LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಿಯ ಪತ್ರಕರ್ತರ ಮಾಸಾಶನ ಷರತ್ತುಗಳನ್ನು ಸದ್ಯದಲ್ಲೇ ಸಡಿಲಿಸಲಾಗುವುದು:ಕೆ.ವಿ.ಪ್ರಭಾಕರ್

ಬೆಂಗಳೂರು: ಹಿರಿಯ ಪತ್ರಕರ್ತರ ಮಾಸಾಶನಕ್ಕೆ ಸಂಬಂಧಿಸಿದಂತೆ ಇರುವ ಕಠಿಣ ಷರತ್ತುಗಳನ್ನು ಸದ್ಯದಲ್ಲೇ ಸಡಿಲಿಸಿ ಎಲ್ಲಾ ಅರ್ಹ ಪತ್ರಕರ್ತರಿಗೂ ಮಾಸಾಶನ ಸಿಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ಕೈಗೊಳ್ಳುವರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದರು.

ಭಾರತೀಯ ಹಿರಿಯ ಪತ್ರಕರ್ತರ ಒಕ್ಕೂಟ (ಎಸ್ ಜೆಎಫ್ ಐ) ಹಾಗೂ ಕರ್ನಾಟಕ ಹಿರಿಯ ಪತ್ರಕರ್ತರ ವೇದಿಕೆಯ ಆಶ್ರಯದಲ್ಲಿ ಇಂದು ನಡೆದ ಹಿರಿಯ ಪತ್ರಕರ್ತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪತ್ರಕರ್ತರಿಗೆ ಸೌಲಭ್ಯಗಳು ದೊರೆಯುತ್ತಿದ್ದರೇ ಅದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ.ಈಗಿರುವ ಷರತ್ತುಗಳಿಂದ ಹಿರಿಯ ಪತ್ರಕರ್ತರಿಗೆ ಮಾಸಾಶನ ಸಿಗುವುದು ಕಠಿಣವಾಗಿರುವುದರಿಂದ ಸದ್ಯದಲ್ಲೇ ಷರತ್ತುಗಳನ್ನು ಸಡಿಲಿಸಿ ಎಲ್ಲಾ ಅರ್ಹ ಪತ್ರಕರ್ತರಿಗೂ ಮಾಸಾಶನ ದೊರೆಯುವಂತೆ ಮಾಡಲಾಗುವುದು ಎಂದು ಹೇಳಿದರು.

ಪತ್ರಕರ್ತರ ಆರೋಗ್ಯ ಸೌಲಭ್ಯಕ್ಕೆ ಸಂಬಂಧಿಸಿದ 'ಮುಖ್ಯ ಮಂತ್ರಿಗಳ ಮಾಧ್ಯಮ ಸಂಜೀವಿನಿ' ಯೋಜನೆಯನ್ನು ಹಿರಿಯ ಪತ್ರಕರ್ತರಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇಂದು ಅಭಿವೃದ್ಧಿ ಮತ್ತು ತನಿಖಾ ಪತ್ರಿಕೋದ್ಯಮ ಸ್ಥಗಿತಗೊಂಡಿದ್ದು,ಊಹಾ ಪತ್ರಿಕೋದ್ಯಮ ದೊಡ್ಡದಾಗಿ ಬೆಳೆಯುತ್ತಿದೆ.ಸತ್ಯದ ಮೇಲೆ ಸುಳ್ಳಿನ ಸವಾರಿ ನಡೆಯುತ್ತಿದೆ.ಇದರಿಂದ ಪತ್ರಿಕೋದ್ಯಮದ ಬಗೆಗಿನ ವಿಶ್ವಾಸಾರ್ಹತೆ ಕಡಿಮೆ ಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತರ ವೇದಿಕೆಯ ಅಧ್ಯಕ್ಷ ಆರ್.ಪಿ.ಸಾಂಬಸದಾಶಿವ ರೆಡ್ಡಿ ಅವರು,ಪತ್ರಕರ್ತರ ಮಾಸಾಶನ ಮತ್ತು ಆರೋಗ್ಯ ಸೌಲಭ್ಯಕ್ಕೆ ಸಂಬಂಧಿಸಿದ ಷರತ್ತುಗಳನ್ನು ಸಡಿಲಿಸುವಂತೆ ಕೆ.ವಿ.ಪ್ರಭಾಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
'ಎಸ್ ಜೆ ಎಫ್ ಐ', ಪ್ರಧಾನ ಕಾರ್ಯದರ್ಶಿ ಎನ್.ಪಿ.ಚೆಕ್ಕುಟ್ಟಿ ಮಾತನಾಡಿ,ಹಿರಿಯ ಪತ್ರಕರ್ತರಿಗೆ ರಾಷ್ಟ್ರ ಮಟ್ಟದಲ್ಲಿ ಮಾಸಾಶನ ಮತ್ತು ಆರೋಗ್ಯ ಸೌಲಭ್ಯಗಳು ಸಿಗಬೇಕು ಎಂದು ಆಗ್ರಹಿಸಿದರು.

ಸಮಾವೇಶದಲ್ಲಿ 'ಎಸ್ ಜೆಎಫ್ ಐ' ನ ಉಪಾಧ್ಯಕ್ಷ ಆನಂದಮ್ ಪುಲಿಪಲುಪುಲ,ಕಾರ್ಯದರ್ಶಿಗಳಾದ ಕೆ.ಶಾಂತ ಕುಮಾರಿ,ಕೆ.ಪಿ.ವಿಜಯ ಕುಮಾರ್,ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಭೂಪತಿ,ಶಾಸ್ತ್ರಿ ರಾಮಚಂದ್ರನ್,ಹಿರಿಯ ಪತ್ರಕರ್ತರ ವೇದಿಕೆಯ ಕಾರ್ಯಾಧ್ಯಕ್ಷ ಎಂ.ಎ.ಪೊನ್ನಪ್ಪ, ಉಪಾಧ್ಯಕ್ಷ ಸೋಮಸುಂದರ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಾಜೇಂದ್ರ ಕುಮಾರ್, ಜಂಟಿ ಕಾರ್ಯದರ್ಶಿ ಎಸ್.ಆರ್. ವೆಂಕಟೇಶ ಪ್ರಸಾದ್, ಖಜಾಂಚಿ ಬಿ.ನಾರಾಯಣ್,ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶಿವಾಜಿ ಗಣೇಶನ್, ಕೆ.ಆದಿನಾರಾಯಣ ಮೂರ್ತಿ ಸೇರಿದಂತೆ ರಾಜ್ಯಾದ್ಯಂತ ದಿಂದ ಆಗಮಿಸಿದ್ದ ಹಿರಿಯ ಪತ್ರಕರ್ತರು ಪಾಲ್ಗೊಂಡಿದ್ದರು.

Author
Nimma Suddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಸತಿ ನಿಲಯಗಳಿಗೆ ದೀಡಿರ್ ಬೇಟಿ ನೀಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಬೆಂಗಳೂರು-ಹಾಸನ-ಮಂಗಳೂರು ಜೋಡಿ ರೈಲು ಹಳಿ ನಿರ್ಮಾಣ; ಸಚಿವ ಎಂ.ಬಿ. ಪಾಟೀಲ ಚರ್ಚೆ!ಸಾರ್ವಜನಿಕ ಹಣದಲ್ಲಿ ಬಾಬರಿ ಮಸೀದಿ ನಿರ್ಮಿಸಲು ಬಯಸಿದ್ದ ನೆಹರೂ ಎಂದ ರಾಜನಾಥ ಸಿಂಗ್ಪುಟಿನ್ ಭೇಟಿ: ಭಾರತದ ಜೊತೆ ಅಣು ಸಹಕಾರ ಒಪ್ಪಂದಕ್ಕೆ ರಷ್ಯಾ ಸಂಪುಟ ಅಸ್ತುಕರ್ನಾಟಕದ ಸಹಕಾರ ಸಂಘಗಳ ಅಭಿವೃದ್ಧಿಗೆ ₹4,164 ಕೋಟಿ: ರಾಜ್ಯಸಭೆಗೆ ಅಮಿತ್ ಶಾ70ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದು ; ಬೆಂಗಳೂರು, ಮುಂಬೈ ಸೇರಿ ಅನೇಕ ಏರ್ಪೋರ್ಟ್'ನಲ್ಲಿ ಅವ್ಯವಸ್ಥೆದ. ಆಫ್ರಿಕಾ ವಿರುದ್ಧದ 5 ಪಂದ್ಯಗಳ T20I ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ |IND vs SAಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆಯಪ್‌ ಕಡ್ಡಾಯ ಆದೇಶ ಹಿಂಪಡೆದ ಕೇಂದ್ರ ಸರ್ಕಾರವಾಯುಭಾರ ಕುಸಿತ, ಮುಂದಿನ 24 ಗಂಟೆಗಳಲ್ಲಿ ಧಾರಾಕಾರ ಮಳೆ! ಈ ಭಾಗಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!ಸಿಬಿಐ ತನಿಖೆ ಆದೇಶ ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಸರ್ಕಾರ ಮನವಿ