This is the title of the web page
This is the title of the web page

Live Stream

June 2024
S M T W T F S
 1
2345678
9101112131415
16171819202122
23242526272829
30  

| Latest Version 9.4.1 |

Technology News

ಕೇವಲ 7,299 ರೂ.ಗೆ ಆಕರ್ಷಕವಾದ ಹೊಸ ರೆಡ್ಮಿ ಸ್ಮಾರ್ಟ್​ಫೋನ್

ಚೀನಾ ಮೂಲದ ಶವೋಮಿ ಕಂಪನಿ ಅಪರೂಪಕ್ಕೆ ಹೊಸ ಸ್ಮಾರ್ಟ್​ಫೋನ್ ಒಂದನ್ನು ಭಾರತದಲ್ಲಿ ಲಾಂಚ್ ಮಾಡಿದೆ. ತನ್ನ ಸಬ್​ಬ್ರ್ಯಾಂಡ್ ರೆಡ್ಮಿ ಅಡಿಯಲ್ಲಿ ಹೊಸ ರೆಡ್ಮಿ A3 ಫೋನನ್ನು ದೇಶದಲ್ಲಿ ಬಿಡುಗಡೆ ಮಾಡಿದೆ ಎಂದು ಮಾಹಿತಿ ತಿಳಿದು ಬಂದಿದೆ.

ರೆಡ್ಮಿ A- ಸರಣಿಗೆ ಸೇರ್ಪಡೆಗೊಳ್ಳುತ್ತದೆ. ಈ ಸ್ಮಾರ್ಟ್‌ಫೋನ್ ವಾಟರ್‌ಡ್ರಾಪ್-ಶೈಲಿಯ ನಾಚ್ ಡಿಸ್‌ಪ್ಲೇಯನ್ನು ಹೊಂದಿದೆ. ಅತ್ಯುತ್ತಮ ಕ್ಯಾಮೆರಾ ಇದೆ. 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಬೆಲೆ ಕೂಡ ಹೆಚ್ಚು ನಿಗದಿ ಮಾಡಲಾಗಿಲ್ಲ.

ಹೊಸ ರೆಡ್ಮಿ A3 ಭಾರತದಲ್ಲಿ ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ ಬೇಸ್ 3GB RAM + 64GB ಸ್ಟೋರೇಜ್ ರೂಪಾಂತರಕ್ಕೆ 7,299 ರೂ. ಇದೆ. 4GB + 128GB ಆವೃತ್ತಿಯ ಬೆಲೆ ರೂ. 8,299. ಅಂತೆಯೆ 6GB + 128GB ಮಾದರಿಯ ಬೆಲೆ ರೂ. 9,299 ಆಗಿದ್ದು, ಕೈಗೆಟುಕುವ ಹ್ಯಾಂಡ್‌ಸೆಟ್ ಅನ್ನು ಮಿಡ್‌ನೈಟ್ ಬ್ಲ್ಯಾಕ್, ಲೇಕ್ ಬ್ಲೂ ಮತ್ತು ಆಲಿವ್ ಗ್ರೀನ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ.

ಫೆಬ್ರವರಿ 23 ರಿಂದ ಫ್ಲಿಪ್​ಕಾರ್ಟ್, Mi.com ಮತ್ತು ಶವೋಮಿಯ ಚಿಲ್ಲರೆ ಪಾಲುದಾರರ ಮೂಲಕ ಖರೀದಿಸಬಹುದು.ರೆಡ್ಮಿ A2 ಅನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರ ಆರಂಭಿಕ ಬೆಲೆ 2GB RAM + 32GB ಸ್ಟೋರೇಜ್ ರೂಪಾಂತರಕ್ಕೆ 5,999 ರೂ. ಆಗಿದ್ದು,ರೆಡ್ಮಿ A3 ಫೀಚರ್ಸ್: ಡ್ಯುಯಲ್-ಸಿಮ್ (ನ್ಯಾನೋ) ರೆಡ್ಮಿ A3 ಫೋನ್ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.71-ಇಂಚಿನ HD+ (1,600×700 ಪಿಕ್ಸೆಲ್‌ಗಳು) ಡಿಸ್ಪ್ಲೇ ಜೊತೆಗೆ 120Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 90Hz ರಿಫ್ರೆಶ್ ರೇಟ್ ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ನೀಡಲಾಗಿದೆ.