ಸಮಾಜದಲ್ಲಿ ಹಣವಿದ್ದರೆ ಸಾಕು ಮಹತ್ವವು ಮೇಲೇರಿ ಕುಳಿತುಕೊಳ್ಳುತ್ತದೆ. ಪ್ರೀತಿ,ವಿಶ್ವಾಸ ಮರೆಯಾಗಿ, ಕರುಣೆ ನಾಶವಾಗಿದೆ.
ಇಂದಿನ ದಿನ ನಾವುಗಳು ಉನ್ನತ ವ್ಯಾಸಂಗ, ಅಧಿಕಾರ ಪಡೆದುಕೊಂಡರು ದುಡ್ಡಿನ ಮುಂದೆ ನಾವೆಲ್ಲ ದಡ್ಡರಾಗಿಬಿಟ್ಟಿದ್ದೇವೆ. ಶಿಕ್ಷಣಕ್ಕೆ,ಆರೋಗ್ಯಕ್ಕೆ,ಕೊನೆಯಲ್ಲಿ ಪ್ರೀತಿ,ವಿಶ್ವಾಸ ಹಂಚಿಕೊಳ್ಳುವುದಕ್ಕೂ ಹಣದ ಅವಶ್ಯಕತೆ ಅನಿವಾರ್ಯವಾಗಿದೆ.
ಪ್ರಸ್ತುತ ದಿನದಲ್ಲಿ ದುಡಿಯುವುದಕ್ಕೆ, ಓದುವ ಕಾರಣಕ್ಕಾಗಿ, ಊರು ಬಿಟ್ಟು ಬೆಂಗಳೂರಿಗೆ ಬರುತ್ತೇವೆ. ಆರಂಭದಲ್ಲಿ ಇಲ್ಲಿಯೇ ಉಳಿದುಕೊಳ್ಳುವುದಕ್ಕೆ ನಮಗಿರುವ ಆಶ್ರಯ ಪಿಜಿಗಳು ಮಾತ್ರ, ಬೇರೆ ಊರುಗಳಲ್ಲಿ ಪಿಜಿ ತಕ್ಕ ಮಟ್ಟಿಗೆ ಉತ್ತಮವಾಗಿದ್ದರೂ ಬೆಂಗಳೂರಿನಲ್ಲಿ ಕೆಲವು ಪಿಜಿಗಳು ಉತ್ತಮವಾಗಿದ್ದರೆ, ಇನ್ನು ಹಲವು ಪಿಜಿಗಳ ಬಗ್ಗೆ ಹೇಳಬೇಕೆಂದರೆ, ಹಣದ ಅಟ್ಟಹಾಸ ಅತಿಯಾಗಿರುತ್ತದೆ.
6000,7000 ಸಾವಿರ ರೂ. ಕೊಟ್ಟರೂ ಉತ್ತಮವಾದ ಉಪಹಾರದ ವ್ಯವಸ್ಥೆ ಇರುವುದಿಲ್ಲ, ಒಂದೊಮ್ಮೆ ಹೊಟ್ಟೆ ತುಂಬಾ ಊಟ ನೀಡುವುದಿಲ್ಲ, ನಿನ್ನ ತಟ್ಟೆಯಲ್ಲಿರುವ ಊಟವನ್ನು ಅಪ್ಪಿ ತಪ್ಪಿ ಕೈ ಜಾರಿ ಕೆಳಗೆ ಚೆಲ್ಲಿದರೇ ಸಾಕು ಮತ್ತೆ ಊಟ ಸೀಗುವುದಿಲ್ಲ, ಮತ್ತೇ ಊಟ ಕೇಳಿದರೆ ಬೆಂಗಳೂರಲ್ಲಿ ಇವೇಲ್ಲಾ ಸಹಜ ಎಂಬ ಪೊಳ್ಳು ಹೇಳಿಕೆಗಳು.
ಬೆಂಗಳೂರು ಸದ್ದಿಲ್ಲದೆ ಅಮೇರಿಕಾ ಯಾವಾಗ ಆಯಿತು ಎನ್ನುವುದು ಅರಿವಿಗೆ ಬಂದಿಲ್ಲ, ಪಿಜಿಯಲ್ಲಿ ನಾನಾ ತರಹದ ಹುಡುಗೀಯರು, ಹಳ್ಳಿಯಿಂದಲೇ ಬಂದು ಹಳ್ಳ ಹಿಡಿದಿರುವ ಹುಡುಗ,ಹುಡುಗಿಯರು ಎಷ್ಟೋ, ಸಾಧನೆಯ ಶಿಖರ ಏರುತ್ತಿರುವ ಯುವಕ,ಯುವತಿಯರು ಎಷ್ಟೋ, ಇಲ್ಲಿಯೇ ಇದ್ದು ಅರಿತವರಿಗೆ ಗೊತ್ತು.
ಪಿಜಿಗಳಲ್ಲಿ ಕರುಣೆ ಇಲ್ಲದ ಕ್ರೂರಿಗಳು ಅತಿಯಾಗಿ ಬಿಟ್ಟಿದ್ದಾರೆ ಎಂತಲೂ ಹೇಳಬಹುವುದು, ಅಮಾಯಕರಿಗೆ ಅವಿವೇಕಿಗಳ ಕಿರಿಕಿರಿ ಇರುತ್ತದೆ. ಕೆಲವೊಮ್ಮೆ ಹಳಸಿದ ಅನ್ನ, ಎರಡು ದಿನ ಪ್ರಿಜ್ ಅಲ್ಲಿರುವ ಸಂಬಾರ ತಿನ್ನುವುದಕ್ಕೂ ಒಂದು ರೀತಿಯ ಮಜಾನೆ ಎಂದು ಎನಿಸುತ್ತದೆ. ಕೊನೆಯಲ್ಲಿ ಇದೆಲ್ಲಾ ಬೇಡ ಊರಿನತ್ತ ಸಾಗಿ ಬಿಡೋಣ ಎಂದರೆ, ಸಾಕಷ್ಟು ಇಲ್ಲ ಸಲ್ಲದ ಪ್ರಶ್ನೇಗಳು, ಸಾಧಿಸಲು ಸಿದ್ಧರಾದವರಿಗೆ,ಸಾವು ಸಹ ಲೆಕ್ಕಕ್ಕೆ ಬರಬಾರದು ಎನ್ನುವ ಬಲವಾದ ನಂಬಿಕೆ.
ಬೆಂಗಳೂರಿನಲ್ಲಿ ಕೆಲವೊಂದು ಕಡೆ ಒಳ್ಳೆಯ, ಅಪರೂಪದ ವ್ಯಕ್ತಿಗಳನ್ನು ಸಹ ಕಾಣಬಹುದು. ಊಟದ ಸಮಸ್ಯೆ, ಬಿಟ್ಟರೇ ಬೆಳವಣಿಗೆಗೆ ಬೆಂಗಳೂರು ಒಂದು ಉತ್ತಮ ವೇದಿಕೆಯಾಗಿದೆ. ಬುದ್ದಿವಂತರು ಸಹ ಹೆಚ್ಚಾಗಿದ್ದಾರೆ. ಆದರೆ ಬೆಸರ ಸಂಗತಿ ಎಂದರೆ, ಅದು ಎಷ್ಟೋ ಸಾಧಕರು ಸಹ ಜೋಮೆಟೋ,ಸುಗ್ಗಿಯಿಂದ ಊಟ ತರಿಸಿ ತಿನ್ನುವದನ್ನು ನೋಡಿದರೆ ಅಯ್ಯೋ ಎಂದು ಎನಿಸುತ್ತದೆ. ಉತ್ತಮ ಬದುಕಿಗಾಗಿ ಬಡಿದಾಟ, ಹಣ ಇದ್ದರೂ ನೆಮ್ಮದಿ ಇಲ್ಲದ ಬಡವರು, ಬಿಜಿ ಬದಕು ಬೆಂಗಳೂರು ಎನಿಸುತ್ತದೆ. ಆದರೂ ಹುಟ್ಟೂರು ಬಿಟ್ಟು ಬೆಂಗಳೂರ ಅಲ್ಲಿರುವ ಪ್ರತಿಭೆಗಳಿಗೆ ಬೆನ್ನು ತಟ್ಟಲೇಬೇಕು…
ಶಶಿ.ಎನ್.ಟಿ