ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳ (Raghavendra Swamy) ಮಠದಲ್ಲಿ ಪೀಠಾಧಿಪತಿ ಶ್ರೀ ಸುಬುಧೇoದ್ರ ತೀರ್ಥ ಸ್ವಾಮೀಜಿಗೆ ಆಫ್ರಿಕಾದ ಮೈಲ್ಸ್ ಲೀಡರ್ ಶಿಪ್ ವಿಶ್ವವಿದ್ಯಾಲಯದ (VV) ಗೌರವ ಡಾಕ್ಟರೇಟ್ (Honorary Doctorate) ಪ್ರದಾನವನ್ನು ಮಾಡಿದೆ. ವಿವಿಯ ಕುಲಪತಿ ಡಾ. ಕೆ ರವಿ ಆಚಾರ್ಯ ಹಾಗೂ ಡಿನ್ ಡಾ.ಕೆ.ಟಿ ರಾಜೇಂದ್ರ ಕುಮಾರ ಅವರು ಪ್ರದಾನ ಮಾಡಿ ಗೌರವಿಸಿದರು. ಮಂತ್ರಾಲಯದ ಶ್ರೀ ಯೋಗೀoದ್ರ ಸಭಾ ಮಂಟಪದಲ್ಲಿ ಕಾರ್ಯಕ್ರಮ ನಡೆದಿದೆ.
ಮೂರನೇ ಗೌರವ ಡಾಕ್ಟರೇಟ್ ಪದವಿ
ಶ್ರೀ ಪಾದಂಗಳವರಿಗೆ ನೀಡಿರುವುದು ಮೂರನೇ ಗೌರವ ಡಾಕ್ಟರೇಟ್ ಪದವಿಯಾಗಿದೆ. ಮೊದಲನೇ ಬಾರಿಗೆ 2020ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ, ಎರಡನೇ ಬಾರಿ ಗೌರವ 2022ರಲ್ಲಿ ಫ್ಲೋರಿಡಾದ ಯೋಗ ಸಂಸ್ಕøತ ವಿಶ್ವವಿದ್ಯಾಲಯದಿಂದ ನೀಡಲಾಗಿತ್ತು.
ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ, ಪಂಡಿತ ಕೇಸರಿ, ಮಹಾ ಮಹೋಪಾಧ್ಯಯ ಡಾ.ರಾಜಾ ಎಸ್. ಗಿರಿ ಆಚಾರ್ಯ, ಕರ್ನಾಟಕದ ಹೈಕೋರ್ಟ್ ನ ನಿವೃತ್ತಿ ಮುಖ್ಯನ್ಯಾಯಮೂರ್ತಿ ಕೆ.ಶ್ರೀಧರರಾವ್,
ಎಸ್.ಜಿ.ಎಸ್ ವಿದ್ಯಾಪೀಠದ ಮಾಜಿ ಕುಲಪತಿ ಡಾ.ವಿ.ಆರ್. ಪಂಚಮುಖಿ, ಮಹಾ ಮಹೋಪಾಧ್ಯಾಯ ಡಾ.ಹರಿದಾಸ ಬೃಹತ್, ಹಾಸನ ವಿವಿಯ ಕುಲಪತಿ ಪ್ರೊ.ಟಿ. ಸಿ. ತಾರಾನಾಥ್. ಮೈಲ್ಸ್ ಲೀಡರಶಿಪ್ ವಿಶ್ವವಿದ್ಯಾಲಯದ ಅಧಿಕಾರಿಗಳು, ಮಠದ ಅಧಿಕಾರಿಗಳು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.