This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Business News

ಪೇಟಿಎಂ ಷೇರುಬೆಲೆ ಪಾತಾಳಕ್ಕೆ; ಆರ್​ಬಿಐನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ನಿರ್ಬಂಧ ಬಿದ್ದಾಗ ಪೇಟಿಎಂ ಅಥವಾ ಒನ್ 97 ಕಮ್ಯೂನಿಕೇಶನ್ಸ್ ಸಂಸ್ಥೆಯ ಷೇರುಕುಸಿತ

ಪೇಟಿಎಂ ಷೇರುಬೆಲೆ ಪಾತಾಳಕ್ಕೆ; ಆರ್​ಬಿಐನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ನಿರ್ಬಂಧ ಬಿದ್ದಾಗ ಪೇಟಿಎಂ ಅಥವಾ ಒನ್ 97 ಕಮ್ಯೂನಿಕೇಶನ್ಸ್ ಸಂಸ್ಥೆಯ ಷೇರುಕುಸಿತ

ನವದೆಹಲಿ: ಆರ್​ಬಿಐನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ನಿರ್ಬಂಧ ಬಿದ್ದಾಗ ಪೇಟಿಎಂ ಅಥವಾ ಒನ್ 97 ಕಮ್ಯೂನಿಕೇಶನ್ಸ್ ಸಂಸ್ಥೆಯ ಷೇರುಕುಸಿತದ ಹೊಸ ಸುತ್ತು ಆರಂಭವಾಗಿದ್ದು, ಫೆಬ್ರುವರಿಯಿಂದ ಇಲ್ಲಿಯವರೆಗೆ ನಿರಂತರವಾಗಿ ಕುಸಿಯುತ್ತಿರುವ ಪೇಟಿಎಂ ಷೇರುಬೆಲೆ.

ಇಂದು ಬುಧವಾರ ಮಾರುಕಟ್ಟೆ ದಿನಾಂತ್ಯದಲ್ಲಿ 317.15 ರೂ ತಲುಪಿದ್ದು, ಹಿಂದಿನ ಕನಿಷ್ಠ ದರ 318 ರೂ ಇತ್ತು. ಆ ದಾಖಲೆ ಮುರಿದು ಕುಸಿದಿದೆ. ಸತತ 10 ಮಾರುಕಟ್ಟೆ ದಿನಗಳು ಇದರ ಕುಸಿತವಾಗಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ದೀರ್ಘಾವಧಿ ಕುಸಿತ ಕಂಡಿರುವುದು. 391.35 ರೂ ಇದ್ದ ಷೇರುಬೆಲೆ ಕೇವಲ 10 ಸೆಷನ್​ನಲ್ಲಿ ಶೇ. 19ರಷ್ಟು ಕುಸಿತ ಕಂಡಿದೆ. ಈ ವರ್ಷದಲ್ಲಿ ಜನವರಿಯಿಂದ ಈಚೆ ಶೇ. 50ರಷ್ಟು ಬೆಲೆ ಕುಸಿತವಾಗಿದೆ.

ಪೇಟಿಎಂನ ಗ್ರಾಹಕರು ಸಾಲ ಮರುಪಾವತಿ ಮಾಡದೇ ಹೋದ ಕಾರಣ ಆದಿತ್ಯ ಬಿರ್ಲಾ ಫೈನಾನ್ಸ್ ಸಂಸ್ಥೆ ಲೋನ್ ಗ್ಯಾರಂಟಿಗಳನ್ನು ಬಳಸಿದೆ. ಇದು ಪೇಟಿಎಂ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ಆದಿತ್ಯ ಬಿರ್ಲಾ ಸಂಸ್ಥೆ ಪೇಟಿಎಂ ಸಾಲದ ಪಾರ್ಟ್ನರ್. ಅಂದರೆ ಪೇಟಿಎಂ ಮುಖಾಂತರ ಸಾಲ ಪಡೆಯುವ ಗ್ರಾಹಕರಿಗೆ ಆದಿತ್ಯ ಬಿರ್ಲಾ ಸಾಲ ಒದಗಿಸುತ್ತದೆ.

ಯಾವುದೇ ಸೆಕ್ಯೂರಿಟಿ ಇಲ್ಲದೇ ಸಾಲ ನೀಡಲಾಗುತ್ತಿತ್ತು. ಇದಕ್ಕೆ ಪೇಟಿಎಂ ಸಂಸ್ಥೆ ಲೋನ್ ಗ್ಯಾರಂಟಿ ಕೊಟ್ಟಿತ್ತು. ನೂರಾರು ಕೋಟಿ ರೂ ಮೌಲ್ಯದ ಈ ಗ್ಯಾರಂಟಿಗಳನ್ನು ಬಳಕೆ ಮಾಡಲಾಗಿರುವುದರಿಂದ ಪೇಟಿಎಂನ ಹಣಕಾಸು ಸ್ಥಿತಿಗೆ ಹಿನ್ನಡೆ ತರುವ ನಿರೀಕ್ಷೆ ಇದೆ.

ಹಾಗೆಯೇ, ಪಿರಾಮಲ್ ಫೈನಾನ್ಸ್ ಮತ್ತು ಕ್ಲಿಕ್ಸ್ ಕ್ಯಾಪಿಟಲ್ ಸಂಸ್ಥೆಗಳು ಪೇಟಿಎಂ ಜೊತೆ ಇದ್ದ ಸಹಭಾಗಿತ್ವವನ್ನು ರದ್ದು ಮಾಡಿವೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್​ಬಿಐ ನಿರ್ಬಂಧ ಹೇರಿದ್ದರ ಒಟ್ಟಾರೆ ಎಫೆಕ್ಟ್ ಇದು.

ಪೇಟಿಎಂ ಷೇರು ಬೆಲೆ ಕುಸಿತ ಇಷ್ಟಕ್ಕೇ ನಿಲ್ಲುವುದಿಲ್ಲ ಎನ್ನುವುದು ಮಾರುಕಟ್ಟೆ ವಿಶ್ಲೇಷಕರ ಅನಿಸಿಕೆ. 280 ರೂವರೆಗೂ ಕುಸಿಯಬಹುದು ಎಂದು ಇವರು ನಿರೀಕ್ಷಿಸುತ್ತಿದ್ದಾರೆ. 2021ರಲ್ಲಿ ಪೇಟಿಎಂ ಐಪಿಒ ಬಿಡುಗಡೆ ಆದಾಗ ಭರ್ಜರಿ ಬೇಡಿಕೆ ಹೊಂದಿತ್ತು. ಒಂದು ಷೇರುಬೆಲೆ ಬರೋಬ್ಬರಿ 2,150ರೂ ಇತ್ತು.

ಈಗ ಶೇ. 85.25ರಷ್ಟು ಕುಸಿತ ಕಂಡಿರುವುದು ನಿಜಕ್ಕೂ ಶೋಚನೀಯ ಪರಿಸ್ಥಿತಿ ಎನಿಸಿದೆ. ಪೇಟಿಎಂ ಲಾಭ ಗಳಿಸಲು ಪರದಾಡುತ್ತಿರುವುದು ಸೇರಿದಂತೆ ಹಲವು ಕಾರಣಗಳು ಈ ಪರಿ ಷೇರು ಕುಸಿತಕ್ಕೆ ಕಾರಣವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

";