This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Sports News

ಅಂತಿಮ ಪಂದ್ಯದಲ್ಲಿ ನಾವು ಅದ್ಭುತ ಪ್ರದರ್ಶನ ನೀಡಿ ಟ್ರೋಫಿ ಗೆದ್ದಿರುವುದು ಖುಷಿ ನೀಡಿದೆ: ಶ್ರೇಯಸ್ ಅಯ್ಯರ್

ಅಂತಿಮ ಪಂದ್ಯದಲ್ಲಿ ನಾವು ಅದ್ಭುತ ಪ್ರದರ್ಶನ ನೀಡಿ ಟ್ರೋಫಿ ಗೆದ್ದಿರುವುದು ಖುಷಿ ನೀಡಿದೆ: ಶ್ರೇಯಸ್ ಅಯ್ಯರ್

IPL 2024: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಬಗ್ಗು ಬಡಿದು ಕೆಕೆಆರ್ ಗೆಲುವಿನ ಕೇಕೆ ಹಾಕಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 18.3 ಓವರ್​ಗಳಲ್ಲಿ ಕೇವಲ 113 ರನ್​ಗಳಿಸಿ ಆಲೌಟ್ ಆಗಿದ್ದು,ಈ ಅಮೋಘ ಗೆಲುವಿನ ಬಳಿಕ ಮಾತನಾಡಿದ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್, ನಮ್ಮ ತಂಡವು ಸಾಂಘಿಕ ಪ್ರದರ್ಶನದಿಂದಾಗಿ ಚಾಂಪಿಯನ್ ಪಟ್ಟಕ್ಕೇರಿದೆ. ಇಲ್ಲಿ ಪ್ರತಿಯೊಬ್ಬರೂ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಹೀಗಾಗಿ ಈ ಗೆಲುವಿನ ಶ್ರೇಯಸ್ಸು ಎಲ್ಲರಿಗೂ ಸಲ್ಲುತ್ತದೆ ಎಂದಿದ್ದಾರೆ.

ಈ ಟೂರ್ನಿಯುದ್ದಕ್ಕೂ ಸನ್​ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಪ್ರದರ್ಶನವನ್ನೇ ನೀಡಿದೆ. ಎಸ್​ಆರ್​ಹೆಚ್ ತಂಡ ಆಡಿದ ರೀತಿಗೂ ನಾವು ಧನ್ಯವಾದ ಹೇಳಲೇಬೇಕು. ಏಕೆಂದರೆ ಅವರು ಉತ್ತಮ ಪೈಪೋಟಿ ನೀಡುತ್ತಾ ಬಂದಿದ್ದರು. ಇದಾಗ್ಯೂ ಅಂತಿಮ ಪಂದ್ಯದಲ್ಲಿ ನಾವು ಅದ್ಭುತ ಪ್ರದರ್ಶನ ನೀಡಿ ಟ್ರೋಫಿ ಗೆದ್ದಿರುವುದು ಖುಷಿ ನೀಡಿದೆ ಎಂದಿದ್ದಾರೆ.

ಈ ಚಿಟ್​ಚಾಟ್ ನಡುವೆ, ಶ್ರೇಯಸ್ ಅಯ್ಯರ್ ಹೇಳಿದ ಮಾತೊಂದು ಎಲ್ಲರ ಗಮನ ಸೆಳೆಯಿತು. ಅಂದರೆ ಫೈನಲ್ ಪಂದ್ಯಕ್ಕಿಂತ ನಾವು ಪ್ರಶಸ್ತಿ ಪಡೆಯಲು ಹೆಚ್ಚು ಕಾದೆವು ಎಂಬುದು. ಈ ಪಂದ್ಯದಲ್ಲಿ ಎಸ್​​ಆರ್​ಹೆಚ್ ನೀಡಿ 114 ರನ್​ಗಳ ಗುರಿಯನ್ನು ಕೆಕೆಆರ್ ತಂಡ ಕೇವಲ 72 ನಿಮಿಷಗಳಲ್ಲಿ ಚೇಸ್ ಮಾಡಿದ್ದರು.

ಆದರೆ ಪ್ರಶಸ್ತಿ ಪಡೆಯಲು 90 ನಿಮಿಷಗಳವರೆಗೆ ಕಾಯಬೇಕಾಯಿತು. ಸಮಾರೋಪ ಸಮಾರಂಭದ ಸಿದ್ಧತೆಗಳು ವಿಳಂಬವಾದ ಕಾರಣ, ಪ್ರಶಸ್ತಿ ನೀಡಲು ತಡವಾಯಿತು. ಇದನ್ನೇ ಪ್ರಸ್ತಾಪಿಸಿ ಪಂದ್ಯಕ್ಕಿಂತ ಹೆಚ್ಚು ಹೊತ್ತು ಪ್ರಶಸ್ತಿಗೆ ಕಾಯಿಸಿದ್ರು ಎನ್ನುವ ಮೂಲಕ ಶ್ರೇಯಸ್ ಅಯ್ಯರ್ ಎಲ್ಲರ ಮುಖದಲ್ಲಿ ನಗು ಮೂಡಿಸಿದರು.

114 ರನ್​ಗಳ ಸುಲಭ ಗುರಿಯನ್ನು 2 ವಿಕೆಟ್ ಕಳೆದುಕೊಂಡು 10.3 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಐಪಿಎಲ್​ನಲ್ಲಿ ಕೆಕೆಆರ್ ತಂಡ ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಇದಕ್ಕೂ ಮುನ್ನ 2012 ಮತ್ತು 2014 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.