ನವದೆಹಲಿ: ಚುನಾವಣಾ ಫಲಿತಾಂಶ ಪ್ರಕಟವಾಗುವ ಜೂನ್ 4ರಂದು ಷೇರು ಮಾರುಕಟ್ಟೆ ಭರ್ಜರಿಯಾಗಿ ಬೆಳೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಘಂಟಾಘೋಷವಾಗಿ ಹೇಳಿದರು.
ಚುನಾವಣೆಯಲ್ಲಿ ಏನೇ ಫಲಿತಾಂಶ ಬಂದರೂ ಮಾರುಕಟ್ಟೆ ಮೇಲೆ ಪರಿಣಾಮ ಹೆಚ್ಚಿರುವುದಿಲ್ಲ. ಮಾರುಕಟ್ಟೆ ಬೆಲೆ ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಕಾರಾತ್ಮಕ ಅಚ್ಚರಿಯ ಸಾಧ್ಯತೆ ಕಡಿಮೆ ಇದೆ. ಕುಸಿತ ಕಂಡರೂ ಅಚ್ಚರಿ ಪಡುವಂತಿಲ್ಲ ಎಂದು ವಿರಾಜ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಎಕನಾಮಿಕ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ವಿರಾಜ್ ಗಾಂಧಿ ಅವರು ನಿಫ್ಟಿ ಸೂಚ್ಯಂಕ ಕುಸಿತ ಕಾಣುವ ಸಾಧ್ಯತೆ ಇದೆ ಎನ್ನುತ್ತಾರೆ.
ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಮಾರುಕಟ್ಟೆಬಯಸುತ್ತದೆ ಎಂಬುದು ಅವರ ಹೇಳಿಕೆ ಹಿಂದಿರುವ ಮರ್ಮ. ನಿಜವಾಗಿಯೂ ಮಾರುಕಟ್ಟೆಗೆ ಆ ರೀತಿಯ ಆದ್ಯತೆ ಅಥವಾ ಬಯಕೆ ಇರುತ್ತದಾ? ಸ್ಯಾಮ್ಕೋ ಮ್ಯೂಚುವಲ್ ಫಂಡ್ನ ಸಿಇಒ ವಿರಾಜ್ ಗಾಂಧಿ ಪ್ರಕಾರ ಈ ರೀತಿ ರಾಜಕೀಯ ವಿದ್ಯಮಾನಗಳು ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲು ಆಗುವುದಿಲ್ಲ ಎಂದು ಹೇಳುತ್ತಾರೆ.