This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Sports News

ಐಪಿಎಲ್ 55ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿ

ಐಪಿಎಲ್ 55ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿ

ಐಪಿಎಲ್ 55ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಪ್ಲೇಆಫ್​ನಿಂದ ಭಾಗಶಃ ಹೊರಬಿದ್ದಿದೆ. ಅದಾಗ್ಯೂ ಹೈದರಾಬಾದ್ ವಿರುದ್ಧ ಇಂದು ನಡೆಯುವ ಪಂದ್ಯವನ್ನು ಮುಂಬೈ ಗೆಲ್ಲುವುದು ಇತರ 6 ತಂಡಗಳಿಗೆ ಬಹಳ ಮುಖ್ಯ.

ಇದುವರೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ 10 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 6 ಪಂದ್ಯಗಳನ್ನು ಗೆದ್ದು 12 ಅಂಕಗಳನ್ನು ಸಂಪಾಧಿಸಿದೆ. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆದ್ದರೆ ತಂಡ 14 ಅಂಕ ಪಡೆಯಲಿದೆ. ಇದು ಸಂಭವಿಸಿದರೆ ಇತರ ತಂಡಗಳು ಪ್ಲೇ ಆಫ್ ತಲುಪಲು ಕಷ್ಟವಾಗುತ್ತದೆ.

ಹೈದರಾಬಾದ್ ಸೋಲಿನಿಂದ ಲಾಭ ಪಡೆಯುವ ಮುಖ್ಯ ತಂಡಗಳಲ್ಲಿ ಸಿಎಸ್​ಕೆ ಅಗ್ರಸ್ಥಾನದಲ್ಲಿದೆ. ಚೆನ್ನೈ ಇದುವರೆಗೆ 11 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 6 ಪಂದ್ಯಗಳನ್ನು ಗೆದ್ದು 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇಂದು ಹೈದರಾಬಾದ್ ಸೋತರೆ ಸಿಎಸ್​ಕೆ ತಂಡ ಮೂರನೇ ಸ್ಥಾನದಲ್ಲಿ ಉಳಿಯಲಿದೆ. ಒಂದು ವೇಳೆ ಹೈದರಾಬಾದ್ ಗೆದ್ದರೆ ಒಂದು ಸ್ಥಾನ ಕೆಳಗಿಳಿಯಲಿದೆ.

ಆದರೆ ಇಂದಿನ ಪಂದ್ಯದಲ್ಲಿ ಹೈದರಾಬಾದ್ ಸೋತರೆ, ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್, ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಭಾರಿ ಲಾಭವಾಗಲಿದೆ. ಅಲ್ಲದೆ ಈ ತಂಡಗಳಿಗೆ ಪ್ಲೇಆಫ್‌ ಹಾದಿಯೂ ಸನಿಹವಾಗಲಿದೆ.

ಪ್ರಸ್ತುತ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ಇದುವರೆಗೆ 11 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಮೂರು ಪಂದ್ಯಗಳನ್ನು ಮಾತ್ರ ಗೆದ್ದಿದೆ. ಉಳಿದಂತೆ 8 ಪಂದ್ಯಗಳಲ್ಲಿ ತಂಡ ಸೋಲನುಭವಿಸಿದೆ. ಇಂದಿನ ಪಂದ್ಯದಲ್ಲಿ ಮುಂಬೈ ಸೋತರೆ ಪ್ಲೇ ಆಫ್ ರೇಸ್​ನಿಂದ ಅಧಿಕೃತವಾಗಿ ಹೊರಗುಳಿಯಲಿದೆ. ಆದರೆ ಮೇಲೆ ಹೇಳಿದತೆ ಮುಂಬೈ ತಂಡದ ಗೆಲುವು ಪಾಯಿಂಟ್ ಪಟ್ಟಿಯಲ್ಲಿ 6 ತಂಡಗಳಿಗೆ ಲಾಭವಾಗಲಿದೆ.

 

";