This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Sports News

ಸುನಿಲ್ ಛೆಟ್ರಿ ಬಗ್ಗೆ ವಿರಾಟ್ ಕೊಹ್ಲಿ ಕಾಮೆಂಟ್: ಮೈ ಬದ್ರರ್, ನಿನ್ನ ಬಗ್ಗೆ ಹೆಮ್ಮೆಯಿದೆ

ಸುನಿಲ್ ಛೆಟ್ರಿ ಬಗ್ಗೆ ವಿರಾಟ್ ಕೊಹ್ಲಿ ಕಾಮೆಂಟ್: ಮೈ ಬದ್ರರ್, ನಿನ್ನ ಬಗ್ಗೆ ಹೆಮ್ಮೆಯಿದೆ

ಜೂನ್ 6 ರಂದು ನಡೆಯಲಿರುವ ಕುವೈತ್ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕೆರಿಯರ್​ಗೆ ವಿದಾಯ ಹೇಳುತ್ತಿರುವುದಾಗಿ 39 ವರ್ಷದ ಛೆಟ್ರಿ ತಿಳಿಸಿದರು.

ಸುನಿಲ್ ಛೆಟ್ರಿಯ ನಿವೃತ್ತಿ ಘೋಷಣೆಯ ವಿಡಿಯೋಗೆ, ಮೈ ಬದ್ರರ್, ನಿನ್ನ ಬಗ್ಗೆ ಹೆಮ್ಮೆಯಿದೆ ಎಂದು ವಿರಾಟ್ ಕೊಹ್ಲಿ ಹಾರ್ಟ್​ ಎಮೋಜಿ ಹೊಂದಿರುವ ಕಾಮೆಂಟ್ ಹಾಕಿದ್ದಾರೆ. ಇದೀಗ ಕಿಂಗ್ ಕೊಹ್ಲಿಯ ಕಾಮೆಂಟ್ ವೈರಲ್ ಆಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಅಂದಹಾಗೆ ವಿರಾಟ್ ಕೊಹ್ಲಿ ಹಾಗೂ ಸುನಿಲ್ ಛೆಟ್ರಿ ಉತ್ತಮ ಸ್ನೇಹಿತರು. ಈ ಹಿಂದೆ ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದು, ಕಳೆದ ಸೀಸನ್ ಐಪಿಎಲ್ ವೇಳೆ ಸುನಿಲ್ ಛೆಟ್ರಿ ಆರ್​ಸಿಬಿ ಕ್ಯಾಂಪ್​ನಲ್ಲಿ ಕಾಣಿಸಿಕೊಂಡಿದ್ದರು.

ಈ ವೇಳೆ ಮಾತನಾಡಿದ ಸುನಿಲ್ ಛೆಟ್ರಿ, ನಾನು ಸಹ ಬೆಂಗಳೂರು ಫುಟ್​ಬಾಲ್ ಕ್ಲಬ್​ನ ಆಟಗಾರ. ಬಿಎಫ್​ಸಿ ಜೊತೆ ಆಡಲಾರಂಭಿಸಿದಾಗಿನಿಂದ ನಾನು ಆರ್​ಸಿಬಿಯನ್ನು ಬೆಂಬಲಿಸುತ್ತಾ ಬಂದಿದ್ದೇನೆ. ಬೆಂಗಳೂರು ನಮ್ಮ ನಗರ. ಅಂದ್ರೆ ಬೆಂಗಳೂರಿನ ತಂಡ ನಮ್ಮದಲ್ಲವೇ ಎಂದು ನಾನು ಸಹ ಆರ್​ಸಿಬಿ ಅಭಿಮಾನಿ ಎಂಬುದನ್ನು ಬಹಿರಂಗಪಡಿಸಿದ್ದರು.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸುನಿಲ್ ಛೆಟ್ರಿ, ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದು, ಪಾದಾರ್ಪಣೆ ಪಂದ್ಯದ ಅನುಭವ, ಸಂತೋಷವನ್ನು ಹಂಚಿಕೊಂಡಿದ್ದು, ಈ ಭಾವನಾತ್ಮಕ ವಿಡಿಯೋಗೆ ಟೀಮ್ ಇಂಡಿಯಾ ಲೆಜೆಂಡ್ ವಿರಾಟ್ ಕೊಹ್ಲಿ ಕಾಮೆಂಟ್ ಮಾಡಿರುವುದು ವಿಶೇಷ ಎಂದು ಮಾಹಿತಿ ಬೆಳಕಿಗೆ ಬಂದಿದೆ.