Asia Cup 2023: ಏಷ್ಯಾಕಪ್ ಆರಂಭಕ್ಕೆ 5 ದಿನ ಬಾಕಿ ಇರುವಾಗಲೇ ಶ್ರೀಲಂಕಾಕ್ಕೆ ಆತಂಕಕಾರಿ ಸುದ್ದಿ ಕೇಳಿ ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಆತಿಥೇಯ ಶ್ರೀಲಂಕಾದ ಇಬ್ಬರು ಆಟಗಾರರಿಗೆ ಕೊರೊನೊ ಪಾಸಿಟಿವ್ ಇರುವುದು ತಿಳಿದುಬಂದಿದೆ.
ಏಷ್ಯಾಕಪ್ ಆರಂಭಕ್ಕೆ 5 ದಿನ ಬಾಕಿ ಇರುವಾಗಲೇ ಶ್ರೀಲಂಕಾಕ್ಕೆ ಆತಂಕಕಾರಿ ಸುದ್ದಿ ಕೇಳಿ ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಆತಿಥೇಯ ಶ್ರೀಲಂಕಾದ ಇಬ್ಬರು ಆಟಗಾರರಿಗೆ ಕೊರೊನೊ ಪಾಸಿಟಿವ್ ಇರುವುದು ತಿಳಿದುಬಂದಿದೆ.
ತಂಡದ ಆರಂಭಿಕ ಆಟಗಾರ ಅವಿಷ್ಕಾ ಫೆರ್ನಾಂಡೋ ಮತ್ತು ವಿಕೆಟ್‌ಕೀಪರ್ ಕುಸಾಲ್ ಪೆರೆರಾ ಅವರಿಗೆ ಕೊರೊನಾ ಪರೀಕ್ಷೆಯನ್ನು ಮಾಡಲಾಗಿದ್ದು, ಅದರ ವರದಿಯು ಸಕಾರಾತ್ಮಕವಾಗಿದೆ. ಏಷ್ಯಾಕಪ್‌ಗೆ ಶ್ರೀಲಂಕಾ ತಂಡವನ್ನು ಇನ್ನೂ ಪ್ರಕಟಿಸಿಲ್ಲ.
ಕೂಸಾಲ್ ಪೆರೇರಾ ವಾಪಸಾತಿಗೂ ಮುನ್ನವೇ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 6 ದಿನಗಳ ನಂತರ ಏಷ್ಯಾಕಪ್‌ನಲ್ಲಿ ಶ್ರೀಲಂಕಾ ತನ್ನ ಮೊದಲ ಪಂದ್ಯವನ್ನು ಆಡಬೇಕಾಗಿದೆ. ಆಗಸ್ಟ್ 31 ರಂದು ಪಲ್ಲೆಕೆಲೆಯಲ್ಲಿ ಆತಿಥೇಯ ಶ್ರೀಲಂಕಾ ಬಾಂಗ್ಲಾದೇಶವನ್ನು ಎದುರಿಸಲಿದೆ.
ಫರ್ನಾಂಡೊ ಮತ್ತು ಕುಸಲ್ ಪೆರೇರಾ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಶ್ರೀಲಂಕಾ ಮತ್ತು ಜಿಂಬಾಬ್ವೆಯ ODI ಸರಣಿಯ ಮೊದಲು, ಫರ್ನಾಂಡೋ ಅವರ ಕೊರೊನಾ ಪರೀಕ್ಷೆಯನ್ನು ಮಾಡಲಾಯಿತು.
ಬೂಸ್ಟರ್ ಡೋಸ್ ತೆಗೆದುಕೊಂಡ ನಂತರವೂ ಅವರಿಗೆ ಸೋಂಕು ಇರುವುದು ಕಂಡುಬಂದಿತ್ತು. ಅದೇ ಸಮಯದಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಎರಡು ವರ್ಷಗಳ ಹಿಂದೆ ಕುಸಲ್ ಪೆರೆರಾ ಕೂಡ ಈ ವೈರಸ್ ಸೋಂಕಿಗೆ ಒಳಗಾಗಿದ್ದರು.
ಆಗಸ್ಟ್ 30ರಿಂದ ಆರಂಭವಾಗಲಿರುವ ಏಷ್ಯಾಕಪ್ ಈ ಬಾರಿ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದೆ. ಪಾಕಿಸ್ತಾನದಲ್ಲಿ ಕೇವಲ 4 ಪಂದ್ಯಗಳು ನಡೆಯಲಿದ್ದು, ಶ್ರೀಲಂಕಾ ಫೈನಲ್ ಸೇರಿದಂತೆ ಒಟ್ಟು 9 ಪಂದ್ಯಗಳನ್ನು ನಡೆಯಲಿದೆ.
ಟೂರ್ನಿಯ ಫೈನಲ್ ಪಂದ್ಯ ಸೆಪ್ಟೆಂಬರ್ 17ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗೆ ಶ್ರೀಲಂಕಾ ಗುಂಪು-2 ರಲ್ಲಿ ಸ್ಥಾನ ಪಡೆದಿದೆ.
ಕಳೆದ ಬಾರಿ ಟಿ20 ಮಾದರಿಯಲ್ಲಿ ಏಷ್ಯಾಕಪ್ ನಡೆದಿತ್ತು. ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಶ್ರೀಲಂಕಾ ಚಾಂಪಿಯನ್ ಆಗಿತ್ತು. ಈ ಬಾರಿಯ ಪಂದ್ಯಾವಳಿಯು ಏಕದಿನ ಮಾದರಿಯಲ್ಲಿ ನಡೆಯಲಿದ್ದು, ಆ ಬಳಿಕ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ ತಂಡಗಳಿಗೆ ಏಷ್ಯಾಕಪ್‌ನಲ್ಲಿ ವಿಶ್ವಕಪ್‌ಗೂ ಮುನ್ನ ತಮ್ಮ ಸಿದ್ಧತೆಯನ್ನು ಪರೀಕ್ಷಿಸುವ ಅವಕಾಶ ಸಿಗಲಿದೆ.