This is the title of the web page
This is the title of the web page

Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Sports News

ನೀವು ಟ್ರೋಫಿ ಗೆಲ್ಲಬೇಕಿದ್ದರೆ ಪ್ಲೇಆಫ್​ನಲ್ಲಿ ಚೆನ್ನಾಗಿ ಆಡಬೇಕಾಗುತ್ತದೆ, RCBಗೆ ಟ್ರೋಫಿ ಸಿಗಲ್ಲ: ರಾಯುಡು ವ್ಯಂಗ್ಯ

ನೀವು ಟ್ರೋಫಿ ಗೆಲ್ಲಬೇಕಿದ್ದರೆ ಪ್ಲೇಆಫ್​ನಲ್ಲಿ ಚೆನ್ನಾಗಿ ಆಡಬೇಕಾಗುತ್ತದೆ, RCBಗೆ ಟ್ರೋಫಿ ಸಿಗಲ್ಲ: ರಾಯುಡು ವ್ಯಂಗ್ಯ

IPL 2024: . ಕಳೆದ 16 ಸೀಸನ್​ಗಳಿಂದ ಪ್ರಶಸ್ತಿ ಕನಸು ಹೊಂದಿದ್ದ ಆರ್​ಸಿಬಿ ಈ ಬಾರಿ ಕೂಡ ನಿರ್ಣಾಯಕ ಪಂದ್ಯದಲ್ಲಿ ​ಸೋಲನುಭವಿಸಿದ್ದು, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಈ ಸೋಲಿನೊಂದಿಗೆ ಆರ್​ಸಿಬಿ ತಂಡದ ಐಪಿಎಲ್ ಅಭಿಯಾನವನ್ನು ಅಂತ್ಯವಾಗಿದೆ.

ಇಲ್ಲಿ ರಾಯುಡು, ಸಂಭ್ರಮಾಚರಣೆ ಮತ್ತು ಆಕ್ರಮಣಕಾರಿ ವರ್ತನೆಯ ವಿಷಯಗಳನ್ನು ಪ್ರಸ್ತಾಪಿಸಿದ್ದು, ಸಿಎಸ್​ಕೆ ವಿರುದ್ಧದ ಆರ್​ಸಿಬಿ ತಂಡ ಗೆಲುವಿನ ಸಂಭ್ರಮವನ್ನು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಬಗ್ಗು ಬಡಿದು ಆರ್​ಸಿಬಿ ಭರ್ಜರಿಯಾಗಿ ಸಂಭ್ರಮಿಸಿದ್ದರು. ಹಾಗೆಯೇ ವಿರಾಟ್ ಕೊಹ್ಲಿಯ ಆಕ್ರಮಣಕಾರಿ ಸಂಭ್ರಮವನ್ನು ತಮ್ಮ ಹೇಳಿಕೆಯಲ್ಲಿ ಪರೋಕ್ಷವಾಗಿ ರಾಯುಡು ಪ್ರಸ್ತಾಪಿಸಿದ್ದಾರೆ.

ಯಾರೂ ಸಹ ಐಪಿಎಲ್ ಟ್ರೋಫಿಯನ್ನು ಕೇವಲ ಸಂಭ್ರಮಾಚರಣೆ ಮತ್ತು ಆಕ್ರಮಣಕಾರಿ ವರ್ತನೆಯಿಂದ ಗೆದ್ದಿಲ್ಲ. ಅಥವಾ ಸಿಎಸ್​ಕೆ ತಂಡವನ್ನು ಸೋಲಿಸಿದ್ದರಿಂದ ಯಾರೂ ಸಹ ಐಪಿಎಲ್​ ಟ್ರೋಫಿ ಗೆದ್ದಿಲ್ಲ. ನೀವು ಟ್ರೋಫಿ ಗೆಲ್ಲಬೇಕಿದ್ದರೆ ಪ್ಲೇಆಫ್​ನಲ್ಲಿ ಚೆನ್ನಾಗಿ ಆಡಬೇಕಾಗುತ್ತದೆ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

ಈ ಸೋಲಿನ ಬೆನ್ನಲ್ಲೇ ಸಿಎಸ್​ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ನೀಡಿದ ಹೇಳಿಕೆಗಳು ವೈರಲ್ ಆಗುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದ ಮಾತ್ರಕ್ಕೆ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ ಎಂದು ರಾಯುಡು ವ್ಯಂಗ್ಯವಾಡಿದ್ದಾರೆ.

 

Nimma Suddi
";