This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Sports News

ಒತ್ತಡದ ಪರಿಸ್ಥಿತಿಯಲ್ಲಿ ಚೆಂಡನ್ನು ಹೇಗೆ ಎದುರಿಸಬೇಕೆಂಬ ಕಲೆಯನ್ನು ಧೋನಿಯಿಂದ ಕಲಿತಿದ್ದೇನೆ ಎಂದ ಧ್ರುವ್ ಜುರೆಲ್‌

ಒತ್ತಡದ ಪರಿಸ್ಥಿತಿಯಲ್ಲಿ ಚೆಂಡನ್ನು ಹೇಗೆ ಎದುರಿಸಬೇಕೆಂಬ ಕಲೆಯನ್ನು ಧೋನಿಯಿಂದ ಕಲಿತಿದ್ದೇನೆ ಎಂದ ಧ್ರುವ್ ಜುರೆಲ್‌

ಬೆಂಗಳೂರು: ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್, ಬ್ಯಾಟರ್ ಧ್ರುವ್ ಜುರೆಲ್‌ ಅವರು ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯೊಂದಿಗಿನ ಮಾತುಕತೆಯನ್ನು ಬಹಿರಂಗಪಡಿಸಿದ್ದು, ಬೆಳಕಿಗೆ ಬಂದಿದೆ.

ಸಿಎಸ್ ಕೆ ನಾಯಕ ಮನಸ್ಸಿನ ಹತೋಟಿ ಹಾಗೂ ಒತ್ತಡದ ಪರಿಸ್ಥಿತಿಯಲ್ಲಿ ಚೆಂಡನ್ನು ಹೇಗೆ ಎದುರಿಸಬೇಕೆಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಹೇಳಿದ್ದು, ಆಧುನಿಕ ಕ್ರಿಕೆಟ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಹಲವು ಯುವ ಆಟಗಾರರಿಗೆ ಸಲಹೆಗಳನ್ನು ನೀಡಿದ್ದಾರೆ. ಅಲ್ಲದೆ ಎಂಎಸ್ ಡಿ ಅವರನ್ನೇ ಸಾಕಷ್ಟು ಯಂಗ್ ಪ್ಲೇಯರ್ಸ್ ರೋಲ್ ಮಾಡೆಲ್ ಆಗಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾಗೆ ಎಲ್ಲ ಸ್ವರೂಪದ ಟ್ರೋಫಿ ಗೆದ್ದುಕೊಟ್ಟಿರುವ ಧೋನಿ ಅಪಾರವಾದ ಗೌರವ ಹೊಂದಿದ್ದು, ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಆರಂಭಿಕ ಎರಡು ಪಂದ್ಯಗಳಿಗೆ ಆಯ್ಕೆ ಆಗಿರುವ ಯುವ ವಿಕೆಟ್ ಕೀಪರ್ ಧ್ರುವ್ ಜುರೆಲ್‌ಗೆ ಹೈದರಾಬಾದ್ ಟೆಸ್ಟ್ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆಯುವ ಭರವಸೆಯಲ್ಲಿದ್ದು, ಎಂ.ಎಸ್.ಧೋನಿಯಿಂದ ಪಡೆದ ಸಲಹೆಯನ್ನು ಬಹಿರಂಗಪಡಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.