This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Crime News

ಸ್ಥಳದಲ್ಲೇ ನಾಲ್ವರ ದುರ್ಮರಣ

ಲಾರಿಗೆ ಕಾರ್ ಡಿಕ್ಕಿ

ನಿಮ್ಮ ಸುದ್ದಿ ಬಾಗಲಕೋಟೆ

ನಿಯಂತ್ರಣ ತಪ್ಪಿದ ಕಾರ್‌ವೊಂದು ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಬೇವಿನಮಟ್ಟಿ ಕ್ರಾಸ್ ಬಳಿ ನಡೆದಿದೆ.

ಮೃತಪಟ್ಟವರೆಲ್ಲರೂ ಇಳಕಲ್ ನಿವಾಸಿಗಳು. ನವೀನ ಸಾಕಾ (೨೨), ಚಂದ್ರಶೇಖರ ಬುಟ್ಟಾ (೨೨), ಚನ್ನಬಸವ ಅಂಜಿ (೨೨) ಹಾಗೂ ಬಸವರಾಜ ಭಂಡಾರಿ (೩೩) ಮೃತ ದುರ್ಧೈವಿಗಳು. ಕಾರ್ ಚಾಲಕ ವಿಜಯಕುಮಾರ ಬಂಡಿ ತೀವ್ರ ಗಾಯಗೊಂಡಿದ್ದು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಳಕಲ್ ನಿವಾಸಿಗಳಾದ ಎಲ್ಲರೂ ನವೀನ್ ಸಾಕಾ ಅವರ ಅಕ್ಕನ ಮಗನ ಜನ್ಮದಿನಾಚರಣೆ ಆಚರಿಸಿ ಮಾ.೨೮ರಂದು ರಾತ್ರಿ ಇಳಕಲ್‌ನತ್ತ ಹೊರಟಿದ್ದರು. ಹುನಗುಂದ ಠಾಣೆ ವ್ಯಾಪ್ತಿಯ ರಾಜ್ಯ ಹೆದ್ದಾರಿಯ ಬೇವಿನಮಟ್ಟಿ ಕ್ರಾಸ್ ಬಳಿ ರಸ್ತೆ ಪಕ್ಕ ನಿಂತಿದ್ದ ಲಾರಿಯೊಂದಕ್ಕೆ ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದ ಕಾರ್ ಚಾಲಕ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿ ರಭಸಕ್ಕೆ ಕಾರ್‌ನಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆಯುತ್ತಲೇ ಲಾರಿ ಚಾಲಕ ಲಾರಿಯೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾನೆ. ಮೃತ ನವೀನ್ ಸಾಕಾ ಅವರ ತಂದೆ ನಾಗೇಶ ಸಾಕಾ ಹುನಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮಾಹಿತಿ ಪಡೆದಿದ್ದಾರೆ.

 

Nimma Suddi
";