಆಟದ ಮೂಲಕ ಆಸರೆಯಾಗುವುದು ಶೇನ್ ವಾಟ್ಸನ್‌ ಅವರಲ್ಲಿನ ವಿಶೇಷತೆ.

10. ಯೂಸುಫ್‌ ಪಠಾಣ್‌
ಬಲಿಷ್ಠ ಆಲ್‌ರೌಂಡರ್‌ ಯೂಸುಫ್‌ ಪಠಾಣ್‌ ರಾಜಸ್ಥಾನ್‌ ರಾಯಲ್ಸ್‌, ಕೆಕೆಆರ್‌ ಮತ್ತು ಎಸ್‌ಆರ್‌ಎಚ್‌ ತಂಡಗಳ ಪರ ಬ್ಯಾಟ್‌ ಬೀಸಿದ್ದಾರೆ. ಯಾವುದೇ ತಂಡದಲ್ಲಿ ಆಡಿದರೂ ಆ ತಂಡದ ಬಲ ಹೆಚ್ಚಿಸಿದ್ದ ಯೂಸುಫ್‌ ಪಠಾಣ್‌, ಬಿರುಸಿನ ಬ್ಯಾಟಿಂಗ್‌ ಮೂಲಕ ಪಂದ್ಯಗಳ ಫಲಿತಾಂಶಗಳನ್ನು ಬದಲಾಯಿಸಿದ್ದಾರೆ. ಐಪಿಎಲ್‌ ನಾಕ್‌ಔಟ್‌ ಹಂತಗಳಲ್ಲಿ ಅವರಿಗೆ 2 ಬಾರಿ ಪಂದ್ಯಶ್ರೇಷ್ಠ ಗೌರವ ಸಿಕ್ಕಿರುವುದು ಅವರ ಪರಾಕ್ರಮಕ್ಕೆ ಸಾಕ್ಷಿ. ಚೊಚ್ಚಲ ಆವೃತ್ತಿಯ ಐಪಿಎಲ್‌ ಫೈನಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಯೂಸುಫ್‌ ಪಠಾಣ್‌ ಟ್ರೋಫಿ ಗೆದ್ದುಕೊಟ್ಟಿದ್ದರು.

";