ಬಸ್‌ಟ್ಯಾಂಡ್ ಹತ್ತಿರದ ‘ಮಿನಿ ಬೆಟ್ಟ’ದಂತೆ ಇರುವ ರೋಡ್ ಬ್ರೇಕ್ — ಜನರ ನರಳಾಟ
ವಿಜಯಪುರ ನಗರದ ಹೊಸ ಬಸ್‌ಟ್ಯಾಂಡ್ ಹಾಗೂ ಹಳೆ ಬಸ್‌ಟ್ಯಾಂಡ್ ಹತ್ತಿರ ನಿರ್ಮಿಸಿರುವ ರೋಡ್ ಬ್ರೇಕ್ ಜನರಿಗೆ ತೊಂದರೆಯ ಕಾರಣವಾಗಿದೆ. ವಾಹನಗಳ ವೇಗ ನಿಯಂತ್ರಣಕ್ಕಾಗಿ ರೋಡ್ ಬ್ರೇಕ್‌ಗಳು ಅಗತ್ಯವಾದರೂ, ಇಲ್ಲಿ ನಿರ್ಮಿಸಿರುವುದು ರೋಡ್ ಬ್ರೇಕ್ ಅತಿಯಾಗಿ ಎತ್ತರವಾಗಿದ್ದು, ಜನರಿಗೆ ಇದು “ರೋಡ್ ಬ್ರೇಕ್”ಗಿಂತಲೂ “ಮಿನಿ ಬೆಟ್ಟ”ದಂತೆ ಕಾಣಿಸುತ್ತಿದೆ.
ನಗರ ಸಾರಿಗೆ ಬಸ್‌ಗಳು, ಖಾಸಗಿ ಬಸ್‌ಗಳು ಹಾಗೂ ಇತರೆ ದೊಡ್ಡ ವಾಹನಗಳು ಈ ಭಾಗದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದು.
ರಸ್ತೆ ನಿರ್ಮಾಣ ಇಲಾಖೆ ಹಾಗೂ ನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಈ ಅತೀ ಎತ್ತರದ ರೋಡ್ ಬ್ರೇಕ್‌ನ್ನು ನಿಯಮಾನುಸಾರ ತಿದ್ದುಪಡಿ ಮಾಡಬೇಕಾಗಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಅನುಕೂಲಕ್ಕಾಗಿ ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ವಿನಂತಿ.
—by ವಾಚಕರ ವಾಣಿ, ಸಾರಿಕಾ ಪೂಜಾರಿ