ನವದೆಹಲಿ: ಕಳೆದ ವರ್ಷ ಗುಜರಾತ್ನಲ್ಲಿ ನಡೆದಿದ್ದ ವೈಬ್ರೆಂಟ್ ಗುಜರಾತ್ ಶೃಂಗಸಭೆಯಲ್ಲಿ ಉದ್ಯಮಿ ಗೌತಮ್ ಅದಾನಿ ತಾನು ಗಗನದಿಂದಲೂ ಕಾಣಬಲ್ಲಂತಹ ವಿಶ್ವದ ಅತಿದೊಡ್ಡ ಕ್ಲೀನ್ ಎನರ್ಜಿ ಪ್ರಾಜೆಕ್ಟ್ ಸ್ಥಾಪಿಸುವುದಾಗಿ ಘೋಷಿಸಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.
ಗುಜರಾತ್ನಲ್ಲಿ ಮುಂದಿನ ಐದು ವರ್ಷದಲ್ಲಿ 2 ಲಕ್ಷ ಕೋಟಿ ರೂ ಹೂಡಿಕೆ ಮಾಡುವುದಾಗಿಯೂ ಹೇಳಿದ್ದು, ಅದಾನಿ ಗ್ರೂಪ್ ಗುಜರಾತ್ನಲ್ಲಿ ಬೃಹತ್ ಕಾಪರ್ ಉತ್ಪಾದನಾ ಘಟಕ ಸ್ಥಾಪಿಸುತ್ತಿದ್ದು, ಒಂದೇ ಸ್ಥಳದಲ್ಲಿ ನಿರ್ಮಿಸಲಾಗುವ ವಿಶ್ವದ ಅತಿದೊಡ್ಡ ತಾಮ್ರ ಉತ್ಪಾದನಾ ಘಟಕ ಇದಾಗಿರಲಿದೆ ಎಂದು ವರದಿಗಳು ಹೇಳುತ್ತಿವೆ.
ಸಿಕ್ಕಿರುವ ಮಾಹಿತಿ ಪ್ರಕಾರ ಗುಜರಾತ್ನ ಕಚ್ಛ್ ಜಿಲ್ಲೆಯ ಮುಂದ್ರಾ ಬಂದರು ನಗರಿಯಲ್ಲಿ ಸ್ಥಾಪನೆಯಾಗಲಿರುವ ಕಾಪರ್ ತಯಾರಕಾ ಘಟಕಕ್ಕೆ 1.2 ಬಿಲಿಯನ್ ಡಾಲರ್ ಹೂಡಿಕೆ ಆಗುವ ನಿರೀಕ್ಷೆ ಇದ್ದು, ಗುಜರಾತ್ನ ಕಚ್ಛ್ ಮರುಭೂಮಿಯಲ್ಲಿ ಅದಾನಿ ಗ್ರೂಪ್ 725 ಚದರ ಕಿಮೀ ವಿಸ್ತೀರ್ಣ ಪ್ರದೇಶದಲ್ಲಿ ಗ್ರೀನ್ ಎನರ್ಜಿ ಪಾರ್ಕ್ ನಿರ್ಮಿಸುತ್ತಿದೆ.
ಇದು ವಿಶ್ವದ ಅತಿದೊಡ್ಡ ಗ್ರೀನ್ ಎನರ್ಜಿ ಪಾರ್ಕ್ ಎನಿಸಲಿದ್ದು, ಇದರಲ್ಲಿ ಸೌರಶಕ್ತಿಯಿಂದ 30 ಗೀಗಾ ವ್ಯಾಟ್ ವಿದ್ಯುತ್ ಪಡೆಯಲು ಸಾಧ್ಯವಾಗುತ್ತದೆ. ಹಾಗೆಯೇ, ಸೌರಶಕ್ತಿ ಮತ್ತು ವಾಯುಶಕ್ತಿಯಿಂದ ಸಮಗ್ರ ಮರುಬಳಕೆ ಇಂಧದ ಉತ್ಪಾದನೆಯ ವ್ಯವಸ್ಥೆಯೂ ಇದರಲ್ಲಿ ಇರಲಿದೆ. ಸೋಲಾರ್ ಮಾಡ್ಯೂಲ್, ವಿಂಡ್ ಟರ್ಬೈನ್ ಮತ್ತು ಹೈಡ್ರೋಜನ್ ಎಲೆಕ್ಟ್ರೋಲೈಜರ್ಗಳ ತಯಾರಿಕೆಗೆ ಮೂರು ಗೀಗಾ ಫ್ಯಾಕ್ಟರಿಗಳನ್ನು ಗೌತಮ್ ಅದಾನಿಯವರ ಸಂಸ್ಥೆಗಳು ನಿರ್ಮಿಸಲಿವೆ ಎಂದು ಮಾಹಿತಿ ಕಂಡು ಬಂದಿದೆ.