This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Sports News

IPL 2024: ಕೈ ಕೊಡುವ ಭಯದಲ್ಲೇ ಸ್ಟಾರ್ ಆಟಗಾರನ ಕೈ ಬಿಟ್ಟ RCB

IPL 2024: ಕೈ ಕೊಡುವ ಭಯದಲ್ಲೇ ಸ್ಟಾರ್ ಆಟಗಾರನ ಕೈ ಬಿಟ್ಟ RCB

IPL 2024 Auction: IPL 2024 Auction: ಐಪಿಎಲ್ 17ನೇ ಆವೃತ್ತಿಯ ಹರಾಜಿಗಾಗಿ ಒಟ್ಟು 1166 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಆಟಗಾರರ ಪಟ್ಟಿಯನ್ನು ಶಾರ್ಟ್ ಲೀಸ್ಟ್ ಮಾಡಲಿದ್ದು, ಇದಾದ ಬಳಿಕ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಅದರಂತೆ ಫೈನಲ್ ಪಟ್ಟಿಯಲ್ಲಿ ಸ್ಥಾನ ಪಡೆದ ಆಟಗಾರರು ಮಾತ್ರ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

ಐಪಿಎಲ್​ ಸೀಸನ್ 17 ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಒಟ್ಟು 11 ಆಟಗಾರರನ್ನು ತಂಡದಿಂದ ಕೈ ಬಿಟ್ಟಿದ್ದರು. ಈ ಹನ್ನೊಂದು ಆಟಗಾರರಲ್ಲಿ ಆಸ್ಟ್ರೇಲಿಯಾದ ಪ್ರಮುಖ ವೇಗಿ ಜೋಶ್ ಹ್ಯಾಝಲ್​​ವುಡ್ ಕೂಡ ಇದ್ದದ್ದು ಅಚ್ಚರಿಗೆ ಕಾರಣವಾಗಿತ್ತು. ಆದರೀಗ ಜೋಶ್ ಹ್ಯಾಝಲ್​ವುಡ್​ ಅವರನ್ನು ಕೈ ಬಿಡಲು ಮುಖ್ಯ ಕಾರಣ ಏನೆಂಬುದು ಬಹಿರಂಗವಾಗಿದೆ.

ಜೋಶ್ ಹ್ಯಾಝಲ್​ವುಡ್ ಈ ಬಾರಿಯ ಐಪಿಎಲ್​ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ಅನುಮಾನ. ಇದೇ ಕಾರಣದಿಂದಾಗಿ ಆರ್​ಸಿಬಿ ಆಸ್ಟ್ರೇಲಿಯಾ ವೇಗಿಯನ್ನು ಕೈ ಬಿಡಲು ನಿರ್ಧರಿಸಿದೆ.

 

ಇದಕ್ಕೆ ಮುಖ್ಯ ಕಾರಣ, ಜೋಶ್ ಹ್ಯಾಝಲ್​ವುಡ್ ತಂದೆಯಾಗುತ್ತಿರುವುದು. ಅಂದರೆ ಮಾರ್ಚ್​ನಲ್ಲಿ ಹ್ಯಾಝಲ್​ವುಡ್ ದಂಪತಿಗಳು ಮೊದಲ ಮಗುವಿನ ಜನನದ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಮಾರ್ಚ್​​ ವೇಳೆ ಆಸ್ಟ್ರೇಲಿಯಾ ವೇಗಿ ಐಪಿಎಲ್​ನಲ್ಲಿ ಭಾಗವಹಿಸುವುದು ಅನುಮಾನ.

 

ಇದೇ ಕಾರಣದಿಂದಾಗಿ ಆರ್​ಸಿಬಿ ಜೋಶ್ ಹ್ಯಾಝಲ್​ವುಡ್ ಅವರನ್ನು ಕೈ ಬಿಡುವ ನಿರ್ಧಾರ ತೆಗೆದುಕೊಂಡಿದೆ. ಏಕೆಂದರೆ ಕಳೆದ ಸೀಸನ್​ನಲ್ಲಿ ಆರ್​ಸಿಬಿ ತಂಡದಲ್ಲಿದ್ದ ಹ್ಯಾಝಲ್​ವುಡ್ ಗಾಯದ ಕಾರಣ ಬಹುತೇಕ ಪಂದ್ಯಗಳಿಂದ ಹೊರಗುಳಿದಿದ್ದರು. ಅಲ್ಲದೆ ಇಡೀ ಸೀಸನ್​ನಲ್ಲಿ ಆಡಿದ್ದು ಕೇವಲ 3 ಮ್ಯಾಚ್​ಗಳನ್ನು ಮಾತ್ರ.

ಈ ಬಾರಿ ಕೂಡ ಐಪಿಎಲ್​ನ ಮೊದಲಾರ್ಧದ ವೇಳೆ ಅವರು ತಂಡದಲ್ಲಿರುವುದು ಅನುಮಾನ. ಹೀಗಾಗಿ ಆರ್​ಸಿಬಿ ಮ್ಯಾನೇಜ್ಮೆಂಟ್​ ಜೋಶ್ ಹ್ಯಾಝಲ್​ವುಡ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಹಿಂದೇಟು ಹಾಕಿದೆ ಎಂದು ವರದಿಯಾಗಿದೆ

ಆರ್​ಸಿಬಿ ತಂಡದಿಂದ ಕೈ ಬಿಟ್ಟ ಆಟಗಾರರು: ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್‌ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್, ಕೇದಾರ್ ಜಾಧವ್.

ಉಳಿಸಿಕೊಂಡಿರುವ ಆಟಗಾರರ ಪಟ್ಟಿ: ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್ (ಟ್ರೇಡ್), ಮಯಾಂಕ್ ಡಗಾರ್ (ಟ್ರೇಡ್).

Nimma Suddi
";