ಮೆಟಾ ಕಂಪನಿ ಈ ಫೀಚರ್ ಮೇಲೆ 2024 ರ ಜನವರಿ ತಿಂಗಳಲ್ಲಿ ಕಾರ್ಯ ಆರಂಭಿಸಿದ್ದು, ನಂತರದ ಮೂರು ತಿಂಗಳು ಬೆಟಾ ಟೆಸ್ಟಿಂಗ್ ಮಾಡುವ ಮೂಲಕ, ಈಗ ವಾಟ್ಸಾಪ್ ಬಳಕೆದಾರರಿಗೆ ಜಗತ್ತಿನಾದ್ಯಂತ ಲಭ್ಯಗೊಳಿಸಿದೆ ಎಂದು ಮಾಹಿತಿ ಬೆಳಕಿಗೆ ಬಂದಿದೆ.
ಪಾಸ್‌ಕೀ ಸಪೋರ್ಟ್ ಫೀಚರ್ ಅನ್ನು ಪ್ರಸ್ತುತ ಲಭ್ಯಗೊಳಿಸಿರುವುದು ಐಓಎಸ್ ಬಳಕೆದಾರರಿಗೆ. ಅಂದರೆ ಐಫೋನ್ ಬಳಕೆದಾರರಿಗೆ. ಇದಕ್ಕೂ ಮೊದಲೇ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಕೆದಾರರಿಗೆ ಈ ಫೀಚರ್ ಅಳವಡಿಸಿದೆ.
ನಿಮ್ಮ ಐಓಎಸ್ ಡಿವೈಸ್‌ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಓಪನ್ ಮಾಡಿ.
– ಸೆಟ್ಟಿಂಗ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
– ‘Accounts’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
– ‘Passkeys’ ಆಯ್ಕೆ 4ನೇ ಆಪ್ಸನ್ ಆಗಿ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
– ಮುಂದಿನ ಸ್ಕ್ರೀನ್‌ನಲ್ಲಿ ‘Create Passkey’ ಬಟನ್ ಕ್ಲಿಕ್ ಮಾಡಿ.
– ನಂತರ ನೀವು Face ID ಅಥವಾ Touch ID ಆಯ್ಕೆಗಳನ್ನು ನೋಡುತ್ತೀರಿ. ಆಯ್ಕೆ ಮಾಡಿ ‘Continue’ ಎಂಬಲ್ಲಿ ಕ್ಲಿಕ್ ಮಾಡಿ.
ಎಸ್ಎಂಎಸ್ ಕೋಡ್ ಗೆ ಹೋಲಿಸಿದರೆ, ಪಾಸ್‌ಕೀ ಒಂದು ಅತ್ಯುತ್ತಮ ಭದ್ರತಾ ಫೀಚರ್ ಆಗಿದೆ. ಇದೊಂದು ಅಥೆಂಟಿಕೇಷನ್ ವಿಧಾನವಾಗಿದೆ. ಇದನ್ನು ಫಿಡೊ ಅಲೈಯನ್ಸ್‌ನಿಂದ ಅಭಿವೃದ್ಧಿಪಡಿಸಿದ್ದು, ದೊಡ್ಡ ದೊಡ್ಡ ಟೆಕ್ ದೈತ್ಯ ಕಂಪನಿಗಳಾದ ಆಪಲ್, ಗೂಗಲ್, ಮೈಕ್ರೋಸಾಫ್ಟ್ ಕಂಪನಿಗಳು ಅನುಮೋದಿಸಿವೆ.
ವಾಟ್ಸಾಪ್ ಯಾವ ಐಓಎಸ್ ವರ್ಷನ್‌ನಲ್ಲಿ ಈ ಫೀಚರ್ ಲಭ್ಯ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ ಈ ಹಿಂದಿನ ಒಂದು ವರದಿ ಪ್ರಕಾರ ಐಓಎಸ್ 17 ಮತ್ತು ನಂತರದ ವರ್ಷನ್‌ಗಳಲ್ಲಿ ಪಾಸ್‌ಕೀ ಸಪೋರ್ಟ್ ವರ್ಕ್ ಆಗಲಿದೆ ಎಂದು ಹೇಳಲಾಗಿದೆ. ಅಂದರೆ ಐಫೋನ್ XR ಮಾಡೆಲ್‌ಗಳು ಅಥವಾ ಹೊಸ ಐಓಎಸ್ ಡಿವೈಸ್‌ಗಳನ್ನು ಈ ಪಾಸ್‌ಕೀ ಸೆಟಪ್ ಮಾಡಿಕೊಳ್ಳಬಹುದು ಎಂದು ಮಾಹಿತಿ ತಿಳಿದು ಬಂದಿದೆ.