This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Sports News

ಐಪಿಎಲ್​ನ ರಣರೋಚಕ ಹೋರಾಟಕ್ಕೆ ವೇದಿಕೆ ಸಿದ್ಧ: RCB ವಿರುದ್ಧ ಸೋತರೂ CSK ಪ್ಲೇಆಫ್ ಪ್ರವೇಶಿಸಬಹುದು​..

ಐಪಿಎಲ್​ನ ರಣರೋಚಕ ಹೋರಾಟಕ್ಕೆ ವೇದಿಕೆ ಸಿದ್ಧ: RCB ವಿರುದ್ಧ ಸೋತರೂ CSK ಪ್ಲೇಆಫ್ ಪ್ರವೇಶಿಸಬಹುದು​..

​ ಮೇ 18 ರಂದು ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಪ್ಲೇಆಫ್ ರೇಸ್​ನಲ್ಲಿ ಉಳಿಯಲಿದೆ.

ಒಂದು ವೇಳೆ ಈ ಮ್ಯಾಚ್​ನಲ್ಲಿ ಸಿಎಸ್​ಕೆ ತಂಡ ಸೋತರೂ ಪ್ಲೇಆಫ್​ಗೆ ಅರ್ಹತೆ ಪಡೆಯಬಹುದು. ಏಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಸ್ತುತ ನೆಟ್ ರನ್ ರೇಟ್ +0.528 ಇದೆ. ಮುಂದಿನ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ರೋಚಕ ಸೋಲನುಭವಿಸಿದರೆ ಸಿಎಸ್​ಕೆ ತಂಡದ ನೆಟ್ ರನ್ ರೇಟ್​ನಲ್ಲಿ ಅಂತಹ ಮಹತ್ವದ ಬದಲಾವಣೆ ಕಂಡು ಬರುವುದಿಲ್ಲ.

ಅದೇ ಆರ್​ಸಿಬಿ ತಂಡವು ಕನಿಷ್ಠ 18 ರನ್​ ಅಥವಾ ಇದಕ್ಕಿಂತ ಹೆಚ್ಚಿನ ರನ್​ಗಳ ಅಂತರದಿಂದ ಗೆದ್ದರೆ / ಇಲ್ಲ 11 ಬಾಲ್​ಗಳನ್ನು ಉಳಿಸಿ ಚೇಸ್ ಮಾಡಿದರೆ ಮಾತ್ರ ಸಿಎಸ್​ಕೆ ತಂಡದ ನೆಟ್ ರನ್ ರೇಟ್ ಅನ್ನು ಹಿಂದಿಕ್ಕಬಹುದಿದ್ದು, ಇಲ್ಲದಿದ್ದರೆ ಸೋತರೂ ಸಿಎಸ್​ಕೆ ಪಾಯಿಂಟ್ಸ್​ ಟೇಬಲ್​ನಲ್ಲಿ 4ನೇ ಸ್ಥಾನದಲ್ಲೇ ಉಳಿಯಲಿದೆ.

ಏಕೆಂದರೆ ಎಲ್​ಎಸ್​ಜಿ ತಂಡದ ಪ್ರಸ್ತುತ ನೆಟ್​ ರನ್​ ರೇಟ್ ಮೈನಸ್​ನಲ್ಲಿದ್ದು, ಎಲ್​ಎಸ್​ಜಿ 2 ಪಂದ್ಯಗಳಲ್ಲಿ ಒಂದರಲ್ಲಿ ಸೋತರೂ ಅದು ಸಿಎಸ್​ಕೆ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಇದರಿಂದ ಆರ್​ಸಿಬಿ ವಿರುದ್ಧ ಸೋತರೂ ಸಿಎಸ್​ಕೆ ತಂಡವು ಅಂಕ ಪಟ್ಟಿಯಲ್ಲಿ ಟಾಪ್-4 ನಲ್ಲೇ ಉಳಿಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೆಟ್ ರನ್ ರೇಟ್ ಕೂಡ -0.482 ರಲ್ಲಿದೆ. ಒಟ್ಟು 12 ಅಂಕಗಳನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂದಿನ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿದರೆ ಮಾತ್ರ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಬಹುದು.

ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ಮುಂದಿನ 2 ಮ್ಯಾಚ್​ಗಳಲ್ಲಿ ಒಂದರಲ್ಲಿ ಸೋಲನುಭವಿಸಿದರೂ ಸಾಕು. ಚೆನ್ನೈ ಸೂಪರ್ ಕಿಂಗ್ಸ್​ 4ನೇ ಸ್ಥಾನದಲ್ಲೇ ಕಾಣಿಸಿಕೊಳ್ಳಲಿದೆ.