This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Sports News

ಭಾರತ- ಪಾಕಿಸ್ತಾನ ಎರಡು ತಂಡದಲ್ಲಿ ಕ್ರಿಕೆಟ್ ಆಡಿದ್ರು ಇವ್ರ…

ಭಾರತ- ಪಾಕಿಸ್ತಾನ ಎರಡು ತಂಡದಲ್ಲಿ ಕ್ರಿಕೆಟ್ ಆಡಿದ್ರು ಇವ್ರ…

ಭಾವನಾತ್ಮಕವಾಗಿ ಎರಡು ದೇಶಗಳ ನಡುವಿನ ಕ್ರಿಕೆಟ್‌ ಪಂದ್ಯಗಳಿಗೆ ಕ್ರೇಜ್ ಹೆಚ್ಚಿರುತ್ತದೆ. ಪಂದ್ಯದ ಟಿಕೆಟ್‌ಗಳ ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್‌ ಆಗುತ್ತವೆ, ಎಲ್ಲೇ ಪಂದ್ಯ ನಡೆದರೂ ಜಗತ್ತಿನ ಮೂಲೆ ಮೂಲೆಗಳಿಂದ ಫ್ಯಾನ್ಸ್ ಪಂದ್ಯ ವೀಕ್ಷಣೆಗಾಗಿ ಮೈದಾನಕ್ಕೆ ಬರುತ್ತಾರೆ. ಟಿವಿಗಳ ಟಿಆರ್‌ಪಿ ಹೆಚ್ಚಾಗುತ್ತದೆ. ಡಿಜಿಟಲ್ ಸ್ಟ್ರೀಮಿಂಗ್ ಆದರೆ ದಾಖಲೆಯ ವೀಕ್ಷಣೆ ಪಡೆಯುತ್ತದೆ. ಹೀಗೆ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಹತ್ತಾರು ದಾಖಲೆಗಳಾಗುತ್ತವೆ.

ರಾಜಕೀಯ, ಸಾಂಸ್ಕೃತಿಕ ಹಾಗೂ ಐತಿಹಾಸಿಕವಾಗಿ ಇಂಡೋ-ಪಾಕ್ ಪಂದ್ಯಗಳೊಂದಿಗೆ ಜನರು ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ತಂಡ ಗೆದ್ದರೆ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಸೋತ ತಂಡದ ಪರ ತಮ್ಮದೇ ರೀತಿಯಲ್ಲಿ ಆಕ್ರೋಶ ಹೊರಹಾಕುವುದನ್ನು ನೋಡಿದ್ದೇವೆ.

ಆದರೆ ಕುತೂಹಲಕಾರಿ ಸಂಗತಿಯೆಂದರೆ ಪಾಕಿಸ್ತಾನದ ಮೂವರು ಆಟಗಾರರು ಭಾರತ ತಂಡದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಇದು ಅಚ್ಚರಿ ಎನಿಸಿದರೂ ಸತ್ಯ. ಇದರಲ್ಲಿ ಅಬ್ದುಲ್ ಹಫೀಜ್ ಕರ್ದಾರ್ ಮೊದಲ ವ್ಯಕ್ತಿ. ಇವರು 1947ರಲ್ಲಿ ಉಭಯ ದೇಶಗಳು ವಿಭಜನೆ ಆಗುವುದಕ್ಕೂ ಮುನ್ನ ಭಾರತದ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಭಾರತದಿಂದ ಪಾಕಿಸ್ತಾನ ವಿಭಜನೆಯಾದ ಬಳಿಕ ಅವರು ಪಾಕಿಸ್ತಾನಕ್ಕೆ ಹೋಗಲು ನಿರ್ಧರಿಸಿದರು.

ಅಬ್ದುಲ್ ಹಫೀಜ್ ಕರ್ದಾರ್ ಇವರು ಕೂಡ ಭಾರತ ಪರ ಮೂರು ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಪಾಕಿಸ್ತಾನಕ್ಕೆ ಹೋದ ಬಳಿಕ ಅಲ್ಲಿ 26 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇವರು ಪಾಕ್ ಕ್ರಿಕೆಟ್‌ ತಂಡದ ಮೊದಲ ನಾಯಕರು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಅಲ್ಲಿ ಇವರನ್ನು ಪಾಕಿಸ್ತಾನ ಕ್ರಿಕೆಟ್ ಪಿತಾಮಹ ಅಂತಲೂ ಕರೆಯುತ್ತಾರೆ.

ಎರಡನೇ ವ್ಯಕ್ತಿ ಗುಲ್ ಮೊಹಮ್ಮದ್. ಇವರು ಕೂಡ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳನ್ನು ಪ್ರತಿಸಿದ್ದಾರೆ. ಟೀಂ ಇಂಡಿಯಾ ಪರ ಗುಲ್ ಮೊಹಮ್ಮದ್ 8 ಪಂದ್ಯಗಳನ್ನು ಆಡಿದ್ದಾರೆ. 1952ರಲ್ಲಿ ಪಾಕಿಸ್ತಾನಕ್ಕೆ ಹೋದರು. ಆದರೆ ಅಲ್ಲಿ ಹೆಚ್ಚು ಕಾಲ ಪಾಕಿಸ್ತಾನದ ತಂಡದಲ್ಲಿ ಇರಲಿಲ್ಲ. ಫಾರ್ಮ್ ಕಳೆದುಕೊಂಡ ಕಾರಣ ಅವರನ್ನು ತಂಡದಿಂದ ಕೈ ಬಿಡಲಾಯಿತು. ಪಾಕ್ ಪರ ಅವರು ಒಂದೇ ಒಂದು ಟೆಸ್ಟ್ ಪಂದ್ಯವನ್ನು ಮಾತ್ರ ಆಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಪರವಾಗಿ ಆಡುವ ಅವಕಾಶ ಪಡೆದ ಮೂರನೇ ಆಟಗಾರ ಅಮೀರ್ ಇಲಾಹಿ. ಇವರು ಭಾರತ-ಪಾಕಿಸ್ತಾನ ವಿಭಜನೆಯಾಗುವುದಕ್ಕೂ ಮೊದಲು, ಟೀಂ ಇಂಡಿಯಾದಲ್ಲಿ ಅವಕಾಶ ಪಡೆದಿದ್ದರು. ಅಲ್ಲದೆ, ಭಾರತದ ಪರವಾಗಿ ಒಂದ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ನಂತರ ಇವರು ಕೂಡ ಪಾಕಿಸ್ತಾನಕ್ಕೆ ಹೋದರು. ಅಲ್ಲಿ 5 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಮೂವರು ಆಟಗಾರರು ಕ್ರಿಕೆಟ್‌ ಜಗತ್ತಿನಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ. ಇಂಡೋ-ಪಾಕ್ ಪರ ಆಡಿದ ಆಟಗಾರರಾಗಿ ಇತಿಹಾಸದ ಪುಟದಲ್ಲಿ ದಾಖಲಾಗಿದ್ದಾರೆ.

ಏಷ್ಯಾ ಕಪ್ ಹಾಗೂ ಐಸಿಸಿ ವಿಶ್ವಕಪ್ 2023ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಹೈವೋಲ್ಟೇಜ್‌ ಪಂದ್ಯಗಳನ್ನು ವೀಕ್ಷಿಸಿಲು ಕೋಟಿ ಕೋಟಿ ಅಭಿಮಾನಿಗಳು ಕುತೂಹಲದಿಂದ ಕಾದು ಕುಳಿತಿದ್ದಾರೆ. ಏಷ್ಯಾ ಕಪ್ ಟೂರ್ನಿಯ ಗುಂಪು ಹಂತದಲ್ಲಿ ಸೆಪ್ಟೆಂಬರ್ 2 ರಂದು ಇಂಡೋ-ಪಾಕ್ ಪಂದ್ಯ ನಡೆಯಲಿದೆ. ಅದೇ ರೀತಿಯಾಗಿ ಐಸಿಸಿ ವಿಶ್ವಕಪ್‌ನಲ್ಲಿ ಅಕ್ಟೋಬರ್ 15 ರಂದು ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿದೆ