ಒನ್ಪ್ಲಸ್ ಕಂಪನಿಯ ಪ್ರೀಮಿಯಂ ಸ್ಮಾರ್ಟ್ಫೋನ್ ಒನ್ಪ್ಲಸ್ ಏಸ್ 3 ಕಳೆದ ವರ್ಷ ಅನಾವರಣಗೊಂಡಿದ್ದು, ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಇದೀಗ ಕಂಪನಿಯ ತನ್ನ Ace ಸರಣಿಗೆ Ace 3V (OnePlus Ace 3V) ಸೇರ್ಪಡೆಗೊಳಿಸಲು ಮುಂದಾಗಿದೆ.
ಹೊಸ ಒನ್ಪ್ಲಸ್ ಏಸ್ 3ವಿ ಫೋನ್ ಕುರಿತು ಕೆಲ ಫೀಚರ್ಸ್ ಬಹಿರಂಗವಾಗಿದ್ದು, ಫೋನ್ ಸ್ನಾಪ್‌ಡ್ರಾಗನ್ 7 Gen 3 ಚಿಪ್‌ಸೆಟ್ ಅನ್ನು ಹೊಂದಿದೆ. ಇದಲ್ಲದೆ, ಇದರ ಡಿಸ್‌ಪ್ಲೇ ಹೆಚ್ಚಿನ ರೆಸಲ್ಯೂಶನ್ ಪ್ಯಾನೆಲ್‌ನೊಂದಿಗೆ ಬರಲಿದೆಯಂತೆ.
ಒನ್ಪ್ಲಸ್ ಏಸ್ 3V ಸ್ಮಾರ್ಟ್ಫೋನ್ ಈ ಹಿಂದೆ ಬಿಡುಗಡೆಯಾದ ಒನ್ಪ್ಲಸ್ ಏಸ್ 2V ನ ಉತ್ತರಾಧಿಕಾರಿಯಾಗಿದ್ದು, ಲಾಂಚ್‌ಗೂ ಮುನ್ನ ಫೋನ್‌ನ ಪ್ರೊಸೆಸರ್ ಮತ್ತು ಡಿಸ್‌ಪ್ಲೇ ಬಗ್ಗೆ ಮಾಹಿತಿ ಬಹಿರಂಗವಾಗಿದೆ. Weibo ನಲ್ಲಿ ಫೋನ್‌ಗೆ ಸಂಬಂಧಿಸಿದ ಕೆಲ ಫೀಚರ್ಸ್ ಸೋರಿಕೆ ಆಗಿದೆ. 1.5K ರೆಸಲ್ಯೂಶನ್ ಹೊಂದಿರುವ OLED ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ಟಿಪ್ಸ್ಟರ್ ಸೋರಿಕೆ ಮಾಡಿದ್ದಾರೆ.
ಒನ್ಪ್ಲಸ್ ಏಸ್ 3V ನ ಬ್ಯಾಟರಿ ವಿಶೇಷಣಗಳನ್ನು ಸಹ ಇಲ್ಲಿ ಉಲ್ಲೇಖಿಸಲಾಗಿದೆ. ಅದರ ಪ್ರಕಾರ ಫೋನ್ 5000 mAh ಬ್ಯಾಟರಿ ಶಕ್ತಿಯನ್ನು ಪಡೆಯಬಹುದು. ಇದರೊಂದಿಗೆ, 100W ವೇಗದ ಚಾರ್ಜಿಂಗ್ ಬೆಂಬಲವನ್ನು ಒದಗಿಸಲಾಗುತ್ತದೆ. ಈ ಫೋನ್ ಫ್ರೇಮ್ ಪ್ಲಾಸ್ಟಿಕ್‌ನಲ್ಲಿ ಬರಬಹುದು ಮತ್ತು ಹಿಂಭಾಗಕ್ಕೆ ಗಾಜಿನ ಫಲಕವನ್ನು ನೀಡಬಹುದು ಎಂದು ಹೇಳಲಾಗಿದೆ. ಇದರ ಹೊರತಾಗಿ ಫೋನ್‌ನ ಕ್ಯಾಮೆರಾ, ಸ್ಟೋರೇಜ್, RAM ಇತ್ಯಾದಿಗಳ ಮಾಹಿತಿಯನ್ನು ನೀಡಲಾಗಿಲ್ಲ.
ಈ ಫೋನ್ 120Hz ರಿಫ್ರೆಶ್ ದರವನ್ನು ಹೊಂದಿರುತ್ತದೆ. ಪ್ರೊಸೆಸರ್‌ಗೆ ಸಂಬಂಧಿಸಿದಂತೆ, ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7 ಜನ್ 3 ಚಿಪ್‌ಸೆಟ್‌ನೊಂದಿಗೆ ಬರಬಹುದು ಎಂದು ಹೇಳಲಾಗಿದೆ.