This is the title of the web page
This is the title of the web page

Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Feature Article

ಪ್ರತಿನಿತ್ಯ ಕನಸಿನಲ್ಲಿ ಕಾಡುವ ಮೊದಲು, ಮನಸ್ಸನ್ನೇ ಸ್ವಂತ ಮನೆ ಮಾಡಿಕೊಳ್ಳುವುದು ಯಾವಾಗ?

ಪ್ರತಿನಿತ್ಯ ಕನಸಿನಲ್ಲಿ ಕಾಡುವ ಮೊದಲು, ಮನಸ್ಸನ್ನೇ ಸ್ವಂತ ಮನೆ ಮಾಡಿಕೊಳ್ಳುವುದು ಯಾವಾಗ?

ಪೇಮವೆಂದರೆ ಕೈ ಕೈ ಹಿಡಿದುಕೊಂಡು ಓಡಾಡುವುದಲ್ಲ, ಸಿಕ್ಕರೆ ಸಾಕು ಮುದ್ದಾಡುವುದು ಅಲ್ಲ, ಮೋಹವಲ್ಲ,ಕಾಮವು ಅಲ್ಲ, ಅದು ಒಂದು ಆರಂಭದಲ್ಲಿ ಮೌನದ ಸಮ್ಮೀಲನವಾಗಿದೆ.

ಮೊದ ಮೊದಲು ನೋಟ, ಆಮೇಲೆ ಸ್ನೇಹ, ನಂತರ ಪ್ರೀತಿ. ಹೀಗಿರುವಾಗ ಕೆಲವೊಮ್ಮೆ ಪ್ರೀತಿ ಹುಟ್ಟಿದರೂ ಹಂಚಿಕೊಳ್ಳುವುದಕ್ಕೆ ಸನ್ನಿವೇಶ ಸಂದರ್ಭಗಳು ಸರಿ ಇರುವುದಿಲ್ಲ.

ಇವತ್ತಿನ ದಿನ ದೈಹಿಕ ಸಂಪರ್ಕಕ್ಕಾಗಿ ಪ್ರೀತಿ ಎನ್ನುವ ಹೆಸರಿನಲ್ಲಿ ಮೋಜು, ಮಸ್ತಿ ನಡೆಸುವ ಕೆಲವು ಯುವಕ ಯುವಕಿಯರ ನಡುವೆ, ವಯಕ್ತಿಕ ಜೀವನಕ್ಕಾಗಿ, ಮನೆಯ ಜವಬ್ದಾರಿಗಾಗಿ ತಮ್ಮ ಆಸೆಗಳನ್ನು ಬದಿಗಿಟ್ಟು ಬದುಕುತ್ತಿರುವ ಯುವಕರು ಸಹ ಸಾಕಷ್ಟು ಇದ್ದಾರೆ ನಮ್ಮ ಸಮಾಜದಲ್ಲಿ..
ಇಂತಹ ಒಂದು ಸ್ಥಿತಿಯಲ್ಲಿ ಪ್ರೇಮವಾದಗ ಅವರ ಒದ್ದಾಟ ಹೇಗೆ ಇರುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ಕಂಡುಕೊAಡಿರುತ್ತಾರೆ.

ಕಾಯುವುದು, ಕಾಡುವುದು, ಕೊನೆಯಲ್ಲಿ ಜಗಳ ಮಾಡುವುದು ಪ್ರೇಮವೇ ಅಲ್ಲವೇ? ಮನಸ್ಸು ಬಿಚ್ಚಿ ಮಾತಾಡುವುದಕ್ಕು ಭಯ, ಬಾಯಿ ಬಿಟ್ಟು ಬಯಕೆಯನ್ನು ಹೇಳಿಕೊಂಡರೇ ಎಲ್ಲಿ ನಮ್ಮನ್ನು ಬಿಟ್ಟು ಹೋಗಿಬಿಡುತ್ತಾರೋ ಎನ್ನುವ ಆತಂಕ.

ತಿಂಗಳು ವರ್ಷ ಕಣ್ಣಿನಲ್ಲಿಯೇ ಮಾತಿನ ವ್ಯವಾಹರ ಎರಡು ಜೀವಗಳ ಮಿಲನಕ್ಕೆ ಆರಂಭದಲ್ಲಿ ಕಾಯುವ ಆತಂಕ ಪ್ರತಿಯೊಬ್ಬ ಯೌವನದಲ್ಲಿರುವ ಯುವಕರಿಗೆ ಸಹಜ, ಕೆಲವೊಂದು ವಾತವರಣದಲ್ಲಿ ಪ್ರೀತಿ,ಪ್ರೇಮವೇಂದರೆ ಅಪರಾಧ ಎನ್ನುವ ಭಾವನೆ.

ದೆಹವನ್ನು ಎಷ್ಟೇ ನಿಯಂತ್ರಣದಲ್ಲಿ ಇಟ್ಟುಕೊಂಡರು, ಮನಸ್ಸನ್ನು ಮಾತ್ರ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ. ಹೀಗೆಯೇ ಯುವಕನೋರ್ವನಿಗೆ ಯುವಕಿ ಮೇಲೆ ಪ್ರೇಮವಾಗುತ್ತದೆ. ಮಾತಾಡುತ್ತಾರೆ ಆದರೆ ಪ್ರೀತಿಯನ್ನು ಇಬ್ಬರು ಹೇಳಿಕೊಳ್ಳುವುದಿಲ್ಲ. ಪ್ರತಿ ದಿನ ಮಾತನಾಡುವಾಗ ಎನೋ ಆನಂದ, ಉಲ್ಲಾಸ ರಾತ್ರಿಯಾದರೆ ಸಾಕು ಕನಸಿನಲ್ಲಿಯೇ ಸಂಸಾರ ಆದರೆ, ಈ ಎಲ್ಲ ಭಾವನೆ ಇಬ್ಬರಿಗೂ ಮೂಡಿ ಬಂದರೂ ಒಬ್ಬರಿಗೆ ಒಬ್ಬರೂ ಹೇಳಿಕೊಳ್ಳುವುದಿಲ್ಲ. ಕೆಲವೊಮ್ಮೆ ಅವರ ಮೇಲೆ ಅವರಿಗೆ ಬೇಜಾರ, ಬದುಕಿಗೆ ಅರ್ಥವೇನು ಎನ್ನುವ ಪ್ರಶ್ನೇ ಹಾಕಿಕೊಳ್ಳುತ್ತಾರೆ.

ಇದರ ನಡುವೆ ಕೆಲವೊಮ್ಮೆ ನೋವುಗಳ ನಡುವೆ ನಗುವುದನ್ನು ಪ್ರೀತಿ ಕಲಿಸುತ್ತದೆ. ಕಷ್ಟನೋ ಸುಖಃನೋ ನಿಮ್ಮ ಪ್ರೇಮವನ್ನು ಹಂಚಿಕೊAಡು ಬಿಡಿ. ಆದರೆ ಅನವಶ್ಯಕವಾಗಿ ಒಬ್ಬರನ್ನು ಕಳೆದುಕೊಂಡು ಮುಂದೊAದು ದಿನ ಗೋಳೊ ಎಂದು ಅಳುವ ಬದಲು ಇಂದೇ ನಿಮ್ಮ ಪ್ರೀತಿಯನ್ನು ಹೇಳಿಕೊಂಡರೆ ನಿಮ್ಮ ಮನಸ್ಸಿಗೂ ಒಂದು ನೆಮ್ಮದಿ.

ನಾವು ಪ್ರತಿಯೊಂದು ವಿಷಯದಲ್ಲಿ ಮನೆಯವರಿಗಾಗಿ,ಪರಿಸ್ಥಿಗಾಗಿ,ಸ್ನೇಹಕ್ಕಾಗಿ, ಹಲವಾರು ಕಾರಣಗಳಿಗಾಗಿ ನಮಗೆ ಇಷ್ಟವಾಗಿರುವ ವಿಷಯಗಳನ್ನು,ವ್ಯಕ್ತಿಗಳನ್ನು ತ್ಯಾಗ ಮಾಡುತ್ತಾ ಹೋದರೆ ಮುಂದೊAದು ದಿನ ಎಲ್ಲರೂ ನಮ್ಮನ್ನೇ ಬಿಟ್ಟು ಹೋಗುತ್ತಾರೆ.ಆಗ ನಾವು ಏಕಾಂಗಿಯಾಗಿ ಉಳಿಯುತ್ತೇವೆ, ಈ ಸಂದರ್ಭದಲ್ಲಿ ಮನಸ್ಸಿಗೆ ಹತ್ತಿರವಾದವರನ್ನು ನೆನಸಿ ನೆನಸಿ ಅಳುತ್ತೇವೆ ಅಲ್ಲವೇ…

ಅದಕ್ಕೆ ಮುಗಿದು ಹೋಗುವ ಈ ಸುಂದರ ಜೀವನದಲ್ಲಿ ನಿಮ್ಮನ್ನು ಯಾರು ಇಷ್ಟ ಪಡುತ್ತಾರೋ ಅವರೊಂದಿಗೆ ನೆಮ್ಮದಿಯಿಂದ ಬದುಕಿ..ಯಾರ ಮನಸ್ಸಿಗು ಗಾಯ ಮಾಡದೇ ಪ್ರೀತಿಯಿಂದ ಬದುಕುವುದನ್ನು ರೂಡಿ ಮಾಡಿಕೊಳ್ಳಬೇಕು. ಸಾಧ್ಯವಾದಷ್ಟು ನಿಮ್ಮ ಪ್ರೀತಿಯ ಮನದಲ್ಲಿ ನೆಲಸಿ…

ಶಶಿ.ಎನ್.ಟಿ

Nimma Suddi
";