LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಂತರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾದ ಮಂಗಳೂರು ಮಹಿಳೆ

ಮಂಗಳೂರು: ಅಂತರಾಷ್ಟ್ರೀಯ (International) ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ (Beauty Contest) ಮಂಗಳೂರಿನ (Mangaluru) ಉದ್ಯಮಿ ಮಹಿಳೆಯೊಬ್ಬರು ಫಿಲಿಪೈನ್ಸ್ ಗೆ (Philippines) ಹಾರುತ್ತಿದ್ದಾರೆ. ಡಿ.2 ರಿಂದ ಡಿ.10ರವರೆಗೆ ಫಿಲಿಪೈನ್ಸ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಇವರು ಭಾರತದಿಂದ ಆಯ್ಕೆಯಾದ ಏಕೈಕ ಸ್ಪರ್ಧಿ. ಇವರ ಹೆಸರು ವಿದ್ಯಾ ಸಂಪತ್ ಕರ್ಕೇರ. ಮುಂಬೈನಲ್ಲಿ ಹುಟ್ಟಿ ಬೆಳೆದಿದ್ದರೂ, ಸದ್ಯ ಮಂಗಳೂರು ವಾಸಿ. ಉದ್ಯಮಿಯಾಗಿರುವ ಇವರು ಫ್ಯಾಷನ್ ಲೋಕದತ್ತ ಆಕರ್ಷಿತರಾಗಿ ಅಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಸದ್ಯ ಪಾತ್ ವೇ ಮಾಡೆಲಿಂಗ್ ಸ್ಟುಡಿಯೋದ ದೀಪಕ್ ಗಂಗೂಲಿ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಮತ್ತು ಲೇಡಿಸ್ ಸಲೂನ್‍ನ ಮರ್ಸಿ ವೀಣಾ ಡಿ'ಸೋಜ ಅವರಿಂದ ತರಬೇತಿ ಪಡೆದಿದ್ದಾರೆ.
ಮಿಸೆಸ್ ಇಂಡಿಯಾ ಕ್ರೌನ್ ವಿಜೇತರು

ವಿದ್ಯಾ ಸಂಪತ್ ಕರ್ಕೇರ ಬೆಂಗಳೂರಿನಲ್ಲಿ ನಡೆದ ಮಿಸೆಸ್ ಇಂಡಿಯಾ ಕ್ರೌನ್ ವಿಜೇತರಾಗಿದ್ದು, ಇದೀಗ ಪಿಲಿಪೈನ್ಸ್‍ನಲ್ಲಿ ನಡೆಯುವ ಮಿಸೆಸ್ ಅರ್ಥ್ ಇಂಟರ್ ನ್ಯಾಷನಲ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಟ್ಯಾಲೆಂಟ್ ಸುತ್ತು, ನ್ಯಾಷನಲ್ ಕಾಸ್ಟ್ಯೂಮ್ ರೌಂಡ್ ಹೀಗೆ ಟಫ್ ಕಾಂಪಿಟಿಷನ್ ಇದೆ. ಇವರು ನ್ಯಾಷನಲ್ ಕಾಸ್ಟ್ಯೂಮ್‍ಗೆ ಇವರು ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ, ಪಕ್ಷಿ ನವಿಲು ಹಾಗೂ ತಾವರೆ ಹೂವಿನ ಸಂಕೇತವಿರುವ ವಸ್ತ್ರ ವಿನ್ಯಾಸ ಮಾಡಿಕೊಂಡಿದ್ದಾರಂತೆ.
ಕಸದಿಂದ ರಸ ಪರಿಕಲ್ಪನೆಯ ಬಟ್ಟೆ

ಜೊತೆಗೆ ಕಸದಿಂದ ರಸ ಪರಿಕಲ್ಪನೆಯಲ್ಲಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಈ ಕಾಸ್ಟ್ಯೂಮ್‍ಗೆ ಬಳಸಿ ಎಸೆದಿರುವ ಟಿನ್‍ಗಳಿಂದಲೇ ವಸ್ತ್ರವಿನ್ಯಾಸ ಮಾಡಿದ್ದಾರೆ. ಈ ಮೂಲಕ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಿರುವ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.
ಜೊತೆಗೆ ತುಳುನಾಡಿನ ಸಂಸ್ಕೃತಿಯ ಸಂಕೇತವುಳ್ಳ ಸ್ಟ್ಯಾಚುವನ್ನು ಬೇರೆ ಬೇರೆ ರಾಷ್ಟ್ರಗಳ 40ಮಂದಿ ಸ್ಪರ್ಧಿಗಳಿಗೆ ನೀಡಲು ಕೊಂಡೊಯ್ಯುತ್ತಿದ್ದಾರೆ. ಒಟ್ಟಿನಲ್ಲಿ ವಿದ್ಯಾ ಸಂಪತ್ ಅವರು ಭಾರತದ ಹೆಸರನ್ನು ವಿದೇಶ ನೆಲದಲ್ಲಿ ಎತ್ತಿ ಹಿಡಿದು ಕ್ರೌನ್ ವಿಜೇತರಾಗಲಿ ಎಂಬುದೇ ನಮ್ಮ ಆಶಯ.

Author
Nimma Suddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಸತಿ ನಿಲಯಗಳಿಗೆ ದೀಡಿರ್ ಬೇಟಿ ನೀಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಬೆಂಗಳೂರು-ಹಾಸನ-ಮಂಗಳೂರು ಜೋಡಿ ರೈಲು ಹಳಿ ನಿರ್ಮಾಣ; ಸಚಿವ ಎಂ.ಬಿ. ಪಾಟೀಲ ಚರ್ಚೆ!ಸಾರ್ವಜನಿಕ ಹಣದಲ್ಲಿ ಬಾಬರಿ ಮಸೀದಿ ನಿರ್ಮಿಸಲು ಬಯಸಿದ್ದ ನೆಹರೂ ಎಂದ ರಾಜನಾಥ ಸಿಂಗ್ಪುಟಿನ್ ಭೇಟಿ: ಭಾರತದ ಜೊತೆ ಅಣು ಸಹಕಾರ ಒಪ್ಪಂದಕ್ಕೆ ರಷ್ಯಾ ಸಂಪುಟ ಅಸ್ತುಕರ್ನಾಟಕದ ಸಹಕಾರ ಸಂಘಗಳ ಅಭಿವೃದ್ಧಿಗೆ ₹4,164 ಕೋಟಿ: ರಾಜ್ಯಸಭೆಗೆ ಅಮಿತ್ ಶಾ70ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದು ; ಬೆಂಗಳೂರು, ಮುಂಬೈ ಸೇರಿ ಅನೇಕ ಏರ್ಪೋರ್ಟ್'ನಲ್ಲಿ ಅವ್ಯವಸ್ಥೆದ. ಆಫ್ರಿಕಾ ವಿರುದ್ಧದ 5 ಪಂದ್ಯಗಳ T20I ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ |IND vs SAಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆಯಪ್‌ ಕಡ್ಡಾಯ ಆದೇಶ ಹಿಂಪಡೆದ ಕೇಂದ್ರ ಸರ್ಕಾರವಾಯುಭಾರ ಕುಸಿತ, ಮುಂದಿನ 24 ಗಂಟೆಗಳಲ್ಲಿ ಧಾರಾಕಾರ ಮಳೆ! ಈ ಭಾಗಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!ಸಿಬಿಐ ತನಿಖೆ ಆದೇಶ ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಸರ್ಕಾರ ಮನವಿ